ETV Bharat / state

ಕಮಿಷನ್ ಹೊಡೆಯುವುದು ಸಾಕು, ಖಾಸಗಿ ಆಸ್ಪತ್ರೆಗಳ ಬಿಲ್ ಕ್ಲಿಯರ್ ಮಾಡಿ: ಡಿಕೆಶಿ

ವೈದ್ಯರು ಕಮಿಷನ್ ಕೇಳುತ್ತಿರುವ ಬಗ್ಗೆ ಮಾತನಾಡಿರುವ ಬಗ್ಗೆ ರೆಕಾರ್ಡ್ ಇದೆ. ಈಗ ವೈಯಕ್ತಿಕವಾಗಿ ಹೆಸರು ಹೇಳಲ್ಲ. ಹಾಗೆ ಹೇಳಿದರೆ, ಅವರ ಮೇಲೆ ಕೇಸ್ ಹಾಕಿಸುತ್ತಾರೆ. ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

author img

By

Published : Apr 30, 2021, 5:16 PM IST

d-k-shivakumar-alligation-against-minister-sudhakara
ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಡಿ ಕೆ ಶಿವಕುಮಾರ್ ಆರೋಪ

ಬೆಂಗಳೂರು: ಸಚಿವರೇ ಕಮಿಷನ್ ಹೊಡೆದಿದ್ದು ಸಾಕು, ಖಾಸಗಿ ಆಸ್ಪತ್ರೆಗಳ ಬಾಕಿ ಮೊತ್ತವನ್ನು ಪಾವತಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ತಿಂದಿದ್ದು ಸಾಕು. ಮುಂದೆ ತಿನ್ನುವುದೂ ಸಾಕು. ಇನ್ನು ಮುಂದೆ ಜನರ ಕೆಲಸ ಮಾಡಿ. ಖಾಸಗಿ ಆಸ್ಪತ್ರೆಗಳ ಬಾಕಿ ಮೊತ್ತ ತೀರಿಸಿ ಎಂದು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ವೈದ್ಯರು ಕಮಿಷನ್ ಕೇಳುತ್ತಿರುವ ಬಗ್ಗೆ ಮಾತನಾಡಿರುವ ಬಗ್ಗೆ ರೆಕಾರ್ಡ್ ಇದೆ. ಈಗ ವೈಯಕ್ತಿಕವಾಗಿ ಹೆಸರು ಹೇಳಲ್ಲ. ಅವರ ಮೇಲೆ ಕೇಸ್ ಹಾಕಿಸುತ್ತಾರೆ. ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಮೇ 1ರಿಂದ ಉಚಿತ ಚಿಕಿತ್ಸೆ ಎಂದು ಹೇಳಿದ್ದಾರೆ. ಆನ್ ಲೈನ್ ರಿಜಿಸ್ಟರ್ ಮಾಡಬೇಕು ಎಂದು ಹೇಳಿದ್ದಾರೆ. ಆನ್​ಲೈನ್​ ರಿಜಿಸ್ಟ್ರೇಷನ್ ಮಾಡಲೂ ಎಲ್ಲರಿಗೂ ಸಾಧ್ಯವಿಲ್ಲ. ಹಳ್ಳಿಗಳಲ್ಲಿ ತೊಂದರೆ ಆಗುತ್ತೆ. ಹೀಗಾಗಿ ಈ ನಿಯಮ ಮಾಡಬೇಡಿ ಎಂದು ಇದೇ ವೇಳೆ ಆಗ್ರಹಿಸಿದರು.

