ETV Bharat / state

ಬಿಡಿಎ ಬಡಾವಣೆಗಳಲ್ಲಿ ಪಾರ್ಕ್ ಬದಲಿಗೆ ಕಿರು ಅರಣ್ಯ ಬೆಳೆಸಲು ನಿರ್ಧಾರ

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನೇತೃತ್ವದ ಮಂಡಳಿ ಸಭೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರದ ವಿಷನ್ 2022 ಕ್ಕೆ ಪೂರಕವಾಗಿ ಇನ್ನು ಮುಂದೆ ಬಿಡಿಎ ತನ್ನ ಸ್ವಂತ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..

banglore
ಮಂಡಳಿ ಸಭೆ
author img

By

Published : Dec 19, 2020, 10:24 AM IST

ಬೆಂಗಳೂರು : ನಗರದ ಬಿಡಿಎ ಬಡಾವಣೆಗಳಲ್ಲಿ ಇನ್ಮುಂದೆ ಉದ್ಯಾನವನಕ್ಕೆ ಬದಲಾಗಿ ಕಿರು ಅರಣ್ಯ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಹಸಿರೀಕರಣಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರದ ವಿಷನ್ 2022ಕ್ಕೆ ಪೂರಕವಾಗಿ ಇನ್ನು ಮುಂದೆ ಬಿಡಿಎ ತನ್ನ ಸ್ವಂತ ಬಡಾವಣೆಗಳು ಮತ್ತು ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ನೇತೃತ್ವದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಹಲವು ಅಕ್ರಮ ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವುದು, ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸ್ವಲ್ಪ ರಿಲೀಫ್ ನೀಡುವುದು.

ಈ ಹಿಂದೆ ಸರ್ಕಾರ ನಿರ್ಧಾರ ಮಾಡಿರುವಂತೆ 12 ವರ್ಷಗಳ ಹಿಂದಿಗಿಂತಲೂ ಮುನ್ನ ನಿರ್ಮಾಣ ಮಾಡಿಕೊಂಡಿರುವ ಮನೆಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ ಎಂಬ ವಿಚಾರ ಸೇರಿದಂತೆ ಇನ್ನಿತರೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್

ಸಭೆಯ ನಂತರ ಮಾತನಾಡಿದ ಬಿಡಿಎ ಅಧ್ಯಕ್ಷ, ರಾಜ್ಯ ಸರ್ಕಾರ ಹಸಿರು ಪರಿಸರಕ್ಕೆ ಒತ್ತು ನೀಡಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಯೊಂದನ್ನು ವಿಷನ್ 2022ರಲ್ಲಿ ಪ್ರಸ್ತಾಪ ಮಾಡಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಬಿಡಿಎ ಇನ್ನು ಮುಂದೆ ಅನುಮೋದನೆ ನೀಡುವ ಮತ್ತು ತನ್ನದೇ ಆದ ಬಡಾವಣೆಗಳಲ್ಲಿ ಕಿರು ಅರಣ್ಯ ಬೆಳೆಸುವುದನ್ನು ಕಡ್ಡಾಯಗೊಳಿಸಲಿದೆ ಎಂದರು.

