ETV Bharat / state

ಗುರೂಜಿ ಗೋಲ್ವಾಲ್ಕರ್ ಸಮಗ್ರ ಸನಾತನ ಧರ್ಮದ ಚಿಂತಕರಾಗಿದ್ದರು: ದತ್ತಾತ್ರೇಯ ಹೊಸಬಾಳೆ - etv bharat karnataka

ಇತಿಹಾಸದಲ್ಲಿ ಹಿಂದೂ ಸಮಾಜ ಸ್ವಾರ್ಥ, ಲಾಲಸೆಯಿಂದ ಕತ್ತಲೆಯೆಡೆ ಸಾಗಿತ್ತು. ಅದನ್ನು ಸಾಕಷ್ಟು ಮಹನೀಯರು ಶ್ರಮಿಸಿ ತೊಡೆದು ಹಾಕಿದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

Etv Bharatdattatreya-hosabale-reaction-on-guruji-golwalkar
ಗುರೂಜಿ ಗೋಲ್ವಾಲ್ಕರ್ ಸಮಗ್ರ ಸನಾತನ ಧರ್ಮದ ಚಿಂತಕರಾಗಿದ್ದರು: ದತ್ತಾತ್ರೇಯ ಹೊಸಬಾಳೆ
author img

By ETV Bharat Karnataka Team

Published : Dec 5, 2023, 6:02 AM IST

ಬೆಂಗಳೂರು: ಗುರೂಜಿ ಗೋಲ್ವಾಲ್ಕರ್ ಅವರು ಶಾಶ್ವತ ಸಮಗ್ರ ಸನಾತನ ಧರ್ಮದ ಚಿಂತಕರಾಗಿದ್ದರು. ದೇಶದ ಏಕತೆಯನ್ನು ಪ್ರತಿಪಾದಿಸುತ್ತಾ ಬದುಕಿದರು. ಶ್ರೇಷ್ಠ ಜೀವನ ಅವರದ್ದಾಗಿತ್ತು. ಸಮಗ್ರ ಹಿಂದೂ ಸಮಾಜ ಕೆಲ ನಡವಳಿಕೆಯನ್ನು ತಿದ್ದಿಕೊಂಡು ನಡೆಯಬೇಕು. ಋಗ್ವೇದ, ಅಥರ್ವ ವೇದದಲ್ಲಿ ಸಮಾನತೆ ಸಾಮರಸ್ಯ ಅಡಕವಾಗಿದೆ. ಇದನ್ನು ಮನಗೊಂಡು ನೆಡೆಯಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ(ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಹೇಳಿದರು.

Dattatreya Hosabale reaction on Guruji Golwalkar
ನೂ‌ರ್ ಅಹಮದ್ ಅಲಿ ಖಾನ್ ದತ್ತಿ ಉಪನ್ಯಾಸ

ನೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿಯಲ್ಲಿ ನೂ‌ರ್ ಅಹಮದ್ ಅಲಿ ಖಾನ್ ದತ್ತಿ ಉಪನ್ಯಾಸದಲ್ಲಿ "ಗುರೂಜಿ ಗೊಲ್ವಾಲ್ಕರ್ ಮತ್ತು ಹಿಂದೂ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯತೆ" ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ ಅಸಂಖ್ಯ ಜನರು ಅಸ್ಪೃಶ್ಯತೆ ತೊಡೆದು ಹಾಕಲು ಶ್ರಮಿಸಿದರು. ಕರ್ನಾಟಕದಲ್ಲಿ ಬಸವಣ್ಣ ಈ ನಿಟ್ಟಿನಲ್ಲಿ ಕೆಲಸ ಮಾಡಿದ ಮಹಾನ್ ಮಾನವತಾವಾದಿಯಾಗಿದ್ದಾರೆ. ಕೆಲ ಕಡೆ ಇನ್ನೂ ಕೆಟ್ಟ ಆಚರಣೆ ಜಾರಿಯಲ್ಲಿದ್ದು, ಅದಕ್ಕೆ ಹಿಂದೂ ಸಮಾಜ ಪರಿಹಾರಕ್ಕೆ ಮುಂದಾಗಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು. ಇದು ಗುರೂಜಿ ಅವರ ಚಿಂತನೆಯೂ ಆಗಿತ್ತು ಎಂದು ಹೇಳಿದರು.

ದತ್ತಾತ್ರೇಯ ಹೊಸಬಾಳೆ

ಇತಿಹಾಸದಲ್ಲಿ ಹಿಂದೂ ಸಮಾಜ ಸ್ವಾರ್ಥ, ಲಾಲಸೆಯಿಂದ ಕತ್ತಲೆಯೆಡೆ ಸಾಗಿತ್ತು. ಅದನ್ನು ಸಾಕಷ್ಟು ಮಹನೀಯರು ಶ್ರಮಿಸಿ ತೊಡೆದು ಹಾಕಿದರು. ನಮ್ಮ ಪೂರ್ವಜರು ಮತ್ತೊಮ್ಮೆ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಂಡಿದ್ದರಿಂದ ಸನಾತನ ಧರ್ಮ ಪುನರುತ್ತಾನ ಕಂಡಿತು. ಆದರ್ಶ ಸಮಾಜ ಏಕಾತ್ಮತೆಯಿಂದ ಕೊಡ್ಡಿದ್ದು, ಅದು ಇಲ್ಲದಿದ್ದರೆ ಒಳ್ಳೆಯ ಚಿಂತನೆಗಳು ಹೊರಬರಲು ಸಾಧ್ಯವಿಲ್ಲ. ಆಧ್ಯಾತ್ಮಿಕ ತಳಹದಿ ಇಲ್ಲದಿದ್ದರೆ ಸಮಾನತೆಯೂ ಇರುವುದಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿತ್ತು ಎಂದರು.

