ಬೆಂಗಳೂರು: ಮಹಾನಗರದಿಂದ ನಿನ್ನೆ ತೆರಳಿರುವ ವಲಸೆ ಕಾರ್ಮಿಕರನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಬರಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ನಾಯಕರಿಗೆ ಕರೆ ಕೊಟ್ಟಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು ಪಕ್ಷದ ಎಲ್ಲಾ ಡಿಸಿಸಿ ಅಧ್ಯಕ್ಷರು, ಶಾಸಕರು, 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ, ಜಿಲ್ಲಾ ಮುಖಂಡರಿಗೆ, ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಸಿಲುಕಿದ್ದ ಎಲ್ಲ ಜಿಲ್ಲೆಗಳ ವಲಸೆ ಕಾರ್ಮಿಕರು ಹಾಗೂ ಇತರ ಜನರು ನಿನ್ನೆಯಿಂದ ಬೆಂಗಳೂರು ಕೇಂದ್ರ ಬಸ್ ನಿಲ್ದಾಣದಿಂದ ಹಾಗೂ ಇತರ ಕಡೆಗಳಿಂದ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ. ಅವರುಗಳನ್ನು ತಮ್ಮ ಜಿಲ್ಲೆಯ ಅಥವಾ ತಾಲೂಕು ಬಸ್ ನಿಲ್ದಾಣಗಳಲ್ಲಿ ಬರಮಾಡಿಕೊಂಡು ಅವರುಗಳಿಗೆ ತಾತ್ಕಾಲಿಕ ಊಟ ತಿಂಡಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಅವರವರ ಗ್ರಾಮಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಿಕೊಟ್ಟು ಸಹಾಯ ಮಾಡಬೇಕೆಂದು ಕೋರುತ್ತೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಇದರ ಬಗ್ಗೆ ಏನಾದರೂ ಮಾಹಿತಿಗಳು ಬೇಕಾದಲ್ಲಿ ಕೆಪಿಸಿಸಿ ಸಹಾಯವಾಣಿ ಸಂಪರ್ಕಿಸಿ ಪಡೆದುಕೊಂಡು ಸಹಾಯ ಮಾಡುವುದು ಎಂದು ಕರೆ ಕೊಟ್ಟಿದ್ದಾರೆ. ನಿನ್ನೆ ಪಕ್ಷದ ನಾಯಕರೆಲ್ಲ ತೆರಳಿ ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರ ಆಗುವವರಿಗೆ ತೆರಳಿದ ಬಾಲಕಾರ್ಮಿಕರನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೀಳ್ಕೊಟ್ಟಿದ್ದರು. ಅವರಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಕೂಡ ಮಾಡಿದ್ದರು.