ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಹೆಸರಲ್ಲಿ ದೋಖಾ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ. ದಾವೂದ್ ಪಾಷಾ ಬಂಧಿತ ಆರೋಪಿ.
ಪಿಸಿ ಶರ್ಮಾ ಎಂಬುವರು ಬಾಲಾಜಿ ಕಂಪನಿಯ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡ್ತಿದ್ರು. ತಮ್ಮ ಕಂಪನಿಯ ಕೆಲ ಕೆಲಸದ ವಸ್ತುಗಳ ಖರೀದಿಗೆ ಆನ್ಲೈನ್ನಲ್ಲಿ ಅರ್ಜಿ ಹಾಕಿದ್ದರು. ವಿವಿಧ ಕಂಪನಿಗಳಿಂದ ಈ-ಮೇಲ್ ಮೂಲಕ ಮಾಹಿತಿ ಬಂದಿತ್ತು. ಇದೇ ವೇಳೆ excelinenterprises.com ಈ ವೆಬ್ಸೈಟ್ನೊಂದಿಗೆ ಜನವರಿಯಲ್ಲಿ ಕಡಿಮೆ ದರಲ್ಲಿ ಕಂಪನಿಗೆ ಮಟಿರಿಯಲ್ಸ್ ಕೊಡುವುದಾಗಿ ಒಪ್ಪಂದ ನಡೆದಿತ್ತು.
ಇದರ ಒಪ್ಪಂದದಂತೆ 8 ಲಕ್ಷದ 33 ಸಾವಿರದ 835 ರೂ. ವ್ಯವಹಾರ ನಡೆದಿತ್ತು. ಅದರಂತೆ 4 ಲಕ್ಷದ 16 ಸಾವಿರದ 917 ರೂಪಾಯಿಗಳನ್ನು ಕಳುಹಿಸಿಲಾಗಿತ್ತು.
ಆದರೆ ಆರೋಪಿ ಹಣ ಬಂದ ಕೂಡಲೇ ಯಾವುದೇ ಪ್ರತಿಕ್ರಿಯೆ ನೀಡದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ರು. ಹೀಗಾಗಿ ಶರ್ಮಾ ದೂರು ದಾಖಲಿಸಿದ್ದು, ಸದ್ಯ ದೂರಿನ ಮೇರೆಗೆ ತನಿಖೆ ನಡೆಸಿದ್ದ ಸೈಬರ್ ಪೊಲೀಸರು ಆರೋಪಿ ಬಂಧನ ಮಾಡಿ ಐಪಿಸಿ 521/2020 u/s 66c IT act 420 ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.
ತನಿಖೆ ವೇಳೆ ಆರೋಪಿ ಪ್ರತಿಷ್ಠಿತ ಕಂಪನಿಯ ಮ್ಯಾನೇಜರ್ ಅಂತ ಹೇಳಿಕೊಂಡು ಫೋನ್ ಕಾಲ್ ಮಾಡ್ತಿದ್ದ. ಕನ್ಟ್ರಕ್ಷನ್ ಮಾಡೋಕೆ ಮಟಿರೀಯಲ್ಸ್ ಕಡಿಮೆ ದರದಲ್ಲಿ ಪೂರೈಸುವುದಾಗಿ ಸುಳ್ಳು ಹೇಳಿ ಹಲವಾರು ಕಂಪನಿಗಳಿಂದ ಹಣ ದೋಚುತ್ತಿದ್ದ ವಿಚಾರ ಬಯಲಾಗಿದೆ.