ETV Bharat / state

ಹೆಣ್ಣುಮಕ್ಕಳಿಗಾಗಿ ಎಲ್ಲಾ ಠಾಣೆಗಳಲ್ಲೂ ಸದ್ಯದಲ್ಲೇ ಬರಲಿದೆ ಮಹಿಳಾ ಡೆಸ್ಕ್..!

ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಉಪಯುಕ್ತವಾಗುವ ಹಾಗೆ ಪ್ರತೀ ಠಾಣೆಗಳಲ್ಲೂ ಪ್ರತ್ಯೇಕವಾಗಿ ಮಹಿಳಾ ಡೆಸ್ಕ್​ ತೆರೆಯಲು ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ.

DCP Isha Pant
ಡಿಸಿಪಿ ಇಶಾ ಪಂತ್
author img

By

Published : Oct 26, 2020, 5:01 PM IST

ಬೆಂಗಳೂರು: ಅತ್ಯಾಚಾರ ಪ್ರಕರಣ, ಪತಿ ಪತ್ನಿ‌ ಕಲಹ, ಲೈಂಗಿಕ ದೌರ್ಜನ್ಯ ಈ ರೀತಿ ಸಮಸ್ಯೆಯಾದಾಗ ಮೊದಲು ನೆನಪಿಗೆ ಬರೋದು ಪೊಲೀಸ್ ಸ್ಟೇಷನ್. ಆದ್ರೆ ಸ್ಟೇಷನ್​ನಲ್ಲಿ ನಿಜಕ್ಕೂ ಎಲ್ಲಾ ಮಾಹಿತಿ ನೀಡಿ ದೂರು ನೀಡೋಕೆ ಆಗುತ್ತಾ ? ಈ ರೀತಿ ಸಾಕಷ್ಟು ಮಹಿಳೆಯರು ಒಳಗೊಳಗೆ ಒದ್ದಾಡಿ ದೂರು ಕೊಡದೆ ಸುಮ್ಮನಿರುವ ಅದೆಷ್ಟೋ ಉದಾಹರಣೆಗಳು ಸಿಗುತ್ತದೆ. ಆದ್ರೆ ಸದ್ಯ ಈ ಭಯಕ್ಕೆಲ್ಲಾ ಬ್ರೇಕ್ ಹಾಕೋಕೆ ಅಂತ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಅದೇ ಮಹಿಳಾ ಡೆಸ್ಕ್ ಮೂಲಕ.

ಹೌದು, ಮಹಿಳಾ ಡೆಸ್ಕ್​ಗೆ ಔಟ್ ಸೋರ್ಸ್ ಮೂಲಕ ಕೆಲ‌ ಮಹಿಳೆಯರನ್ನ ನೇಮಕ ಮಾಡಿ ಬೆಂಗಳೂರಿನಲ್ಲಿರುವ ಎಲ್ಲಾ ಠಾಣೆಗಳಲ್ಲೂ ಮಹಿಳಾ ಡೆಸ್ಕ್ ತೆರೆಯಲು ತಯಾರಿ ನಡೆಸಲಾಗಿದ್ದು, ಮಹಿಳಾ ಡೆಸ್ಕ್ ನಲ್ಲಿ ಓರ್ವ ಮಹಿಳೆ ಕೂತಿರ್ತಾರೆ. ಇವರ ಬಳಿ ಮುಕ್ತವಾಗಿ ಏನೆಲ್ಲಾ ಸಮಸ್ಯೆ ಆಗಿದೆ ಅನ್ನೋದನ್ನ ಬಿಡಿಸಿ ಹೇಳಬಹುದು ಹಾಗೆ ಪುರುಷ ಇನ್ಸ್​ಪೆಕ್ಟರ್​ ಅಥವಾ ಸಿಬ್ಬಂದಿ ಇದ್ರೆ ಅವರ ಬಳಿ ದೂರು ಕೊಡೋದು ಕಷ್ಟ ಅಂತ ಕೆಲ ಮಹಿಳೆಯರು ಮಹಿಳಾ ಅಧಿಕಾರಿಗಳಿಗೆ ತಿಳಿಸಿದ್ರು. ಇದೆಲ್ಲವನ್ನ ಮನಗಂಡ ಕಮಾಂಡ್ ಸೆಂಟರ್ ಡಿಸಿಪಿ ಇಶಾ ಪಂತ್ ಮಹಿಳೆಯರ ಈ ಸಮಸ್ಯೆಗೆ ಪರಿಹಾರವೆಂಬಂತೆ ಮಹಿಳಾ ಡೆಸ್ಕ್ ತೆರೆಯಲು ನಿರ್ಧರಿಸಿದ್ದಾರೆ.

