ETV Bharat / state

ನಾನೂ ಸೇರಿದಂತೆ ಸಚಿವರುಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್​

ನೇರವಾಗಿ ನಾನು ಸೇರಿ ಯಾರೂ ಬಹಿರಂಗವಾಗಿ ಮಾತನಾಡುವುದು ಬೇಡ. ಅದು ಪಕ್ಷವನ್ನು, ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತದೆ ಎಂದು ಸಿಎಂ ಸೂಚನೆ ನೀಡಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್​ ತಿಳಿಸಿದರು.

Etv Bharatdcm-dk-shivakumar-reaction-over-congress-leaders-public-statement-issue
ನಾನೂ ಸೇರಿದಂತೆ ಸಚಿವರಿಗಳಿಗೆ ಬಹಿರಂಗ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ: ಡಿಸಿಎಂ ಡಿ ಕೆ ಶಿವಕುಮಾರ್​
author img

By ETV Bharat Karnataka Team

Published : Nov 4, 2023, 3:57 PM IST

Updated : Nov 4, 2023, 4:43 PM IST

ಡಿಸಿಎಂ ಡಿ ಕೆ ಶಿವಕುಮಾರ್​ ಪ್ರತಿಕ್ರಿಯೆ

ಬೆಂಗಳೂರು: "ನಾನು ಸೇರಿದಂತೆ ಯಾರೂ ಬಹಿರಂಗ ಹೇಳಿಕೆ ನೀಡದಿರುವಂತೆ ಸಚಿವರಿಗೆ ಸಿಎಂ ಎಚ್ಚರಿಕೆ ನೀಡಿದ್ದಾರೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸಿಎಂ ನಿವಾಸದಲ್ಲಿ ಸಚಿವರ ಜೊತೆ ಸಭೆ ಬಳಿಕ ಮಾತನಾಡಿದ ಅವರು, "ನಾವು ಈಗಾಗಲೇ ಬಹಿರಂಗ ಹೇಳಿಕೆ ನೀಡದಂತೆ ವಾರ್ನಿಂಗ್ ಕೊಟ್ಟಿದ್ದೆವು‌. ನೇರವಾಗಿ ನಾನು ಸೇರಿ ಯಾರೂ ಬಹಿರಂಗವಾಗಿ ಮಾತನಾಡುವುದು ಬೇಡ. ಅದು ಪಕ್ಷವನ್ನು, ಸರ್ಕಾರವನ್ನು ಪೇಚಿಗೆ ಸಿಲುಕಿಸುತ್ತದೆ. ಮಾಧ್ಯಮದವರ ಟ್ರ್ಯಾಪ್​ಗೆ ಬೀಳಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ" ಎಂದರು.

"ಯಾವ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡುವುದು ಬೇಡ. ಐದು ವರ್ಷ ಜನ‌ ನಮಗೆ ಅಧಿಕಾರ ಕೊಟ್ಟಿದ್ದಾರೆ. ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಅವುಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಹೇಳಿದ್ದೇವೆ‌. ಬಹಿರಂಗ ಹೇಳಿಕೆಗಳಿಂದ ಅವರ ಭವಿಷ್ಯ ಹಾಳು ಮಾಡಿಕೊಳ್ಳುವುದು ಬೇಡ. ಪಕ್ಷದ ಭವಿಷ್ಯ ಕೂಡ ಹಾಳು ಮಾಡುವುದು ಬೇಡ" ಎಂದು ತಿಳಿಸಿದರು.

ಸಚಿವರಿಗೆ ಟಾಸ್ಕ್ ಕೊಟ್ಟಿದ್ದೇವೆ: "ಲೋಕಸಭೆ ಚುನಾವಣೆ ಸಂಬಂಧ ಆಕಾಂಕ್ಷಿಗಳ ಅಭ್ಯರ್ಥಿಗಳ ಪಟ್ಟಿ ಸಂಬಂಧ ನಾವು ಜಿಲ್ಲಾವಾರು ಪ್ಯಾನಲ್ ಮಾಡಲು ಸಚಿವರಿಗೆ ಹೇಳಿದ್ದೆವು‌. ಕೆಲವರು ಆಕಾಂಕ್ಷಿ ಅಭ್ಯರ್ಥಿಗಳ ಪಟ್ಟಿ ಕೊಟ್ಟಿದ್ದಾರೆ. ಇನ್ನೂ ಕೆಲವರು ವರದಿ ನಮಗೆ ಕೊಟ್ಟಿಲ್ಲ. ಅವರು ಆಕಾಂಕ್ಷಿಗಳ ಪಟ್ಟಿ ಕೊಟ್ಟ ಬಳಿಕ‌ ನಾವು ಸರ್ವೆ ಮಾಡಿಸಬೇಕು. ಮತದಾರರ ನಾಡಿಮಿಡಿತ ಪರೀಕ್ಷೆ ಮಾಡಿಸಬೇಕು. ಅದಕ್ಕೆ‌ ಸಚಿವರಿಗೆ ಸೂಚನೆ ನೀಡಿದ್ದೇವೆ" ಎಂದರು.

