ETV Bharat / state

ಗೂಗಲ್ ಪೇ ಆ್ಯಪ್ ಯೂಸ್‌‌ ಮಾಡ್ತಿರಾ..? ಹಾಗಾದ್ರೆ ಹುಷಾರ್! - ನೀವು ಆಗಬಹುದು ಸೈಬರ್ ಕ್ರಿಮಿನಲ್​​ಗಳ ಟಾರ್ಗೆಟ್ - Bangalore Cyber ​​thieves News

ಗವಿಪುರಂ ನಿವಾಸಿ ಹರೀಶ್​​​​ಗೆ ಗೂಗಲ್ ಪೇ ಸಮಸ್ಯೆಯಾಗಿದೆ. ಹೀಗಾಗಿ ಗೂಗಲ್ ಪೇ ನಲ್ಲಿರುವ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಸಿಕ್ಕ ನಂಬರ್​ 9901771222 ಕರೆ ಮಾಡಿದ್ದಾರೆ. ಆದರೆ ಅಲ್ಲಿಂದ ಸರಿಯಾಗಿ ರೆಸ್ಪಾನ್ಸ್​ ಸಿಕ್ಕಿಲ್ಲ. ಬೇರೊಂದು ನಂಬರ್​ನಿಂದ ಕರೆ ಬಂದಿದೆ. ಆ ಬಳಿಕ ಆತನ ಅಕೌಂಟ್​​ನಿಂದ ಹಣ ಕಟ್​ ಆಗಿದೆಯಂತೆ. ಈ ಸಂಬಂಧ ದೂರು ಸಹ ದಾಖಲಾಗಿದೆ.

ಗೂಗಲ್ ಪೇ ಆ್ಯಪ್
ಗೂಗಲ್ ಪೇ ಆ್ಯಪ್
author img

By

Published : Jul 29, 2020, 10:12 AM IST

Updated : Jul 29, 2020, 12:24 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ಖದೀಮರ ಹಾವಳಿ ದಿನೆ ದಿನೇ ಮಿತಿ ಮಿರುತ್ತಿದೆ. ಸದ್ಯ ಗೂಗಲ್ ಪೇ ಆ್ಯಪ್ ಬಳಕೆ ಮಾಡೋರನ್ನ ಸೈಬರ್ ಖದೀಮರು ಟಾರ್ಗೆಟ್ ಮಾಡಿದ್ದಾರೆ.

ನಗರದ ಗವಿಪುರಂ ನಿವಾಸಿ ಹರೀಶ್​​ಗೆ ಗೂಗಲ್ ಪೇ ಸಮಸ್ಯೆಯಾಗಿದೆ. ಹೀಗಾಗಿ ಗೂಗಲ್ ಪೇ ನಲ್ಲಿರುವ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ ಸಿಕ್ಕ ನಂಬರ್​ 9901771222ಕ್ಕೆ ಕರೆ ಮಾಡಿದ್ದಾರೆ. ಆದರೆ, ಹರೀಶ್​​​​ಗೆ ಆ ನಂಬರ್​ನಿಂದ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಆದರೆ, ತಕ್ಷಣ 06291766339 ನಂಬರ್ ನಿಂದ ಅಪರಿಚಿತನೊಬ್ಬ ಹರೀಶ್​​ಗೆ ಕರೆ ಮಾಡಿದ್ದು, ನಿಮಗೆ ಗೂಗಲ್ ಪೇ ಸಮಸ್ಯೆ ಆಗಿದೆ ಅಲ್ವಾ. ನಾವು ‌ಕೇಳುವ ಡಿಟೇಲ್ಸ್ ಹಾಕಿದರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳಿದ್ದಾನೆ. ಅಪರಿಚಿತ ವ್ಯಕ್ತಿ ಕೇಳಿದ ಡೆಬಿಟ್ ಕಾರ್ಡ್ ನಂಬರ್, ಪಿನ್ ಕೋಡ್, ಒಟಿಪಿ, ನೀಡಿದ್ದಾರೆ. ನಂತರ ಅಪರಿಚಿತ ವ್ಯಕ್ತಿ ಮತ್ತೆ ಕರೆ ಮಾಡಿ ನಿಮ್ಮ ಗೂಗಲ್ ಪೇ ಸರಿಯಾಗಿದೆ. ಈಗ ಓಪನ್ ಮಾಡಿ ಎಂದು ‌ಕಾಲ್ ಮಾಡಿ ಕಟ್ ಮಾಡಿದ್ದಾನೆ. ಕಾಲ್ ಕಟ್ ಆಗಿ ನೋಡುತ್ತಿದ್ದಂತೆ ಅಕೌಂಟ್​​ನಲ್ಲಿರುವ 24,500 ರೂ ಮಾಯವಾಗಿದೆ.

ಅಕೌಂಟ್ ಹಣ ಖಾಲಿಯಾಗಿದ್ದನ್ನ ನೋಡಿ ಅದೇ ನಂಬರ್​​ಗೆ ಕರೆ ಮಾಡಿದರೆ ನಂಬರ್ ಸ್ವಿಚ್ಡ್​​ ಆಪ್ ಆಗಿದೆ. ತಕ್ಷಣ ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ಹರೀಶ್ ದೂರು ದಾಖಲಿಸಿದ್ದು, ಪೊಲೀಸರು ತನಿಖೆ‌ ಕೈಗೊಂಡಿದ್ದಾರೆ.

Last Updated : Jul 29, 2020, 12:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.