ಬೆಂಗಳೂರು : ಕೋವಿಡ್ ಲಾಕ್ಡೌನ್, ನೌಕರರ ಮುಷ್ಕರ ಸೇರಿದಂತೆ ನಾನಾ ಸಮಸ್ಯೆಗಳಿಂದ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಭಾರೀ ನಷ್ಟ ಉಂಟಾಗಿದೆ.
ಲಾಕ್ಡೌನ್ ಜಾರಿಯಾದಾಗಿನಿಂದ ಇಲ್ಲಿಯವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಬರೋಬ್ಬರಿ 560 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಇದರಿಂದ ನೌಕರರಿಗೆ ವೇತನ ಕೊಡಲೂ ಹೆಣಗಾಡುವಂತಾಗಿದೆ.
ಯಾವ ನಿಗಮಗಳಿಗೆ ಎಷ್ಟು ನಷ್ಟ? ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗುತ್ತದೆ. ಲಾಕ್ ಡೌನ್ ಜಾರಿಯಾಗಿ 40 ದಿನಗಳು ಕಳೆದಿದೆ. ಈ ಅವಧಿಯಲ್ಲಿ ಕೇವಲ ಬಿಎಂಟಿಸಿಗೆ ಮಾತ್ರ 120 ಕೋಟಿ ರೂ. ನಷ್ಟ ಉಂಟಾಗಿದೆ. ಬಿಎಂಟಿಸಿಯ ಪ್ರಸ್ತುತ ಆದಾಯ ಸುಮಾರು 2.5 ರಿಂದ 3 ಕೋಟಿ ರೂ. ಇದೆ.
ಕೆಎಸ್ಆರ್ಟಿಸಿಯ ನಿತ್ಯದ ಆದಾಯ 7 ಕೋಟಿ ರೂ. ಈಗ 40 ದಿನದ ಲಾಕ್ಡೌನ್ನಿಂದ ಆಗಿರುವ ಒಟ್ಟು ನಷ್ಟ 280 ಕೋಟಿ ರೂ. ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಸ್ತುತ ದಿನದ ಆದಾಯ 2 ಕೋಟಿ ರೂ. 40 ದಿನದಲ್ಲಿ ಆದ ನಷ್ಟ 80 ಕೋಟಿ ರೂ. ಈಶಾನ್ಯ ಸಾರಿಗೆ ಸಂಸ್ಥೆಯ ದಿನದ ಆದಾಯ 2 ಕೋಟಿ ರೂ. 40 ದಿನದಲ್ಲಿ 80 ಕೋಟಿ ರೂ. ನಷ್ಟ ಸಂಭವಿಸಿದೆ.
ಏಪ್ರಿಲ್ 28 ರಿಂದ ಇಂದಿನವರೆಗಿನ (ಜೂನ್7) ನಷ್ಟದ ಮಾಹಿತಿ ಇದಾಗಿದೆ. ಲಾಕ್ಡೌನ್ನಿಂದ ಬಸ್ಗಳು ರಸ್ತೆಗಿಳಯದೆ ನಾಲ್ಕೂ ನಿಗಮಗಳಿಗೆ ಸಾಲದ ಭಾರೀ ನಷ್ಟದ ಹೊರೆ ಬಿದ್ದಿದೆ.