"ಸಚಿವರಿಗೆ ಟಾಸ್ಕ್ ಕೊಟ್ಟಿದ್ದೇವೆ. ಲೋಕಸಭಾ ಚುನಾವಣೆ ಸಂಬಂಧ ಸಚಿವರುಗಳಿಗೆ ಅವರ ಉಸ್ತುವಾರಿ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದೇವೆ. ಈ ವಾರದಲ್ಲಿ ವರದಿ ಕೊಡಲು ಹೇಳಿದ್ದೇವೆ. ಬಳಿಕ ಸರ್ವೆ ಮಾಡಿಸುತ್ತೇವೆ. ಜನವರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅಭ್ಯರ್ಥಿಗಳಿಗೆ ಕೆಲಸ ಮಾಡಲು ಸೂಚನೆ ನೀಡಲಿದ್ದೇವೆ" ಎಂದು ಹೇಳಿದರು.

ಬಿ ರಿಪೋರ್ಟ್ ಕೊಡುವ ಕಾಲ ಬರುತ್ತೆ: "ತನಿಖೆಗೆ ನೋಟಿಸ್​ ನೀಡಲಾಗಿದೆಯಾ ಎಂಬ ಬಗ್ಗೆ ಪ್ರತಿಕ್ರಿಯಿಸಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಎಲ್ಲಾ ದಾಖಲೆ ನಿಮ್ಮ ಬಳಿಯೂ ಇದೆ. ಅದೆಲ್ಲಾ ಪಬ್ಲಿಕ್ ದಾಖಲೆಗಳು. ನಾನು ಅಸೆಸ್ಸೀ, ನನ್ನ ಪತ್ನಿಯೂ ಅಸೆಸ್ಸೀ. ನೀವೇ ಲೆಕ್ಕ ಹಾಕಿ. ನಾನು ಹೆಚ್ಚಿಗೆ ಆಸ್ತಿ ಗಳಿಸಿದ್ದೇನಾ ಎಂದು ನೀವೇ ನೋಡಿ.‌ ಕಾನೂನು ಇಲಾಖೆನೇ ಇದು ಯೋಗ್ಯ ಪ್ರಕರಣ ಅಲ್ಲ ಎಂದು ಶಿಫಾರಸು ಮಾಡಿತ್ತು. ಆದರೆ, ಯಡಿಯೂರಪ್ಪ ಸರ್ಕಾರ ಅಂದು ಸಿಬಿಐಗೆ ತನಿಖೆಗೆ ಕೊಟ್ಟಿದ್ದಾರೆ. ನೋಟಿಸ್​ ಕೊಡಲಿ ನಾನು ಉತ್ತರ ಕೊಡುತ್ತೇನೆ. ಆದರೆ ಬಿ ರಿಪೋರ್ಟ್ ಕೊಡುವ ಕಾಲ ಬರುತ್ತದೆ" ಎಂದು ತಿಳಿಸಿದರು.

"ಬಿಜೆಪಿ ಬರ ಪ್ರವಾಸದ ಬಗ್ಗೆ ಮಾತನಾಡಿದ ಅವರು, ನಾವೆಲ್ಲ ಬರದ ಟೂರ್ ಮಾಡಿ ಸರ್ಕಾರಕ್ಕೆ ವರದಿ ಮಾಡಿದ್ದೇವೆ. ಈಗ ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ. ಮೊದಲು ಕೇಂದ್ರದಿಂದ ಹಣ ಕೊಡಿಸಲಿ" ಎಂದು ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದರು.

ಇದನ್ನೂ ಓದಿ: ಸಿಎಂ ಹುದ್ದೆ ವಿಚಾರವಾಗಿ ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವುದಿಲ್ಲ: ಸಚಿವ ಪರಮೇಶ್ವರ್

Last Updated : Nov 4, 2023, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.