ಸಾಮರಸ್ಯ ಗುರೂಜಿಯವರ ಜೀವನ ಪದ್ಧತಿಯಾಗಿತ್ತು. ಆದರೆ, ಜಾತಿಯ ಬೇಲಿಗಳು ಈಗಿನ ಸಮಾಜ ಹೆಚ್ಚಾಗುತ್ತಿರುವುದು ವಿಷಾದನೀಯ, ಹುಟ್ಟಿನಿಂದ ಆಗುತ್ತಿರುವ ಈ ವ್ಯವಸ್ಥೆ ತಪ್ಪಾಗಿದೆ. ನಮ್ಮಲ್ಲಿ ವರ್ಣ ವ್ಯವಸ್ಥೆ ಇತ್ತೆ ಹೊರತು ಜಾತಿ ವ್ಯವಸ್ಥೆ ಇರಲ್ಲಿಲ್ಲ ಅದು ಶ್ರೇಣೀಕೃತ ವ್ಯವಸ್ಥೆಯಾಗಿ ಸಾಮಾಜಿಕ ಆರ್ಥಿಕ ಪಿಡುಗಿಗೆ ಕಾರಣವಾಗಿದ್ದು ದೌರ್ಭಾಗ್ಯದ ಸಂಗತಿಯಾಗಿದೆ ಇದು ಗುರೂಜಿಯವರ ಚಿಂತನೆಗೆ ತದ್ವಿರುದ್ದವಾಗಿದೆ ಎಂದು ತಿಳಿಸಿದರು.

ನಮ್ಮಲ್ಲಿ ಧರ್ಮದ ಕಲ್ಪನೆ ತಪ್ಪಾಗಿ ಅರ್ಥೈಸಲಾಗಿದೆ. ಅದು ಸಮಾಜದ ಸುಧಾರಣೆಗೆ ಮಾರಕವಾಗಿ ಪರಿಣಮಿಸುತ್ತಿದೆ. ಪ್ರಕೃತಿಯ ವಿವಿಧತೆಯನ್ನು ಸಮಾನವಾಗಿ ಕಾಣುತ್ತಿದ್ದೇವೆ. ಆದರೆ, ವ್ಯವಸ್ಥೆಯಲ್ಲಿ ಅದನ್ನು ಅಳವಡಸಿಕೊಳ್ಳುವುದನ್ನು ಮಾಡದೆ ಸೋತಿದ್ದೇವೆ. ವಿಕಾಸದ ಹಾದಿಯಲ್ಲಿ ವರ್ಣ ವ್ಯವಸ್ಥೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಜಾತಿಯನ್ನು ಹೆಚ್ಚು ಎಂದು ಭಾವಿಸಿ ಮುನ್ನಡೆದಿರುವುದು ಅಸಮಾನತೆಗೆ ಕಾರಣವಾಗಿದೆ. ವರ್ಣ ವ್ಯವಸ್ಥೆ ಕೂಡ ಕಾಲಬಾಹಿರವಾಗಿದೆ ಎಂದು ಗುರೂಜಿ ಸಂಘದ ಕಾರ್ಯಕರ್ತರಿಗೂ ಹಲವು ಸಂದರ್ಭಗಳಲ್ಲಿ ತಿಳಿ ಹೇಳಿದ್ದರು ಎಂದು ನೆನೆದರು.

ಭೌತಿಕ ಆಸೆಯನ್ನು ಬಿಡದೆ ಅರ್ಥ, ಕಾಮಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಂಡು ಮುನ್ನಡೆಯಬೇಕು. ಕುಟುಂಬವನ್ನು ಪೋಷಿಸಿಕೊಂಡು ಸಹಯೋಗ ಮತ್ತು ಸಾಮರಸ್ಯದಿಂದ ಸಮಾಜವನ್ನು ಮುನ್ನಡೆಸಬೇಕು. ಮನುಷ್ಯನ ಸ್ವಾರ್ಥದಿಂದ ಮೂಲ ಉದ್ದೇಶವನ್ನು ಮರೆತು ನಡೆಯಲಾಗಿದೆ. ನಮ್ಮ ಧರ್ಮ ಜಿಡ್ಡುಕಟ್ಟಲು ಸ್ವಾರ್ಥ ಮಾತ್ರ ಕಾರಣವಾಗಿದೆ. ಪ್ರತಿಯೊಬ್ಬರಲ್ಲೂ ಈಶ್ವರ ಇದ್ದಾನೆ ಎನ್ನುವುದನ್ನು ಮರೆತದಿದ್ದರಿಂದ ಅಸ್ಪುರ್ಶ್ಯತೆ ಹುಟ್ಟಿಕೊಂಡಿತು ಎನ್ನುವ ಸ್ವಾಮಿ ವಿವೇಕಾನಂದರ ಚಿಂತೆನೆಯನ್ನು ಗುರೂಜಿ ಮೂದಲಿಸಿದ್ದರು ಎಂದು ಹೇಳಿದರು.

ವೇದಿಕೆಯಲ್ಲಿ ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ಪ್ರೊ. ಕೃ. ನರಹರಿ, ಗೌರವ ಕಾರ್ಯದರ್ಶಿ ವಿ. ನಾಗರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಆರೋಗ್ಯ ವಿಚಾರಿಸಿದ ವಿಜಯೇಂದ್ರ; ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.