ಬೆಂಗಳೂರು: ಕೊರೊನಾ ಕಾರಣಕ್ಕೆ ಹಲವು ಮನಕಲಕುವ ಘಟನೆಗಳು ನಡೆಯುತ್ತಿವೆ. ಅಂದಹಾಗೆ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದಾಗಿ ಸರಿಯಾದ ಸಮಯಕ್ಕೆ ಕೋವಿಡ್ ಅಲ್ಲದ ಕಾಯಿಲೆಗಳಿಗೆ ಚಿಕಿತ್ಸೆಗೆ ಸಿಗದೇ ಮೃತಪಡುತ್ತಿದ್ದಾರೆ. ಅಂತಹದ್ದೇ ಘಟನೆಯು ಶಂಕರಮಠ - 75 ರ ಜೆ.ಸಿ.ನಗರ, ಕುರುಬರಹಳ್ಳಿಯಲ್ಲಿ ನಡೆದಿದೆ.
75 ವರ್ಷದ ವೃದ್ಧ ನಾನ್ ಕೋವಿಡ್ ಅನಾರೋಗ್ಯ ಕಾರಣದಿಂದ ಬಳಲುತ್ತಿದ್ದರು. ಆದರೆ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೆ ಅಸುನೀಗಿದ್ದಾರೆ. ಗಂಡನ ಸಾವನ್ನು ನೋಡಿದ ವೃದ್ಧ ಪತ್ನಿ, ಗಂಡ ಸತ್ತ 20 ನಿಮಿಷದ ನಂತರ ಮೃತಪಟ್ಟಿದ್ದಾರೆ.
ಐದು ದಶಕ ಸಂಸಾರ ಜೀವನ ನಡೆಸಿ ಸಾವಿನಲ್ಲೂ ಸಹ ಒಂದಾದ ವೃದ್ದ ದಂಪತಿಯ ಸುದ್ದಿ ನಿಜಕ್ಕೂ ಮನಕಲುಕುವ ಸಂಗತಿಯಾಗಿದೆ. ಇದೇ ವೇಳೆ ಬಿಬಿಎಂಪಿ ಸದಸ್ಯ ಎಮ್. ಶಿವರಾಜು ಅಂತಿಮ ದರ್ಶನ ಪಡೆದು ,ಶ್ರದ್ಧಾಂಜಲಿ ಸಲ್ಲಿಸಿದರು.