ETV Bharat / state

ಚಂದ್ರು ಹತ್ಯೆ ಸಮಗ್ರ ತನಿಖೆ ನಡೆಸಬೇಕು: ಸಿ.ಟಿ.ರವಿ ಆಗ್ರಹ

ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೆ ತಣ್ಣಗೆ ಮಾಡಬೇಕೆಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ, ಇನ್ನೊಂದು ಕಡೆ ಇಂಥ ಘಟನೆ ಮರುಕಳಿಸಬಾರದು. ಆರೋಪಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರೆಂಬ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ಅತ್ಯಗತ್ಯ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಚಂದ್ರು ಹತ್ಯೆ ಸಮಗ್ರ ತನಿಖೆ ನಡೆಸಬೇಕು ಎಂದ ಸಿ.ಟಿ.ರವಿ

author img

By

Published : Apr 6, 2022, 9:34 PM IST

ಬೆಂಗಳೂರು: ನಗರದ ಗೋರಿಪಾಳ್ಯದಲ್ಲಿ ನಡೆದಿರುವ ಚಂದ್ರು ಹತ್ಯೆ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಚಂದ್ರು ಕುಟುಂಬಕ್ಕೆ ಸಾಂತ್ವನ ಹೇಳಿದ ಸಿ.ಟಿ ರವಿ ಪಕ್ಷದ ವತಿಯಿಂದ 5 ಲಕ್ಷ ಪರಿಹಾರ ನೀಡಿದರು.

ಬಳಿಕ ಮಾತನಾಡಿದ ಸಿ.ಟಿ.ರವಿ, ಹತ್ಯೆಗೀಡಾದ ಚಂದ್ರು ಅವರ ಸಹೋದರ ನವೀನ್ ನಮ್ಮ ಪಕ್ಷದ ಬೂತ್ ಸಮಿತಿ ಕಾರ್ಯದರ್ಶಿ. ಏಕಾಏಕಿ ಹತ್ಯೆ ನಡೆದಿದೆ. ಅಂಗಡಿಯವರೂ ನೆರವಿಗೆ ಬರಲಿಲ್ಲ. ಇಲ್ಲಿ ಪೂರ್ವದ್ವೇಷ ಇರಲಿಲ್ಲ, ಬೈಕ್ ತಾಗಿದ್ದನ್ನೇ ನೆಪ ಮಾಡಿ, ಕನ್ನಡ ಮತ್ತು ತಮಿಳು ಮಾತ್ರ ಬರುವುದಾಗಿ ಹೇಳಿದ ಚಂದ್ರುವನ್ನು ಉರ್ದುವಿನಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ ಎಂಬುದಾಗಿ ಮನೆಯವರು ಹೇಳುತ್ತಿದ್ದಾರೆ ಎಂದು ವಿವರಿಸಿದರು.

ಚಂದ್ರು ಹತ್ಯೆ ಸಮಗ್ರ ತನಿಖೆ ನಡೆಸಬೇಕು ಎಂದ ಸಿ.ಟಿ.ರವಿ

ಪೊಲೀಸ್ ಇಲಾಖೆಯವರು ಬಹಳಷ್ಟು ಸಾರಿ ವಾಸ್ತವಿಕ ಸಂಗತಿಗಳ ಕಡೆ ಹೋಗುವುದಕ್ಕಿಂತ ಈ ವಿಚಾರವನ್ನು ಇಲ್ಲಿಗೇ ತಣ್ಣಗೆ ಮಾಡಬೇಕೆಂದು ಯೋಚಿಸುತ್ತಾರೆ. ಅದು ತಪ್ಪೇನೂ ಅಲ್ಲ. ಆದರೆ, ಇನ್ನೊಂದು ಕಡೆ ಇಂಥ ಘಟನೆ ಮರುಕಳಿಸಬಾರದು. ಆರೋಪಿಗಳು ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದರೆಂಬ ಮಾಹಿತಿ ಲಭಿಸಿದೆ. ಘಟನೆಯ ಕುರಿತು ಸಮಗ್ರ ತನಿಖೆ ಅತ್ಯಗತ್ಯ ಎಂದರು.

