ETV Bharat / state

ಬೆಂಗಳೂರು: ಆನೆ ದಾಳಿಗೆ ಸಿಆರ್​ಪಿಎಫ್​ ಯೋಧ ಸಾವು - ಯೋಧನ ಮೇಲೆ ಒಂಟಿ ಸಲಗ ದಾಳಿ

ಸೇನಾ ಕೇಂದ್ರದಲ್ಲಿ ವಾಕಿಂಗ್​ ಮಾಡುತ್ತಿದ್ದ ಸಿಆರ್​ಪಿಎಫ್​ ಯೋಧನ ಮೇಲೆ ಆನೆ ದಾಳಿ ನಡೆಸಿರುವ ಘಟನೆ ನಡೆದಿದೆ.

ಆನೆ ದಾಳಿಗೆ ಸಿಆರ್​ಪಿಎಫ್​ ಯೋಧ ಸಾವು
ಆನೆ ದಾಳಿಗೆ ಸಿಆರ್​ಪಿಎಫ್​ ಯೋಧ ಸಾವು
author img

By

Published : Mar 14, 2023, 12:51 PM IST

ಬೆಂಗಳೂರು: ಬನ್ನೇರುಘಟ್ಟದ ಕಗ್ಗಲೀಪುರ ಮುಖ್ಯರಸ್ತೆಯ ಸಿಆರ್‌ಪಿಎಫ್ ಡಾಗ್ ಸ್ಕ್ವಾಡ್ ಕೇಂದ್ರದ ಬಳಿ ಯೋಧನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆಚ್.ಎನ್.ಸಿಂಗ್ (33) ಮೃತರು. ಶನಿವಾರ ಬೆಳಗ್ಗೆ ಸೇನಾ ಕೇಂದ್ರದಲ್ಲಿ ವಾಕಿಂಗ್ ಮತ್ತು ಜಾಗಿಂಗ್​ನಲ್ಲಿ ತೊಡಗಿದ್ದ ಸಿಂಗ್ ಮೇಲೆ ಆನೆ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ಯೋಧ ಹೆಚ್‌.ಎನ್.ಸಿಂಗ್ ಗಾಯಗಳಿಂದ ನೆಲಕ್ಕೆ ಬಿದ್ದಿರುವುದನ್ನು ಸಹೋದ್ಯೋಗಿಗಳು ಗಮನಿಸಿದ್ದಾರೆ. ಕೂಡಲೇ ತಲಘಟ್ಟಪುರ ಪೊಲೀಸರು ಹಾಗು ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಕಗ್ಗಲೀಪುರ ವಲಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

ಕಾಡಾನೆ ದಾಳಿಗೆ ರೈತ ಬಲಿ: ಕೆಲವು ದಿನಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ದನ ಮೇಯಿಸಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೊಳ್ಳೆಪುರ ದೊಡ್ಡಿ ಗ್ರಾಮದ ಬಳಿ ನಡೆದಿತ್ತು. ಸೊಳ್ಳೆಪುರ ದೊಡ್ಡಿ ನಿವಾಸಿ ಅಲಗಪ್ಪ ಮೃತಪಟ್ಟಿದ್ದರು. ದನಗಳನ್ನು ಮೇಯಿಸಲೆಂದು ಹಲಗಪ್ಪ ನಿತ್ಯ ಕಾಡಿಗೆ ಹೋಗುತ್ತಿದ್ದರು. ಎಂದಿನಂತೆ ಹೋಗಿದ್ದಾಗ ಆನೆ ದಾಳಿ ನಡೆಸಿದೆ.

ಕಾಡಾನೆ ದಾಳಿಯಲ್ಲಿ ಇಬ್ಬರು ಸಾವು: ಮತ್ತೊಂದು ಪ್ರಕರಣದಲ್ಲಿ ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಬಲಿಯಾಗಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಸಮೀಪದ ಮೀನಾಡಿ ಎಂಬಲ್ಲಿ ನಡೆದಿತ್ತು. ರಂಜಿತಾ ಎಂಬಾಕೆ ಮೃತಪಟ್ಟಿದ್ದರು. ಮಹಿಳೆ ಹಾಲು ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದಾಗ ಆನೆ ದಾಳಿ ಮಾಡಿದೆ.

ಬಳಿಕ ಅದೇ ಆನೆ ಅಲ್ಲೇ ಇದ್ದ ಸ್ಥಳೀಯ ನಿವಾಸಿ ರಮೇಶ್ ರೈ ಎಂಬವರ ಮೇಲೆರಗಿತ್ತು. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ರೈ ಸ್ಥಳದಲ್ಲಿಯೇ ಅಸುನೀಗಿದ್ದರು. ರಕ್ಷಣೆಗೆ ಯತ್ನಿಸಿದ್ದರೂ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇಬ್ಬರೂ ಸಾವಿಗೀಡಾಗಿದ್ದರು.

ಅರಣ್ಯ ಇಲಾಖೆ ಕಾವಲುಗಾರನ ಮೇಲೆ ದಾಳಿ: ಇತ್ತೀಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ಪ್ರದೇಶದ ಸೊಳ್ಳಾಪುರ ಎಂಬಲ್ಲಿ ಅರಣ್ಯ ಇಲಾಖೆಯ ಕಾವಲುಗಾರನ ಮೇಲೆ ಆನೆ ದಾಳಿ ನಡೆಸಿದ್ದು ಮಹದೇವಸ್ವಾಮಿ ಎಂಬುವವರು ಮೃತಪಟ್ಟಿದ್ದರು. ಮಹದೇವಸ್ವಾಮಿ ರಾತ್ರಿ ವೇಳೆ ಕಾವಲಿನಲ್ಲಿದ್ದಾಗ ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಬಳಿಕ ಮೃತಪಟ್ಟಿದ್ದರು. ಅಲ್ಲದೇ ಅಲ್ಲೇ ಇದ್ದ ಮತ್ತೊಬ್ಬ ವಾಚರ್​ ಮೇಲೂ ಆನೆ ದಾಳಿ ನಡೆಸಿತ್ತು. ಆದರೆ ಅವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

ಇದನ್ನೂ ಓದಿ: ದನ ಮೇಯಿಸಲು ಹೋಗಿದ್ದ ರೈತ ಕಾಡಾನೆ ದಾಳಿಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.