ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಸೈಕಲ್ ಅನ್ನ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದ್ದು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರದ ಜಯತೀರ್ಥ ಎಂಬುವವವರು ಮನೆ ಮುುಂದೆ ಸೈಕಲ್ಗೆ ಬೀಗ ಹಾಕಿ ನಿಲ್ಲಿಸಿದ್ದರು. ನಸುಕಿನ ವೇಳೆ ಬಂದ ಖದೀಮರು ಬೀಗ ಹಾಕಿದ್ರು ಕ್ಷಣಾರ್ಧಲ್ಲಿ ಸೈಕಲ್ ಹೊತ್ತೋಯ್ದಿದ್ದಾರೆ. ಇನ್ನು ಕಳ್ಳರ ಕೈಚಳಕ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಕಳೆದೊಂದು ತಿಂಗಳ ಹಿಂದೆ ಜಯತೀರ್ಥರವರ ಪಕ್ಕಕದ ಮನೆಯ ಸೈಕಲ್ ಹೀಗೆ ಕಳ್ಳತನವಾಗಿತ್ತು. ಈ ಕುರಿತು ಪೊಲೀಸರಿಗೆ ದೂರು ನೀಡಿದ್ರು ಇನ್ನು ಪತ್ತೆಯಾಗಿಲ್ಲಾ. ಸದ್ಯ ನೊಂದ ಮಾಲೀಕ ಹನುಮಂತನಗರ ಪೊಲೀಸರಿಗೆ ದೂರು ನೀಡಿದ್ದಾರೆ.