ಕಿರು ಅರಣ್ಯ ಯೋಜನೆ ಹೇಗಿರಲಿದೆ?: ಈವರೆಗೆ ಬಡಾವಣೆಗಳಲ್ಲಿ ಉದ್ಯಾನಗಳನ್ನು ನಿರ್ಮಿಸಿ ಅದರ ನಿರ್ವಹಣೆಗೆಂದು ಪ್ರತಿವರ್ಷ ಪ್ರತ್ಯೇಕ ಸಿಬ್ಬಂದಿ ಮತ್ತು ಹಣವನ್ನು ವೆಚ್ಚ ಮಾಡಬೇಕಿತ್ತು. ಉದ್ಯಾನಗಳಿಗೆ ಲಾನ್, ಅಲಂಕಾರಿಕ ಗಿಡಗಳಿಗೆ ಹೆಚ್ಚಿನ ಹಣ ಭರಿಸುವುದು, ಪ್ರತಿದಿನ ನೀರು, ಗೊಬ್ಬರ ಆರೈಕೆ ಮಾಡಲೆಂದು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು. ಇದನ್ನು ತಪ್ಪಿಸುವುದು ಮತ್ತು ಸಾರ್ವಜನಿಕರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಕಿರು ಅರಣ್ಯ ಅಭಿವೃದ್ಧಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಒಂದೆರಡು ವರ್ಷಗಳ ನಿರ್ವಹಣೆ, ನೈಸರ್ಗಿಕ ಬೆಳವಣಿಗೆ, ಬಡಾವಣೆ ಅಭಿವೃದ್ಧಿ ಹಂತದಲ್ಲಿಯೇ ಕೆಲವು ಸಸಿಗಳನ್ನು ನೆಟ್ಟರೆ ಬಡಾವಣೆಯಲ್ಲಿ ಮನೆಗಳು ನಿರ್ಮಾಣವಾಗುವ ವೇಳೆಗೆ ಕಿರು ಅರಣ್ಯ ಬೆಳೆಯಲಿದೆ. ಬಿಲ್ಡರ್ ಅಥವಾ ಬಿಡಿಎ ಸಿಬ್ಬಂದಿ ಕೇವಲ ಎರಡು ವರ್ಷಗಳವರೆಗೆ ಈ ಸಸಿಗಳಿಗೆ ನೀರು-ಗೊಬ್ಬರ ಕೊಟ್ಟರೆ ಸಾಕು, ಬೆಳೆದ ನಂತರದ ವರ್ಷಗಳಲ್ಲಿ ನೈಸರ್ಗಿಕವಾಗಿ ಬೆಳವಣಿಗೆ ಹೊಂದುತ್ತವೆ ಎಂದು ವಿಶ್ವನಾಥ್ ತಿಳಿಸಿದರು.

ಓದಿ: ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಸರ್ಕಾರದ ಮಾರ್ಗಸೂಚಿ.. ಹೀಗೆ ಮಾಡಿ, ಹಾಗೆ ಮಾಡ್ಬೇಡಿ..

ಈ ಕಿರು ಅರಣ್ಯದಲ್ಲಿ ಮಾವು, ಬೇವು, ಹೊಂಗೆ ಸೇರಿದಂತೆ ಇನ್ನಿತರೆ ತಂಪನ್ನೀಡುವ ಮರಗಳನ್ನು ಬೆಳೆಸಲಾಗುತ್ತದೆ. ಜನರಿಗೆ ವಾಕ್ ಮಾಡಲು ಹಾಗೂ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ತನಿಖಾ ತಂಡಕ್ಕೆ ಅಕ್ರಮಗಳು ನಕಲಿ ದಾಖಲೆ ಸೃಷ್ಟಿಸಿ ಬಿಡಿಎಯಿಂದ ಪರಿಹಾರ ಪಡೆದಿರುವ ಪ್ರಕರಣಗಳು ಮತ್ತು ಮೂಲೆ ನಿವೇಶನಗಳನ್ನು ಸಾಮಾನ್ಯ ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿರುವ ಜಾಲ ಸೇರಿದಂತೆ ಇನ್ನಿತರೆ ಅಕ್ರಮ ಪ್ರಕರಣಗಳನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ನಿರ್ಧರಿಸಿದೆ.

ಈ ಸಂಬಂಧ ಬಿಡಿಎಯಿಂದ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸಲಿದ್ದು, ಆದಷ್ಟೂ ಬೇಗ ತನಿಖೆ ಆರಂಭವಾಗಲಿದೆ ಎಂದರು‌. 30x40 ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಂಡವರು ಮಾರ್ಗದರ್ಶಿ ದರದ ಶೇ.25ರಷ್ಟು ಪಾವತಿ ಮಾಡಿದ್ರೆ ಆ ಜಾಗವನ್ನು ಅವರಿಗೆ ವರ್ಗಾಯಿಸಲಾಗುತ್ತದೆ.

ಹೀಗೆ 20x30, 60x40 ಮತ್ತು 50x80 ವರೆಗಿನ ಮನೆಗಳಿಗೆ ಮಾತ್ರ ಈ ಯೋಜನೆ ಇರುತ್ತದೆ. ಆಯಾ ಅಳತೆಗೆ ತಕ್ಕಂತೆ ಶೇಕಡಾವಾರು ಹಣವನ್ನು ನಿಗದಿ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಸಭೆಯಲ್ಲಿ ಆಯುಕ್ತ ಡಾ.ಮಹದೇವ್ ಮತ್ತು ಕಾರ್ಯದರ್ಶಿ ವಾಸಂತಿ ಅಮರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.