ಬೆಂಗಳೂರು: ರಾಮ ಮಂದಿರ ನಿಧಿ ಸಂಗ್ರಹವನ್ನು ಪುಂಡ ಪೋಕರಿಗಳು ಮಾಡುತ್ತಿಲ್ಲ. ಸಂಗ್ರಹವಾಗುತ್ತಿರುವ ಪ್ರತಿ ಪೈಸೆಗೂ ಲೆಕ್ಕವಿದೆ, ಪಾರದರ್ಶಕತೆ ಇದೆ. ಅನಗತ್ಯವಾಗಿ ಜನರ ದಿಕ್ಕು ತಪ್ಪಿಸಿ ಗೊಂದಲ ಉಂಟು ಮಾಡುವುದು ಬೇಡ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ.
ಸರ್ಕಾರಿ ಕಲಾ ಕಾಲೇಜಿನಲ್ಲಿ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಕುಮಾರಸ್ವಾಮಿ ಮೊದಲು ಕನ್ನಡಿ ಮುಂದೆ ನಿಂತು ತಮ್ಮನ್ನು ತಾವು ನೋಡಿಕೊಳ್ಳಲಿ. ಯಾರು ಹೇಗೆ ಎನ್ನುವುದು ಗೊತ್ತಾಗುತ್ತದೆ. ಯಾವ ರೀತಿ ಇವರು ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ, ಯಾವ ರೀತಿ ಬದುಕಿ ಬಾಳಿದ್ದಾರೆ ಅಂತ ಗೊತ್ತಾಗುತ್ತದೆ.
ಇನ್ನು ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಎಲ್ಲ ಸಮುದಾಯಗಳು ಕೇಳುವುದು ಸಹಜ. ವೈಜ್ಞಾನಿಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಯಾರಿಗೆ ಮೀಸಲು ಸೌಲಭ್ಯ ಸಿಗಬೇಕೋ ಅವರಿಗೆ ನೀಡಲು ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಪ್ರಯತ್ನ ಮಾಡಲಿದೆ ಎಂದರು.