ETV Bharat / state

ಜಿಂದಾಲ್​​​ಗೆ ಸರ್ಕಾರಿ ಭೂಮಿ ಮಾರಾಟದಿಂದ ರಾಜ್ಯಕ್ಕಾಗುವ ಲಾಭವೇನು? ಸಿಎಂಗೆ ಸಿ.ಟಿ ರವಿ ಪತ್ರ! - ಜಿಂದಾಲ್

ಜಿಂದಾಲ್ ಕಂಪನಿಗೆ 3667 ಎಕರೆ ಸರ್ಕಾರಿ ಜಮೀನನ್ನು ಸೇಲ್ ಡೀಡ್ ಮಾಡಿಕೊಡುವ ನಿರ್ಣಯ ಪ್ರಶ್ನಿಸಿ ಮುಖ್ಯಮಂತ್ರಿ ಹಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಹಿರಂಗ ಪತ್ರ ಬರೆದಿದ್ದು, ಭೂಮಿ ಮಾರಾಟ ಸಂಬಂಧ ಸಂಶಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಿಎಂಗೆ ಸಿಟಿ ರವಿ ಪ್ರಶ್ನೆ
author img

By

Published : Jun 8, 2019, 9:44 AM IST

ಬೆಂಗಳೂರು : ಜಿಂದಾಲ್ ಕಂಪನಿಗೆ 3667 ಎಕರೆ ಸರ್ಕಾರಿ ಜಮೀನನ್ನು ಸೇಲ್ ಡೀಡ್ ಮಾಡಿಕೊಡುವ ನಿರ್ಣಯ ಪ್ರಶ್ನಿಸಿ ಮುಖ್ಯಮಂತ್ರಿ ಹಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಹಿರಂಗ ಪತ್ರ ಬರೆದಿದ್ದು, ಭೂಮಿ ಮಾರಾಟ ಸಂಬಂಧ ಸಂಶಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಿದ್ದಾರೆ.

ಸಿ.ಟಿ ರವಿ ಬರೆದ ಪತ್ರದಲ್ಲೇನಿದೆ?

-ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇಲ್ ಡೀಡ್ ಮಾಡಿಕೊಡುವುದರಿಂದ ಕರ್ನಾಟಕಕ್ಕೆ ಆಗುವ ಲಾಭ ಏನು?
ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲೂಕಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಖಾಸಗಿಯವರಿಗೆ ಎಕರೆಗೆ 30 ಲಕ್ಷದಿಂದ ಒಂದು ಕೋಟಿವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಕೇವಲ ಎಕರೆಗೆ 1,22,000 ರೂ.ಗಳಿಗೆ ಸೇಲ್ ಡೀಡ್ ಮಾಡಿಕೊಡುತ್ತಿರುವುದರ ಉದ್ದೇಶವೇನು?.

- ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಕರ್ನಾಟಕ ಸರ್ಕಾರಕ್ಕೂ ಜಿಂದಾಲ್ ಕಂಪನಿಗೂ ನಡೆದಿರುವ ವ್ಯವಹಾರಿಕ ಒಪ್ಪಂದನೇನು?

- ಇದುವರೆಗೂ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಲೀಸ್ ನೀಡಲಾಗಿದೆ? ಎಷ್ಟು ವರ್ಷಗಳ ಅವಧಿಗೆ ಲೀಸ್ ನೀಡಲಾಗಿದೆ, ಲೀಸ್ ಮೊತ್ತವೆಷ್ಟು?

- ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು ಮತ್ತು ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ?.

- ಈ ಕಂಪನಿ ಪ್ರಾರಂಭಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಮೇಲೆ ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮವೇನು? ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಆಡಿಟ್ ಆಗಿದೆಯೇ ಮತ್ತು ಪರಿಸರ ಇಲಾಖೆ ವರದಿ ಏನು?

- ಜಿಂದಾಲ್ ಕಂಪನಿ ಈ ಸ್ಟೀಲ್ ಪ್ಲಾಂಟ್ ನಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈಗ ಸೃಷ್ಠಿಯಾಗಿರುವ ಉದ್ಯೋಗ ಎಷ್ಟು? ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಎಷ್ಟು. ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಲಾಗಿದೆ?.

- ಜಿಂದಾಲ್ ಕಂಪನಿ ಎಂಎಂಎಲ್ ಗೆ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು?

- ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗಡೆ ಅವರು ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಾಲ್​​ ಕಂಪನಿಯ ಬಗ್ಗೆ ಇರುವ ಉಲ್ಲೇಖ ಏನು?

- ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡಲು ರಾಜ್ಯ ಕಾನೂನು ಇಲಾಖೆ ನೀಡಿರುವ ಅಭಿಪ್ರಾಯ ಏನು? ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದು ಯಾವ ಕಾರಣಕ್ಕೆ?

- ಕೆಲವು ಐಎಎಸ್?ಐಪಿಎಸ್ ಅಧಿಕಾರಿಗಳು ಸೇವಾ ನಿವೃತ್ತಿ ಪಡೆದ ನಂತರ ಜಿಂದಾಲ್ ಕಂಪನಿಯಲ್ಲಿ ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸ ಮಾಡಿರುವುದು, ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದರೆ ಹಿಂದೆ ಕೆಲಸ ಮಾಡಿರುವ ಮತ್ತು ಹಾಲಿ ಕೆಲಸ ಮಾಡುತ್ತಿರುವ ಮಾಜಿ ಐಎಎಸ್,ಐಪಿಎಸ್ ಅಧಿಕಾರಿಗಳ ಮಾಹಿತಿ ಮತ್ತು ಅವರು ಸೇವೆಯಲ್ಲಿದ್ದಾಗ ಜಿಂದಾಲ್ ಕಂಪನಿಗೆ ಮಾಡಿರುವ ಸಹಾಯ ಬಹಿರಂಗಪಡಿಸಿ.

- ಜಿಂದಾಲ್ ಕಂಪನಿ ಮತ್ತು ಇತರೆ ಕಂಪನಿಗಳಿಗೆ 2001-2010 ರವರೆಗೆ ಎಂಎಂಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿದ ವರದಿಯೇನು?

- ಬಾಕಿ ಪಾವತಿಗಾಗಿ ಎಂಎಂಎಲ್ ಮತ್ತು ಜೆಎಎಸ್​ಡಬ್ಲೂ ನಡುವೆ ನ್ಯಾಯಾಲಯದಲ್ಲಿ ಇರುವ ವಿವಾದ ಬಗೆಹರಿದಿದೆಯೇ?

- ಒಮ್ಮೆ ಸೇಲ್ ಡೀಡ್ ಮಾಡಿದ ನಂತರ ಸರ್ಕಾರ ಯಾವ ರೀತಿಯಲ್ಲಿ ಕಂಪನಿಯ ಮೇಲೆ ನಿಯಂತ್ರಣ ಮತ್ತು ನಿರ್ದೇಶನ ಮಾಡಲು ಸಾಧ್ಯವಿದೆಯೆಂದು ತಿಳಿಸಿ.

-ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶವನ್ನು ಯಾವುದೇ ಕೈಗಾರಿಕೆಗೆ ನೀಡುವಾಗ ಸೇಲ್ ಡೀಡ್ ಮಾಡದೇ ದೀರ್ಘಾವಧಿ ಲೀಸ್ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕೆಂದು ಸಂಪುಟ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು?

Intro:ಬೆಂಗಳೂರು:ಜಿಂದಾಲ್ ಕಂಪನಿಗೆ 3667 ಎಕರೆ ಸರ್ಕಾರಿ ಜಮೀನನ್ನು ಸೇಲ್ ಡೀಡ್ ಮಾಡಿಕೊಡುವ ನಿರ್ಣಯ ಪ್ರಶ್ನಿಸಿ ಮುಖ್ಯಮಂತ್ರಿ ಹಚ್.ಡಿ.ಕುಮಾರಸ್ವಾಮಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಹಿರಂಗ ಪತ್ರ ಬರೆದಿದ್ದು,ಭೂಮಿ ಮಾರಾಟ ಸಂಬಂಧ ಸಂಶಯಗಳನ್ನೊಳಗೊಂಡ ಪ್ರಶ್ನೆಗಳನ್ನು ಕೇಳಿದ್ದಾರೆ.Body:

ಸಿ.ಟಿ ರವಿ ಬರೆದ ಪತ್ರದಲ್ಲೇನಿದೆ?

ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇಲ್ ಡೀಡ್ ಮಾಡಿಕೊಡುವುದರಿಂದ ಕರ್ನಾಟಕಕ್ಕೆ ಆಗುವ ಲಾಭ ಏನು?
ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲ್ಲೂಕಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಖಾಸಗಿಯವರಿಗೆ ಎಕರೆಗೆ 30 ಲಕ್ಷದಿಂದ ಒಂದು ಕೋಟಿವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಕೇವಲ ಎಕರೆಗೆ 1,22,000 ರೂ.ಗಳಿಗೆ ಸೇಲ್ ಡೀಡ್ ಮಾಡಿಕೊಡುತ್ತಿರುವುದರ ಉದ್ದೇಶವೇನು?
ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಕರ್ನಾಟಕ ಸರ್ಕಾರಕ್ಕೂ ಜಿಂದಾಲ್ ಕಂಪನಿಗೂ ನಡೆದಿರುವ ವ್ಯವಹಾರಿಕ ಒಪ್ಪಂದನೇನು?
ಇದುವರೆಗೂ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಲೀಸ್ ನೀಡಲಾಗಿದೆ?ಎಷ್ಟು ವರ್ಷಗಳ ಅವಧಿಗೆ ಲೀಸ್ ನೀಡಲಾಗಿದೆ,ಲೀಸ್ ಮೊತ್ತವೆಷ್ಟು?
ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು ಮತ್ತು ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ.
ಈ ಕಂಪನಿ ಪ್ರಾರಂಭಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಮೇಲೆ ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮವೇನು? ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಆಡಿಟ್ ಆಗಿದೆಯೇ ಮತ್ತು ಪರಿಸರ ಇಲಾಖೆ ವರದಿ ಏನು?
ಜಿಂದಾಲ್ ಕಂಪನಿ ಈ ಸ್ಟೀಲ್ ಪ್ಲಾಂಟ್ ನಿಂದ ಎಷ್ಟು ಉದ್ಯೋಗ ಸೃಷ್ಠಿ ಆಗುತ್ತದೆಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈಗ ಸೃಷ್ಠಿಯಾಗಿರುವ ಉದ್ಯೋಗ ಎಷ್ಟು? ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಎಷ್ಟು. ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಲಾಗಿದೆ.
ಜಿಂದಾಲ್ ಕಂಪನಿ ಎಂಎಂಎಲ್ ಗೆ ಬಅಕಿ ಉಳಿಸಿಕೊಂಡಿರುವ ಹಣ ಎಷ್ಟು?
ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗಡೆ ಅವರು ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಅಲ್ ಕಂಪನಿಯ ಬಗ್ಎ ಇರುವ ಉಲ್ಲೇಖ ಏನು?
ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡಲು ರಾಜ್ಯ ಕಾನೂನು ಇಲಾಖೆ ನೀಡಿರುವ ಅಭಿಪ್ರಾಯ ಏನು? ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದು ಯಾವ ಕಾರಣಕ್ಕೆ?
ಕೆಲವು ಐಎಎಸ್?ಐಪಿಎಸ್ ಅಧಿಕಾರಿಗಳು ಸೇವಾ ನಿವೃತ್ತಿ ಪಡೆದ ನಂತರ ಜಿಂದಾಲ್ ಕಂಪನಿಯಲ್ಲಿ ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸ ಮಾಡಿರುವುದು,ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದರೆ ಹಿಂದೆ ಕೆಲಸ ಮಾಡಿರುವ ಮತ್ತು ಹಾಲಿ ಕೆಲಸ ಮಾಡುತ್ತಿರುವ ಮಾಜಿ ಐಎಎಸ್?ಐಪಿಎಸ್ ಅಧಿಕಾರಿಗಳ ಮಾಹಿತಿ ಮತ್ತು ಅವರು ಸೇವೆಯಲ್ಲಿದ್ದಾಗ ಜಿಂದಾಲ್ ಕಂಪನಿಗೆ ಮಾಡಿರುವ ಸಹಾಯ ಬಹಿರಂಗಪಡಿಸಿ.
ಜಿಂದಾಲ್ ಕಂಪನಿ ಮತ್ತು ಇತರೆ ಕಂಪನಿಗಳಿಗೆ 2001-2010 ರವರೆಗೆ ಎಂಎಂಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿದ ವರದಿಯೇನು?
ಬಾಕಿ ಪಾವತಿಗಾಗಿ ಎಂಎಂಎಲ್ ಮತ್ತು ಜೆಎಸ್ಡಬ್ಲೂ ನಡುವೆ ನ್ಯಾಯಾಲಯದಲ್ಲಿ ಇರುವ ವಿವಾದ ಬಗೆಹರಿದಿದೆಯೇ?
ಒಮ್ಮೆ ಸೇಲ್ ಡೀಡ್ ಮಾಡಿದ ನಂತರ ಸರ್ಕಾರ ಯಾವ ರೀತಿಯಲ್ಲಿ ಕಂಪನಿಯ ಮೇಲೆ ನಿಯಂತ್ರಣ ಮತ್ತು ನಿರ್ದೇಶನ ಮಾಡಲು ಸಾಧ್ಯವಿದೆಯೆಂದು ತಿಳಿಸಿ.
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶವನ್ನು ಯಾವುದೇ ಕೈಗಾರಿಕೆಗೆ ನೀಡುವಾಗ ಸೇಲ್ ಡೀಡ್ ಮಾಡದೇ ದೀರ್ಘಾವಧಿ ಲೀಸ್ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕೆಂದು ಸಂಪುಟ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು?Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.