ಪಕ್ಷದ ಕಡೆಯಿಂದ ರಾಜ್ಯಾಧ್ಯಕ್ಷರು ಕಳುಹಿಸಿದ 5 ಲಕ್ಷ ರೂಪಾಯಿ ನೆರವನ್ನು ಕೊಡಲಾಗುತ್ತಿದೆ. ಸರ್ಕಾರದ ಕಡೆಯಿಂದಲೂ ಸೂಕ್ತ ಪರಿಹಾರ ನೀಡಲು ಮುಖ್ಯಮಂತ್ರಿಯವರನ್ನು ಕೋರಲಾಗುವುದು. ಇದೊಂದು ದುರದೃಷ್ಟಕರ ಸಂಗತಿ. ಇದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂದು ಬೇಸರ ಹೊರಹಾಕಿದರು.

ಇದನ್ನೂ ಓದಿ : ಅಲ್‌‌ಖೈದಾ ಉಗ್ರ ಸಂಘಟನೆ ಮುಖ್ಯಸ್ಥ ಯಾರು ಅನ್ನೋದೇ ನನಗೆ ಗೊತ್ತಿಲ್ಲ: ಮುಸ್ಕಾನ್ ತಂದೆ ಮಹಮದ್ ಹುಸೇನ್ ಖಾನ್

ಶಾಸಕನಿಗೇ ರಕ್ಷಣೆ ಕೊಡಲಾಗದ ಪರಿಸ್ಥಿತಿ: ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ನಾವು ಸ್ವಲ್ಪ ಸಮಗ್ರವಾಗಿ ಆಲೋಚಿಸಬೇಕಿದೆ. ಯಾರಿಗೆ ಸಹಿಷ್ಣುತೆ ಇಲ್ಲ ಎಂಬುದನ್ನು ಡಿ.ಜಿ ಹಳ್ಳಿ, ಕೆ.ಜಿ.ಹಳ್ಳಿ ಘಟನೆ ಪುಷ್ಟೀಕರಿಸುತ್ತದೆ. ಶಾಸಕನಿಗೇ ರಕ್ಷಣೆ ಕೊಡಲಾಗದ ಪರಿಸ್ಥಿತಿ, ಜನಸಾಮಾನ್ಯನಿಗೆ ಇನ್ನು ಹೇಗೆ ರಕ್ಷಣೆ ಕೊಡಲು ಸಾಧ್ಯ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಿದೆ. ಸಣ್ಣ ಸಣ್ಣ ವಿಚಾರಕ್ಕೂ ಹಿಂಸಾಚಾರಕ್ಕೆ ಇಳಿಯುವುದೇಕೆ? ಅದರ ಹಿನ್ನೆಲೆ, ಪ್ರಚೋದನೆ ಬಗ್ಗೆಯೂ ಸಮಗ್ರ ತನಿಖೆ ಅಗತ್ಯವಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಇದು ಪ್ರತ್ಯೇಕ ಘಟನೆಯೇ ಅಥವಾ ಕೋಮುಗಲಭೆಯ ಸಂಚು ಇದರ ಹಿಂದೆ ಇದೆಯೇ ಎಂಬುದರ ಕುರಿತು ಕೂಡ ಗೊತ್ತಾಗಬೇಕು. ಕೇವಲ ಸೀಮಿತ ದೃಷ್ಟಿಯಲ್ಲಿ ನೋಡದೆ ಸಮಗ್ರ ದೃಷ್ಟಿಕೋನದಿಂದ ತನಿಖೆ ಮಾಡಲು ಆಗ್ರಹಿಸುವುದಾಗಿ ತಿಳಿಸಿದರು.

