ETV Bharat / state

ಮಲ್ಲೇಶ್ವರದ ಗೋಕಾಕ್ ಚಳವಳಿ ಉದ್ಯಾನವನದಲ್ಲಿ ಉಚಿತ ವೈಫೈಗೆ ಡಿಸಿಎಂ ಚಾಲನೆ - Free WiFi at Sankey Lake Park

ಬೆಂಗಳೂರಿನ ಸ್ಯಾಂಕಿ ಕೆರೆ ಬಳಿಯ ಉದ್ಯಾನವನಕ್ಕೆ ಹೈಟೆಕ್​ ಟಚ್​ ನೀಡಲಾಗಿದ್ದು, ಉಚಿತ ವೈಫೈ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ರಜಾ ದಿನಗಳಲ್ಲಿ ಚಿತ್ರ ರಚನೆ, ಕಥೆ ಹೇಳುವುದು, ನಟನೆ ಕಲಿಕೆ, ಮಡಿಕೆ ಮಾಡುವುದು ಸೇರಿ ಹಲವು ಕಲೆಗಳನ್ನು ಕಲಿಸಲಾಗುತ್ತದೆ.

dsd
ಗೋಕಾಕ್ ಚಳವಳಿ ಉದ್ಯಾನವನದಲ್ಲಿ ಉಚಿತ ವೈಫೈಗೆ ಡಿಸಿಎಂ ಚಾಲನೆ
author img

By

Published : Nov 2, 2020, 7:57 AM IST

ಬೆಂಗಳೂರು: ಮಲ್ಲೇಶ್ವರದ ಸ್ಯಾಂಕಿ ಕೆರೆ ಸಮೀಪದಲ್ಲಿ ಗೋಕಾಕ್ ಚಳವಳಿಯ ಸ್ಮರಣಾರ್ಥ ವೃತ್ತದ ಉದ್ಯಾನವನದಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಆ್ಯಕ್ಟ್‌ ಫೈಬರ್‌ ನೆಟ್‌ ವತಿಯಿಂದ ನೀಡಲಾಗುತ್ತಿರುವ ಉಚಿತ ವೈಫೈ ವ್ಯವಸ್ಥೆಗೆ ಚಾಲನೆ ನೀಡಿದರು.

ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆ್ಯಕ್ಟ್‌ ಫೈಬರ್‌ನೆಟ್‌ ಉಪಕ್ರಮವನ್ನು ಶ್ಲಾಘಿಸಿದರು. ಮತ್ತಷ್ಟು ಖಾಸಗಿಯವರು ಮುಂದೆ ಬಂದು ಇನ್ನಷ್ಟು ಉದ್ಯಾನವನಗಳನ್ನು ನಿರ್ವಹಿಸಬೇಕು. ಆಗ ಉದ್ಯಾನಗಳು ಮತ್ತಷ್ಟು ನಳನಳಿಸುತ್ತಾ ನಗರಕ್ಕಿರುವ ʼಉದ್ಯಾನವನಗಳ ನಗರಿʼ ಎಂಬ ಹೆಸರು ಸಾರ್ಥಕವಾಗುತ್ತದೆ ಎಂದರು.

ಉದ್ಯಾನವನದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನವಿರಬೇಕು ಹಾಗೂ ಕನ್ನಡವೇ ಆಡಳಿತ ಹಲವಾರು ಆಕೃತಿಗಳು, ಫಲಕಗಳನ್ನು ಅಳವಡಿಸಲಾಗಿದೆ. ಕನ್ನಡಿಗರಿಗೆ ಇಷ್ಟವಾಗುವುದರ ಜತೆಗೆ ಇತಿಹಾಸಕಾರರಿಗೂ ಹೇಳಿ ಮಾಡಿಸಿದ ಅಧ್ಯಯನ ತಾಣವಾಗಿದೆ. ವಾಯು ವಿಹಾರಕ್ಕೆ ಬರುವವರಿಗೆ ಉಚಿತ ವೈಫೈ ನೀಡಲಾಗುತ್ತಿದ್ದು, ಅದರ ವೇಗ 100 ಎಂಬಿಪಿಎಸ್‌ ಇರುತ್ತದೆ. ಇದೀಗ ಉದ್ಯಾನವನದ ನಿರ್ವಹಣೆಯನ್ನು ಬಿಬಿಎಂಪಿಯಿಂದ ಆ್ಯಕ್ಟ್‌ ಫೈಬರ್‌ನೆಟ್‌ ಸಂಸ್ಥೆಗೆ ವಹಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.