ಡಿಸಿಪಿ ಇಶಾ ಪಂತ್ ಹೇಳುವ ಪ್ರಕಾರ‌ ಸ್ಟೇಷನ್​ಗೆ ಬಂದು ದೂರು ನೀಡೋದು ಕೂಡ ಈಗ ಮಹಿಳೆಯರಿಗೆ ಕಷ್ಟವಾಗಿದೆ. ಕೆಲವೊಮ್ಮೆ ಸೆನ್ಸಿಟಿವ್ ವಿಚಾರ ಇದ್ದಾಗ ಠಾಣೆಯಲ್ಲಿ ಪುರುಷ ಇನ್ಸ್​ಪೆಕ್ಟರ್ ಇರ್ತಾರೆ ಅವರ ಬಳಿ ನೇರವಾಗಿ ಭೇಟಿ ಮಾಡಿ ದೂರು ನೀಡೋಕೆ ಆಗಲ್ಲ ಹೀಗಾಗಿ ಮಹಿಳಾ ಡೆಸ್ಕ್ ಅಂತ್ಹೇಳಿ ಪ್ರಾಜೆಕ್ಟ್ ತಂದಿದ್ದು ಇದನ್ನ ಸರ್ಕಾರಕ್ಕೆ ಕಳಿಸಲಾಗಿದೆ. ಸರ್ಕಾರದ ಮೂಲಕ ಸಹ ಇದಕ್ಕೆ ಅನುಮತಿ ನೀಡಲಾಗಿದ್ದು ಸದ್ಯದಲ್ಲೇ ಮಹಿಳಾ ಡೆಸ್ಕ್ ತೆರೆಯಲಾಗುತ್ತೆ ಎಂದರು.

ಮಹಿಳಾ ಡೆಸ್ಕ್ ಬಗ್ಗೆ ಪ್ರಾಜೆಕ್ಟ್ ಪ್ರೆಸೆಂಟೇಷನ್ ಓಕೆ ಆಗಿದ್ದು ನಿರ್ಭಯಾ ಯೋಜನೆ ಅಡಿಯಲ್ಲಿ ಫಂಡ್ ರಿಲೀಸ್ ಮಾಡಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮುಂದಿನ ವರ್ಷವೇ ಎಲ್ಲಾ ಠಾಣೆಗಳಲ್ಲೂ ಮಹಿಳಾ ಡೆಸ್ಕ್ ಇರಲಿದ್ದು, ಮಹಿಳೆಯರು ಮುಕ್ತವಾಗಿ ಅಂದ್ರೆ ಅತ್ಯಾಚಾರ ಪ್ರಕರಣ, ಲೈಂಗಿಕ ದೌರ್ಜನ್ಯ ಪ್ರಕರಣ, ದಿನನಿತ್ಯ ಆಗುವ ಪತಿ ಪತ್ನಿ ಕಲಹದ ಬಗ್ಗೆ ಡೆಸ್ಕ್ ನಲ್ಲಿರುವ ಮಹಿಳೆಗೆ ನೀಡಿದ್ರೆ ಅವರು ಠಾಣೆಯ ಇನ್ಸ್​ಪೆಕ್ಟರ್​ಗೆ ತಲುಪಿಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.