ಬೆಂಗಳೂರು: ಹಳೆಯ ವಿಷಯಗಳನ್ನ ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂತಹ ಕೆಲಸವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂತಹ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಹೇಳಿದ್ದಾರೆ.
ನಮ್ಮ ಸಹಿಷ್ಣುತೆ, ಶಾಂತಿ ಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸೌಧ, ಎಜುಕೇಶನ್ ಸಂಸ್ಥೆಗಳು, ನೀರಾವರಿ ವ್ಯವಸ್ಥೆ ಬೆಳಗಾವಿ ಭಾಗದಲ್ಲಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಎಲ್ಲಾ ಭಾಷಿಕರು ಒಟ್ಟಾಗಿ ಬಾಳುತ್ತಿದ್ದೇವೆ. ಮಹಾರಾಷ್ಟ್ರದಲ್ಲೂ ಕನ್ನಡ ಅಭಿವೃದ್ಧಿ ನಿಗಮ ಮಾಡಲಿ ಎಂದು ಒತ್ತಾಯಿಸಿದರು.
ಓದಿ: ಮಹಾಜನ್ ವರದಿ ಅಂತಿಮ: ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡ್ಬೇಡಿ ಎಂದ ಸಚಿವ ಗೋಪಾಲಯ್ಯ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆಯನ್ನು ಸಂಪೂರ್ಣ ಖಂಡಿಸುತ್ತೇವೆ. ಇದು ಒಕ್ಕೂಟ ವ್ಯವಸ್ಥೆ. ಇಲ್ಲಿ ಗಡಿ ಭಾಗದ ಬಗ್ಗೆ ಹಲವಾರು ಕಮಿಷನ್ ಹೇಳಿವೆ. ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹೀಗೆ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ. ನಾವು ಭಾರತೀಯರು, ಈ ರೀತಿಯಲ್ಲಿ ಹೇಳಿಕೆ ಕೊಡಬೇಡಿ ಎಂದರು.
ಮಹಾರಾಷ್ಟ್ರ ಒಂದು ದೊಡ್ಡ ಭಾಗ. ನಿಮ್ಮ ಆಡಳಿತ ಬೇರೆಯವರಿಗೆ ಉದಾಹರಣೆ ಆಗಲಿ. ಜನರ ವಿಶ್ವಾಸವನ್ನು ನಿಮ್ಮ ಕೆಲಸದ ಮೂಲಕ ಮಾಡಿ ಎಂದು ಸಲಹೆ ನೀಡಿದರು. ಸಿಎಂ ಸ್ಥಾನದಲ್ಲಿ ಇರುವವರು ಈ ರೀತಿಯಲ್ಲಿ ಹೇಳಿಕೆ ಕೊಡಬಾರದು. ನಾಡಿನ ಸಮಸ್ತ ನಾಯಕರು ಇದರ ಬಗ್ಗೆ ಮಾತಾಡಬೇಕು. ಎಲ್ಲಾ ನಮ್ಮವರೆ ಎಲ್ಲಾ ಕನ್ನಡಿಗರೆ. ಎಲ್ಲವೂ ಮಹಾಜನ್ ಕಮಿಷನ್ ಮೂಲಕ ಹೇಳಿದೆ. ಜನರ ಗಮನ ಬೆರೆ ಕಡೆ ಸೆಳೆಯುವ ಉದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದರು.