ETV Bharat / state

ಕೆಪಿಸಿಸಿ ನೂತನ ಸಾರಥಿಗೆ ಶುಭಾಶಯಗಳ ಮಹಾಪೂರ

author img

By

Published : Mar 11, 2020, 11:52 PM IST

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್, ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿಕೊಟ್ಟು, ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.

D K Sivakumar elected KPCC president
ಕೆಪಿಸಿಸಿ ನೂತನ ಸಾರಥಿಗೆ ಶುಭಾಶಯಗಳ ಮಹಾಪೂರ

ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಇಂದು ಕೆಲವೆಡೆ ಭೇಟಿ ನೀಡಿ ಹಲವರಿಂದ ಅಭಿನಂದನೆ ಸ್ವೀಕರಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭ ವಿಧಾನಸೌಧದಲ್ಲಿ ಡಿಕೆಶಿ, ಪಕ್ಷದ ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹಲವರಿಂದ ಅಭಿನಂದನೆ ಶುಭಾಶಯ ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡು ವಿಧಾನಸೌಧದಿಂದ ನಿರ್ಗಮಿಸಿದರು.

D K Sivakumar elected KPCC president
ಕೆಪಿಸಿಸಿ ನೂತನ ಸಾರಥಿಗೆ ಶುಭಾಶಯಗಳ ಮಹಾಪೂರ

ನೇರವಾಗಿ ವಿಜಯನಗರ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿಕೊಟ್ಟು, ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳ ಆಶೀರ್ವಾದ ಪಡೆದರು. ಕೆಲಕಾಲ ಶ್ರೀಗಳೊಂದಿಗೆ ಮಾತುಕತೆ ನಡೆಸಿ, ಸದಾಶಿವನಗರ ತಮ್ಮ ನಿವಾಸಕ್ಕೆ ಆಗಮಿಸಿದರು. ಮನೆಯ ಹೊರಗೆ ಕಾದಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ವಾಗತ ಸ್ವೀಕರಿಸಿದ ಬಳಿಕ ಸಂಭ್ರಮದ ಕ್ಷಣವನ್ನು ಕುಟುಂಬ ಸದಸ್ಯರ ಜೊತೆ ಕಳೆದರು.

D K Sivakumar elected KPCC president
ಕೆಪಿಸಿಸಿ ನೂತನ ಸಾರಥಿಗೆ ಶುಭಾಶಯಗಳ ಮಹಾಪೂರ

ಸದಾಶಿವನಗರ ನಿವಾಸದಲ್ಲಿ ಸಂಜೆ ಹಲವು ನಾಯಕರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಭಾಶಯ ಸಲ್ಲಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಸೇರಿದಂತೆ ಹಲವು ನಾಯಕರು ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಭಾಶಯ ಸಲ್ಲಿಸಿದರು.

D K Sivakumar elected KPCC president
ಕೆಪಿಸಿಸಿ ನೂತನ ಸಾರಥಿಗೆ ಶುಭಾಶಯಗಳ ಮಹಾಪೂರ

ಇನ್ನು ತಮ್ಮ ಆಧ್ಯಾತ್ಮಿಕ ತಾಣವಾದ ಅಜ್ಜಯನ ಮಠಕ್ಕೆ ನಾಳೆ ಭೇಟಿ ನೀಡುವ ಸಾಧ್ಯತೆ ಹೆಚ್ಚಿದೆ. ಕೆಪಿಸಿಸಿ ಅಧ್ಯಕ್ಷರಾಗುತ್ತೀರಿ ಎಂದು ಅಜ್ಜಯನ ಮಠದ ಶ್ರೀಗಳೇ ಇವರಿಗೆ ಭರವಸೆ ನೀಡಿದ್ದರು. ಹಲವು ವರ್ಷಗಳಿಂದ ಶ್ರೀಮಠಕ್ಕೆ ಭೇಟಿ ಕೊಟ್ಟು ತಮ್ಮ ನಿರ್ಧಾರಗಳನ್ನು ಪಡೆಯುತ್ತಿದ್ದ, ಮತ್ತು ಹಲವು ವಿಚಾರಗಳಿಗೆ ಇಲ್ಲಿಂದಲೇ ಸಲಹೆ ಪಡೆಯುತ್ತಿದ್ದ ಶಿವಕುಮಾರ್, ಬೆಳಗ್ಗೆ ಇಲ್ಲವೇ ಮಧ್ಯಾಹ್ನದ ಹೊತ್ತಿಗೆ ತುಮಕೂರಿನ ನೊಣವಿನಕೆರೆ ಬಳಿ ಇರುವ ಅಜ್ಜಯನ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.