ETV Bharat / state

ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗಿಷ್ಟವಿಲ್ಲ: ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ - ಈಟಿವಿ ಭಾರತ್​ ಕನ್ನಡ ನ್ಯೂಸ್

ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟವಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ.ಕೆ ಶಿವಕುಮಾರ್​
ಡಿಸಿಎಂ ಡಿ.ಕೆ ಶಿವಕುಮಾರ್​
author img

By

Published : Jun 5, 2023, 8:15 PM IST

Updated : Jun 5, 2023, 8:27 PM IST

ಐಎಫ್‍ಎಸ್ ಅಧಿಕಾರಿಗೆ ಡಿಕೆ ಶಿವಕುಮಾರ್​ ಫುಲ್​ ಕ್ಲಾಸ್

ಬೆಂಗಳೂರು : ನಗರದ ಬ್ಯಾಟರಾಯನಪುರದ ರಾಚೇನಹಳ್ಳಿ ಕೆರೆ ಉದ್ಯಾನವನದಲ್ಲಿ ಇಂದು ವಿಶ್ವ ಪರಿಸರ ದಿನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಪಾರ್ಕ್ ಮಧ್ಯೆ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅಲ್ಲಿದ್ದ ಮಹಿಳಾ ಐಎಫ್‍ಎಸ್ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.

ಗಿಡ ನೆಡುವ ಸಂದರ್ಭದಲ್ಲಿ ಪಾಲಿಕೆ ಅರಣ್ಯ ವಿಭಾಗದ ಐಎಫ್‍ಎಸ್ ಅಧಿಕಾರಿ ಸರಿನಾ ಸಿಕ್ಕಲಿಗಾರ್ ಅವರು ಕೈಗೊಂಡಿದ್ದ ಕಾರ್ಯದ ಬಗ್ಗೆ ಡಿಕೆಶಿ​ ಅಸಮಾಧಾನ ಹೊರಹಾಕಿದರು. ಕಾಮನ್ ಸೆನ್ಸ್ ಇರಬೇಕು. ಎಲ್ಲಿ ಗಿಡ ನಡಬೇಕು, ಎಲ್ಲಿ ನೆಡಬಾರದು ಎನ್ನುವುದು ಗೊತ್ತಾಗುವುದಿಲ್ಲವೇ. ನಿಮ್ಮ ಕೆಲಸ ಸರಿಯಿಲ್ಲ, ಬದಲಾಯಿಸಿಕೊಳ್ಳಿ. ಇಂದು ನನ್ನ ಕೈಯಲ್ಲಿ ಗಿಡ ನೆಡಿಸಿದ್ದೀರಿ. ಇದು ಸಂಪೂರ್ಣ ಅವೈಜ್ಞಾನಿಕ. ಕೇವಲ ಫೋಟೋಗೆ ಪೋಸ್ ಕೊಡಲು ಗಿಡ ನೆಡುವುದು ನನಗೆ ಇಷ್ಟವಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕರ್ನಾಟಕದಲ್ಲಿ ಶೀಘ್ರವೇ ವಾಕ್ ಸ್ವಾತಂತ್ರ್ಯ ಮೊಟಕು ಆಗಲಿದೆ: ಮಾಜಿ ಸಿಎಂ ಬೊಮ್ಮಾಯಿ ಗರಂ

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಮಾದ : ಬಳಿಕ ವೇದಿಕೆ ತಮ್ಮ ಭಾಷಣದಲ್ಲೂ ಬೇಸರ ವ್ಯಕ್ತಪಡಿಸಿದ ಡಿಕೆಶಿ, ಅರಣ್ಯ ಇಲಾಖೆಯವರು ನನ್ನ ಕೈಯಲ್ಲಿ ಪಾರ್ಕ್‌ನಲ್ಲಿ ಮರದ ಸಸಿ ಹಾಕಿಸಿದ್ದಾರೆ. ಇದು ತಪ್ಪು, ಸಸಿಯನ್ನು ಪಾರ್ಕ್‍ನಲ್ಲಿ ಹಾಕಿಸುವುದಲ್ಲ. ಅದರಲ್ಲೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ರೀತಿ ಪ್ರಮಾದ ಮಾಡಬಾರದು. ಪಾರ್ಕ್​ನಲ್ಲಿ ಚೆನ್ನಾಗಿರುವ ಜಾಗದಲ್ಲಿ ಗಿಡ ಹಾಕಿಸುವುದಲ್ಲ. ಎಲ್ಲಿ ಖಾಲಿ ಇದಿಯೋ ಆ ಜಾಗದಲ್ಲಿ ಗಿಡ ನೆಡಬೇಕು ಎಂದು ಹೇಳಿದರು.