ಕೊರೊನಾದಿಂದ ಸತ್ತವರ ಸಂಖ್ಯೆಯ ಕುರಿತು ಸುಳ್ಳು ಮಾಹಿತಿ ಕೊಡ್ತಿದ್ದಾರೆ. ನೂರಕ್ಕೆ ಇಪ್ಪತ್ತರಷ್ಟು ಮಾತ್ರ ಹೇಳ್ತಿದ್ದಾರೆ. ಸತ್ತವರ ಬಗ್ಗೆ ಸ್ಪಷ್ಟ ಮಾಹಿತಿ ಕೊಡ್ತಿಲ್ಲ. ಈ ಸಂಬಂಧ ಪ್ರತನಿತ್ಯ ಬುಲೆಟಿನ್ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬಗ್ಗೆ ಚರ್ಚೆ ಆಗ್ತಿದೆ. ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಚರ್ಚೆ ಆಗ್ತಿದೆ. ಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಪತ್ರಿಕೆಗಳಲ್ಲಿ ಲೇಖನ ಬರೆಯುತ್ತಿದ್ದಾರೆ. ವಿದೇಶದಿಂದಲೇ ಕಾಂಗ್ರೆಸ್ ಪಕ್ಷದ ಕಚೇರಿಗೆ ಈ ಕಟಿಂಗ್ಸ್ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಮತ್ತು ಕೇಂದ್ರ ಸರ್ಕಾರ ಸುಳ್ಳು ಹೇಳುವುದನ್ನ ಬಿಡಿ. ಫೇಲ್ ಆಗಿದ್ದೇವೆ ಅನ್ನೋದನ್ನ ಒಪ್ಪಿಕೊಳ್ಳಿ. ಸತ್ಯ ಸುದ್ದಿ ಹೇಳಿ ಎಂದು ಆಗ್ರಹಿಸಿದರು.

ತಾಂತ್ರಿಕ ಸಲಹಾ ಸಮಿತಿ ಬಗ್ಗೆ ಅಸಮಾಧಾನ: ಸಮಿತಿಯಲ್ಲಿ ಒಬ್ಬರೂ ಕೂಡ ಶ್ವಾಸಕೋಶ ತಜ್ಞರಿಲ್ಲ. ಮೂಳೆ ತಜ್ಞರು ಹೃದಯಕ್ಕೆ ಚಿಕಿತ್ಸೆ ನೀಡಲು ಸಾಧ್ಯವೇ? ಡಾ. ರವೀಂದ್ರ ಮೆಹತಾ ಈ ವಿಚಾರದಲ್ಲಿ ಒಳ್ಳೆ ಡಾಕ್ಟರ್ ಅಂತಾರೆ. ಅವರನ್ನು ಕೇಳಿದರೆ ಸರ್ಕಾರದವರು ಸಂಪರ್ಕನೇ ಮಾಡಿಲ್ಲ ಅಂತಾರೆ. ಯಾರು ಯಾರು ಏನೇನು ಮಾಡಬೇಕು ಅದನ್ನೇ ಮಾಡಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಬಗ್ಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ: ನಮ್ಮ ರಾಜ್ಯದ ಜನತೆ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನ ತೀರ್ಪು ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

10 ರಲ್ಲಿ ಏಳು ಕಡೆ ಕಾಂಗ್ರೆಸ್ ಗೆದ್ದಿದೆ. ಆದರೆ ಬಿಜೆಪಿ ಒಂದೇ ಕಡೆ ಗೆದ್ದಿದೆ. ಬಳ್ಳಾರಿ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ತೀರ್ಥಹಳ್ಳಿ 20 ವರ್ಷದಿಂದ ನಮ್ಮ ವಶದಲ್ಲಿ ಇರಲಿಲ್ಲ. ಈಗ ನಾವು ಅಧಿಕಾರ ಪಡೆದಿದ್ದೇವೆ. ರಾಮನಗರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನಿದೆ ಅನ್ನೋದು ಗೊತ್ತಾಗಿದೆ ಎಂದರು.

ಪಂಚಾಯತ್ ಚುನಾವಣೆಯಲ್ಲಿ ನಾವೇ ಗೆದ್ದಿದ್ದೆವು. ಆದರೆ, ಅದು ಸಿಂಬಲ್ ಮೇಲೆ ನಡೆದ ಚುನಾವಣೆ ಅಲ್ಲ ಎಂದಿದ್ದರು. ಈಗ ಸಿಂಬಲ್ ಮೇಲೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.

ಓದಿ: ನಿಂಬೆ ಹಣ್ಣಿನ ರಸ ಬಳಕೆ, ಕೊರೊನಾ ಜಾಗೃತಿ ಬಗ್ಗೆ ಹೃದ್ರೋಗ ತಜ್ಞ ಡಾ. ಮಂಜುನಾಥ್ ಹೇಳಿದ್ದಿಷ್ಟು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.