ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಹೊಸ ಪ್ರಕರಣಗಳು ತುಸು ಇಳಿಕೆಯಾಗಿವೆ. ಗುರುವಾರ 153 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 175 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ 1,777 ಸೋಂಕಿತರು ಆಸ್ಪತ್ರೆ ಅಥವಾ ಮನೆಯ ಆರೈಕೆಯಲ್ಲಿದ್ದಾರೆ. ಪಾಸಿಟಿವ್ ದರ ಶೇ.0.8ರಷ್ಟಿದೆ.
ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಂದು ನಿನ್ನೆಗೆ ಹೋಲಿಸಿದರೆ, ಕಡಿಮೆಯಾಗಿದೆ. (ಬುಧವಾರ 208 ಪ್ರಕರಣಗಳು, ಸಾವು ಶೂನ್ಯ) ಬೆಂಗಳೂರು 142, ದಕ್ಷಿಣ ಕನ್ನಡ 6, ಶಿವಮೊಗ್ಗ 2, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಹಾಗೂ ಉಡುಪಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
24 ಜಿಲ್ಲೆಗಳಲ್ಲಿ ಪತ್ತೆಯಾಗದ ಸೋಂಕು: 24 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಕಳೆದ ವಾರ 150ರ ಆಸುಪಾಸಿನಲ್ಲಿಯೇ ಇದ್ದ ಹೊಸ ಪ್ರಕರಣಗಳು. ಬುಧವಾರ ಏಕಾಏಕಿ 200 ಗಡಿ ದಾಟಿದ್ದವು. ಮೇ.18 ರಿಂದ ಸತತ ಎಂಟನೇ ದಿನ ಸೋಂಕಿಗೆ ಯಾರೂ ಬಲಿಯಾಗಿಲ್ಲ. ರಾಜ್ಯದ ಈವರೆಗಿನ ಅಂಕಿ ಅಂಶ: ರಾಜ್ಯದಲ್ಲಿ ಈವರೆಗೆ 29.49 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.09 ಲಕ್ಷ ಮಂದಿ ಗುಣಮುಖರಾಗಿದ್ದು, 40,068 ಮಂದಿ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಸಿದ್ಧರಾಮಯ್ಯನವರೇ ನಿಮಗೆ ಎರಡನೇ ಬಾರಿ ಸಿಎಂ ಮಾಡಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