ಮಕ್ಕಳ ಹೆಸರಿಟ್ಟರೆ ಒಳ್ಳೆಯದು : ಗಿಡ ಹಾಕಬೇಕಾದರೆ ಯೋಚನೆ ಮಾಡಬೇಕು. ಗಿಡಕ್ಕೆ ನನ್ನ ಹೆಸರು, ಕೃಷ್ಣ ಬೈರೇಗೌಡರ ಹೆಸರು ಹಾಕಿದ್ದೀರಾ. ಗಿಡಗಳಿಗೆ ಏಕೆ ನಮ್ಮ ಹೆಸರು ಇಟ್ಟಿದ್ದೀರಿ. ನಾವು ಬಂದು ಗಿಡ ನೋಡಿಕೊಳ್ಳುತ್ತೇವಾ? ಅದರ ಬದಲಿಗೆ ಶಾಲಾ ಮಕ್ಕಳ ಹೆಸರಿಡಿ. ಪಾರ್ಕ್‍ಗಳಿಗಿಂತ ಹೆಚ್ಚಾಗಿ ರಸ್ತೆ ಸೇರಿದಂತೆ ಖಾಲಿ ಜಾಗದಲ್ಲಿ ಗಿಡ ಹಾಕಿ. ಮಕ್ಕಳು ಗಿಡಗಳನ್ನು ನೋಡಿಕೊಳ್ಳುತ್ತಾರೆ ಎಂದರು.

ನಾವು ಮಾಡುವ ಕೆಲಸ ಶಾಶ್ವತವಾಗಿ ಇರಬೇಕೇ ಹೊರತು ತೋರಿಕೆಗೆ ಇರಬಾರದು. ಮರ ಇರುವ ಕಡೆ ಗಿಡ ನೆಡಿಸುವುದಲ್ಲ. ಮರ ಇಲ್ಲದ ಕಡೆ ಗಿಡ ನೆಡಿಸಬೇಕು. ಎಷ್ಟು ಅಂತರಕ್ಕೆ ಗಿಡ ಹಾಕಬೇಕು. ಯಾವ ಗಿಡ ನೆಡಬೇಕು ಎನ್ನುವುದು ಗೊತ್ತಿರಬೇಕು. ನಾನು ನನ್ನ ಊರಿನಲ್ಲಿ ಗಿಡಗಳನ್ನು ಬೆಳೆಸಿದ್ದೇನೆ. ಹೇಗೆ ಬೆಳೆಸಬೇಕು ಎನ್ನುವುದು ನನಗೆ ಗೊತ್ತಿದೆ. ಸುಮ್ಮನೆ ತೋರಿಕೆಗೆ ಪರಿಸರ ದಿನ ಆಚರಣೆ ಮಾಡುವುದು ಬಿಡಿ ಎಂದು ಅಧಿಕಾರಿಗಳಿಗೆ ಫುಲ್​ ಕ್ಲಾಸ್​ ತೆಗೆದುಕೊಂಡರು.

ಇದನ್ನೂ ಓದಿ : ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಬೆಳೆಸುವ ಜವಾಬ್ದಾರಿಯನ್ನೂ ಅವರಿಗೆ ನೀಡಿ: ಡಿ.ಕೆ.ಶಿವಕುಮಾರ್

Last Updated : Jun 5, 2023, 8:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.