ಬೆಂಗಳೂರು: ತಾಯಿ ಮೊಬೈಲ್ ಕೊಟ್ಟಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದ ಮಗಳ ಕಣ್ಣುಗಳನ್ನು ದಾನ ಮಾಡುವ ಮೂಲಕ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಪ್ರಿಯಾಂಕ ಕಣ್ಣುಗಳನ್ನ ಲಯನ್ಸ್ ಕ್ಲಬ್ಗೆ ಆಕೆಯ ಪೋಷಕರು ದಾನವಾಗಿ ನೀಡಿದ್ದಾರೆ. ಹನುಮಂತ ನಗರದ 9ನೇ ರಸ್ತೆಯ ಬಳಿ ಪ್ರಿಯಾಂಕ (16) ತನ್ನ ತಂದೆ- ತಾಯಿ ಜೊತೆ ವಾಸವಾಗಿದ್ದರು. ನಿನ್ನೆ ಸಂಜೆ ಸ್ನೇಹಿತೆ ಮನೆಗೆ ಹೋಗುವಾಗ ಮೊಬೈಲ್ ತೆಗೆದುಕೊಂಡಿದ್ದಳು.
ಈ ವೇಳೆ ಪ್ರಿಯಾಂಕ ತಾಯಿ ಮೊಬೈಲ್ ತೆಗೆದುಕೊಂಡು ಹೋಗದಂತೆ ಬುದ್ಧಿವಾದ ಹೇಳಿದ್ದರು. ಇದೇ ವಿಚಾರಕ್ಕೆ ತಾಯಿಯೊಂದಿಗೆ ಸಣ್ಣ ಜಗಳ ಮಾಡಿಕೊಂಡಿದ್ದ ಪ್ರಿಯಾಂಕ, ಮೊಬೈಲ್ ಕೊಡಲಿಲ್ಲ ಅಂತ ಸ್ನೇಹಿತೆ ಮನೆಗೆ ಹೋಗದೆ, ತಾಯಿ ದೇವಸ್ಥಾನಕ್ಕೆ ಹೋಗಿದ್ದಾಗ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು.
ಅಮ್ಮ ಮೊಬೈಲ್ ಕೊಟ್ಟಿಲ್ಲ ಎಂಬ ಕೋಪ; ಬೆಂಗಳೂರಿನಲ್ಲಿ ನೇಣಿಗೆ ಶರಣಾದ ಬಾಲಕಿ!
ತನಿಖೆಯಲ್ಲಿ ಬಯಲು:
ಇದಕ್ಕೆ ಸಂಬಂಧಿಸಿದಂತೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಪೊಲೀಸರು ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಾಗ ಸ್ನೇಹಿತೆ ಜೊತೆ ಟಿಕ್ ಟಾಕ್ ನೋಡಬೇಕು, ಮೊಬೈಲ್ ಕೊಡು ಅಂತಾ ತಾಯಿ ಜೊತೆ ಪ್ರಿಯಾಂಕ ಕೇಳಿದ್ದಳು. ಈ ವೇಳೆ ತಾಯಿ ಮೊಬೈಲ್ ಕೊಡಲ್ಲ ರೂಮ್ಗೆ ಹೋಗಿ ಓದಿಕೋ ಎಂದಿದ್ದರು. ಪ್ರಿಯಾಂಕಗೆ ಮೊಬೈಲ್ನಲ್ಲಿ ಯಾವಾಗಲೂ ಟಿಕ್-ಟಾಕ್ ಆಪ್ ವೀಕ್ಷಿಸುವ ಗೀಳು ಜಾಸ್ತಿ ಇತ್ತು. ತಾಯಿ ಎಷ್ಟೇ ಬುದ್ಧಿವಾದ ಹೇಳಿದ್ರು ಕೇಳದ ಕಾರಣ ನಿನ್ನೆ ಮೊಬೈಲ್ ಕಸಿದುಕೊಂಡಿದ್ದರು. ಬಳಿಕ ಆತ್ಮಹತ್ಯೆಗೆ ಪ್ರಿಯಾಂಕ ಶರಣಾಗಿದ್ದಾಳೆ ಎನ್ನಲಾಗಿದೆ.