ETV Bharat / state

ಜೈಪುರಕ್ಕೆ ಭೇಟಿ ನೀಡಿದ ಡಿಕೆಶಿ: ಸಿಎಂ ಗೆಹ್ಲೋಟ್​ಗೆ ಸಹಕಾರದ ಅಭಯ - Rajasthan Chief Minister Ashok Gehlot

ಇಂದು ಮುಖ್ಯಮಂತ್ರಿ ಗೆಹ್ಲೋಟ್ ಭೇಟಿ ಬಳಿಕ ಜಯಪುರದಿಂದ ಸಂಜೆಯೇ ನಿರ್ಗಮಿಸಿರುವ ಡಿ ಕೆ ಶಿವಕುಮಾರ್, ದೆಹಲಿಗೆ ಭೇಟಿ ನೀಡಲಿದ್ದಾರೆ. ಬುಧವಾರ ಬೆಳಗ್ಗೆ ಎಐಸಿಸಿ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.

d-k-shivakumar-visits-to-jaipur-talk-with-ashok-gehlot-about-health
ಗೆಹ್ಲೋಟ್ ಆರೋಗ್ಯ ವಿಚಾರಣೆ ನಡೆಸಿದ ಡಿ ಕೆ ಶಿವಕುಮಾರ್​
author img

By

Published : Aug 3, 2021, 6:52 PM IST

ಜೈಪುರ/ಬೆಂಗಳೂರು: ಕೋವಿಡ್​ನಿಂದ ಚೇತರಿಸಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೈಪುರದಲ್ಲಿ ಮಂಗಳವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.

ವಿಶೇಷ ವಿಮಾನದ ಮೂಲಕ ಇಂದು ಬೆಳಗ್ಗೆ ಜೈಪುರ ತಲುಪಿರುವ ಡಿಕೆಶಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆರೋಗ್ಯ ವಿಚಾರಿಸುವ ಜತೆಗೆ ರಾಜಸ್ಥಾನ ರಾಜಕೀಯ ಗೊಂದಲಗಳ ಕುರಿತು ಸಹ ಮಾತುಕತೆ ನಡೆಸಿದ್ದಾರೆ.

ಯಾವುದೇ ಕಾರಣಕ್ಕೂ ಇಲ್ಲಿನ ಸರ್ಕಾರ ಬೀಳದಂತೆ ತಾವು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಗುಜರಾತ್​ನಲ್ಲಿ ಕಾಂಗ್ರೆಸ್​ಗೆ ಆತಂಕ ಎದುರಾದಾಗ, ಅಲ್ಲಿನ ಶಾಸಕರನ್ನು ತಮ್ಮ ರಾಜ್ಯಕ್ಕೆ ಕರೆಸಿಕೊಂಡಿದ್ದ ಡಿಕೆಶಿ, ಯಾವುದೇ ಸಂದರ್ಭದಲ್ಲೂ ತಾವು ರಾಜಸ್ಥಾನ ಸರ್ಕಾರ ಭದ್ರವಾಗಿಸಲು ಸಹಕಾರಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ.

ರಾಜಸ್ಥಾನ ರಾಜಕೀಯದಲ್ಲಿ ಇತ್ತೀಚೆಗೆ ಗೊಂದಲಗಳು ಹೆಚ್ಚಾಗಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಯುವ ನಾಯಕ ಸಚಿನ್ ಪೈಲಟ್ ನಡುವೆ ಅಂತರ ಹೆಚ್ಚಾಗುತ್ತಿದೆ. ಈ ಹಿಂದೆಯೂ ಒಮ್ಮೆ ಪಕ್ಷ ಇಬ್ಭಾಗಗವಾಗುವ ಹಂತವನ್ನು ತಲುಪಿ ಕ್ಷಣಗಳಲ್ಲಿ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ಇದೀಗ ರಾಜಸ್ಥಾನ ಕಾಂಗ್ರೆಸ್​ನಲ್ಲಿ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಮಧ್ಯೆ ರಾಜಸ್ಥಾನ ಸಂಪುಟ ಪುನಾ​ರಚನೆ ನಡೆಸುವ ಕಸರತ್ತು ಆರಂಭವಾಗಿದೆ. ಈ ಸಂದರ್ಭ ಮತ್ತೊಮ್ಮೆ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಮತ್ತೊಮ್ಮೆ ಹೆಚ್ಚಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ಕಾಂಗ್ರೆಸ್ ಮಾಡಬೇಕಾಗಿದೆ.

ದೆಹಲಿ ಭೇಟಿ

ಇಂದು ಗೆಹ್ಲೋಟ್ ಭೇಟಿ ಬಳಿಕ ಜಯಪುರದಿಂದ ಸಂಜೆಯೇ ನಿರ್ಗಮಿಸುವ ಡಿ ಕೆ ಶಿವಕುಮಾರ್, ದೆಹಲಿಗೆ ತೆರಳಲಿದ್ದಾರೆ. ಬುಧವಾರ ಬೆಳಗ್ಗೆ ಎಐಸಿಸಿ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ರಾಜಸ್ಥಾನ ರಾಜಕೀಯ ವಿದ್ಯಮಾನಗಳ ಕುರಿತು ಗೆಹ್ಲೋಟ್ ಜೊತೆ ನಡೆಸಿದ ಚರ್ಚೆಯ ವಿವರವನ್ನು ಸಲ್ಲಿಸುವ ಜೊತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸಂಘಟನೆ ಹಾಗೂ ಪಕ್ಷ ಬಲವರ್ಧನೆಗೆ ಕೈಗೊಂಡಿರುವ ಕಾರ್ಯಕ್ರಮಗಳ ವರದಿ ಒಪ್ಪಿಸಲಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಈ ಸಂದರ್ಭ ಅವರು ಭೇಟಿಯಾಗುವ ಸಾಧ್ಯತೆ ಇದೆ.

ಓದಿ: ಕೊಬ್ಬರಿ ಬೆಳೆಗಾರರಿಗೆ ಬಂಪರ್.. ಕ್ವಿಂಟಲ್​ಗೆ 17 ಸಾವಿರ ರೂ ಗಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.