ETV Bharat / state

‘ಆವಿಷ್ಕಾರದ ಹರಿಕಾರ’ ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಆಶ್ವತ್ಥ ನಾರಾಯಣ - ಡಿಸಿಎಂ ಅಶ್ವತ್ಥ್ ನಾರಾಯಣ್

ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ʼಆವಿಷ್ಕಾರದ ಹರಿಕಾರʼ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದು, ಆ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಕೃತಿಯಲ್ಲಿ ಇಸ್ರೇಲ್‌ ದೇಶದ ಬೆಳವಣಿಗೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.

DCM Ashwathth Narayan released book Avishkarda Harikara
‘ಆವಿಷ್ಕಾರದ ಹರಿಕಾರ’ ಕೃತಿ ಲೋಕಾರ್ಪಣೆ ಮಾಡಿದ ಡಿಸಿಎಂ ಆಶ್ವತ್ಥ್ ನಾರಾಯಣ್
author img

By

Published : Jan 22, 2021, 9:07 PM IST

ಬೆಂಗಳೂರು: ಖ್ಯಾತ ಲೇಖಕ ಅವಿ ಜೂರಿಚ್‌ ಇಂಗ್ಲಿಷ್‌ನಲ್ಲಿ ಬರೆದಿರುವ ‘Thou Shalt Innovate’ ಕೃತಿಯ ಕನ್ನಡ ಅನುವಾದ ಕೃತಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ​ ನಾರಾಯಣ ಬಿಡುಗಡೆ ಮಾಡಿದರು.

ವಿಧಾನಸೌಧದಲ್ಲಿ ಕೃತಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಅನೇಕ ಗಣ್ಯರು ಭಾಗಿಯಾಗಿದ್ದರು. ವಿಶ್ವೇಶ್ವರ ಭಟ್‌ ಅವರು ʼಆವಿಷ್ಕಾರದ ಹರಿಕಾರʼ ಹೆಸರಿನಲ್ಲಿ ಕನ್ನಡಕ್ಕೆ ಇಂಗ್ಲಿಷ್ ಕೃತಿಯನ್ನು ಅನುವಾದ ಮಾಡಿದ್ದು, ಆ ಕೃತಿಯನ್ನು ಲೋಕಾರ್ಪಣೆ ಮಾಡಿದರು.

ಕೃತಿ ಬಿಡುಗಡೆ ನಂತರ ಮಾತನಾಡಿದ ಅಶ್ವತ್ಥ ನಾರಾಯಣ, ಕೇವಲ 70 ಲಕ್ಷ ಜನರನ್ನು ಒಳಗೊಂಡಿರುವ ಇಸ್ರೇಲ್ ದೇಶ ಕೇವಲ ಸೈಬರ್ ಭದ್ರತೆಯಲ್ಲಿ 150 ಮಿಲಿಯನ್ ಡಾಲರ್ ಆದಾಯವನ್ನೂ ಗಳಿಸುತ್ತಿದೆ. ಇಲ್ಲಿ ಸಹ ಸ್ಟಾರ್ಟ್​​​ಅಪ್​​ಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ.

ದೇಶದ ಕಾಳಜಿ ಹಾಗೂ ಸಮಾಜದ ಮೇಲಿನ ಕಳಕಳಿಯನ್ನು ನಾನು ಅಪಾರವಾಗಿ ಮೆಚ್ಚುತ್ತೇನೆ. ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಮುನ್ನೂರು ಪ್ರತಿಯನ್ನು ಉಚಿತವಾಗಿ ವಿತರಿಸಿದ್ದಾರೆ ಎಂಬ ಮಾಹಿತಿ ಕೇಳಿ ಸಂತಸ ಉಂಟಾಗಿದೆ ಎಂದರು.

ಈ ಕೃತಿಯಲ್ಲಿ ಇಸ್ರೇಲ್‌ ದೇಶದ ಬೆಳವಣಿಗೆಯನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ. ಆವಿಷ್ಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ಯುವ ಜನರಿಗೆ ಕೃತಿ ದಾರಿದೀಪವಾಗುತ್ತದೆ ಎಂದು ಇದೇ ವೇಳೆ ವಿಶ್ವೇಶ್ವರ ಭಟ್‌ ಹೇಳಿದರು.

ಇದನ್ನೂ ಓದಿ: ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಗೆ ಹಲ್ಲೆ: ಶಾಸಕಿ ಸೌಮ್ಯರೆಡ್ಡಿ ವಿರುದ್ಧ ಎಫ್​​ಐಆರ್ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.