ಅಲ್ ಖೈದಾ ಹವಣಿಸುತ್ತಿದೆ: ಮಂಡ್ಯದ ಮುಸ್ಕಾನ್​ಳ ವಿಷಯಕ್ಕೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಪ್ರತಿಕ್ರಿಯೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಭಾರತದ ನೆಲವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳುವುದಕ್ಕೆ ಇಂಥ ಪ್ರಯತ್ನ ನಡೆದಿದೆ. ಕೆಲವೆಡೆ ಯಶಸ್ಸನ್ನೂ ಕಂಡಿದ್ದಾರೆ. ಇಲ್ಲಿಂದ ಕೆಲವರು, ಕೇರಳ, ತಮಿಳುನಾಡಿನಿಂದ ಹಾಗೂ ಭಟ್ಕಳದಿಂದ ಐಸಿಸ್ ಸೇರುವುದಾದರೆ ಏನೋ ಒಂದು ಕಾರಣ ಇರಬೇಕಲ್ಲವೇ? ಇದರ ಹಿಂದಿನ ಸತ್ಯ ತಿಳಿಯುವುದು ಅನಿವಾರ್ಯ. ಇದನ್ನು ಬಳಸಲು ಅಲ್ ಖೈದಾ ಹವಣಿಸುತ್ತಿದೆ ಎಂದು ಹೇಳಿದರು.

ಭಾರತದ ನೆಲವನ್ನು ಭಯೋತ್ಪಾದನೆಗೆ ಬಳಸಿಕೊಳ್ಳಲು ಬಿಜೆಪಿ ಅವಕಾಶ ಕೊಡುವುದಿಲ್ಲ. ಇಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಸರ್ಕಾರ ಇಲ್ಲ. ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ನಮಗೆ ಗೊತ್ತಿದೆ ಎಂದ ಅವರು, ರಾಜ್ಯದ ಬೆಂಗಳೂರು, ಮಂಗಳೂರಿನಲ್ಲಿ ಎನ್‍ಐಎ ಠಾಣೆ ತೆರೆಯುವ ಕುರಿತ ಪ್ರಶ್ನೆಗೆ ಉತ್ತರ ನೀಡಿ, ತಾತ್ವಿಕವಾಗಿ ಒಪ್ಪಿಗೆ ಲಭಿಸಿ ಪ್ರಾರಂಭಿಸಿದ್ದಾರೆ. ಸಮಗ್ರವಾಗಿ ವ್ಯವಸ್ಥಿತವಾಗಿ ಅದು ಶೀಘ್ರವೇ ಆರಂಭವಾಗಲಿದೆ ಎಂದರು.

ಯುನಿಫಾರ್ಮ್ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಆಕ್ಷೇಪಿಸಿ ಬಂದ್ ಕರೆ ಕೊಡುವುದು ಸಮಾಜ ಒಡೆಯುವ ಕೆಲಸ ತಾನೇ? ಸಿಎಎ ವಿಚಾರದಲ್ಲಿ ಭಾಷಣ ಮಾಡಿದವರು ಪರಮನೀಚರು. ಯಾವ್ಯಾವ ಪಕ್ಷದವರು ಹಾಗೂ ಬುದ್ಧಿಜೀವಿಗಳು ಭಾಷಣ ಮಾಡಿದ್ದಾರೆಂಬ ವಿಡಿಯೋ ಸಿಗುತ್ತದೆ. ಅವರು ದಡ್ಡರಾ? ಸಂವಿಧಾನ ಓದಿಲ್ಲವೇ? ಮಸೂದೆ ಓದಿಲ್ಲವೇ? ಎರಡು ವರ್ಷಗಳಲ್ಲಿ ಸಿಎಎ ಯಾರದಾದರೂ ಪೌರತ್ವ ಕಿತ್ತುಕೊಂಡಿದೆಯೇ ಎಂದು ಖಾರವಾಗೇ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.