ETV Bharat / state

Bengaluru crime: ಜಾಮೀನು ಕೊಡಿಸುವಂತೆ ವಕೀಲರ ಮೇಲೆ ಹಲ್ಲೆ.. ಆರೋಪಿಗಳ ಬಂಧನ - ಈಟಿವಿ ಭಾರತ್​ ಕನ್ನಡ ನ್ಯೂಸ್​

ವಕೀಲರ ಮೇಲೆ ಹಲ್ಲೆ ಮಾಡಿದ್ದ ಮೂವರು ಆರೋಪಿಗಳನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಹೆಡಮುರಿ ಕಟ್ಟಿದ್ದಾರೆ.

ವಕೀಲರ ಮೇಲೆ ಹಲ್ಲೆ
ವಕೀಲರ ಮೇಲೆ ಹಲ್ಲೆ
author img

By

Published : Aug 3, 2023, 3:22 PM IST

Updated : Aug 3, 2023, 4:03 PM IST

ಬೆಂಗಳೂರು : ವಕೀಲರನ್ನು ಅಕ್ರಮವಾಗಿರಿಸಿಕೊಂಡು ಜಾಮೀನು ಕೊಡಿಸುವಂತೆ ಹಲ್ಲೆ ಮಾಡಿ, ಹಣ ದೋಚಿದ್ದ ರೌಡಿಶೀಟರ್ ಸಹಿತ ಮೂವರು ಆರೋಪಿಗಳನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ರಾಜೇಶ್, ಮಂಜ ಹಾಗೂ ನವೀನ ಬಂಧಿತ ಆರೋಪಿಗಳು. ವಕೀಲ ಗಿರಿಧರ್ ಎಂಬುವರು ನೀಡಿದ ದೂರಿನನ್ವಯ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ‌.

ದೂರುದಾರ ಗಿರಿಧರ್ ತಮ್ಮ ಸ್ನೇಹಿತನಾಗಿದ್ದ ಹರ್ಷಿತ್ ಜೊತೆ ಜುಲೈ 24ರಂದು ಕಾರಿನಲ್ಲಿ ತೆರಳಿದ್ದರು. ಈ ವೇಳೆ ಸಮೀಪದಲ್ಲೇ ತನ್ನ ಸ್ನೇಹಿತ ರಾಜೇಶ್​ನ ಮನೆಯಿದೆ, ಭೇಟಿಯಾಗೋಣ' ಎಂದು ಹೇಳಿದ್ದ ಹರ್ಷಿತ್ ನೊಂದಿಗೆ ಗಿರಿಧರ್ ತೆರಳಿದ್ದರು. ಮನೆಯಲ್ಲಿ ರಾಜೇಶ್, ಜಾನ್, ಭರತ್ ಎಂಬಾತ ಸೇರಿದಂತೆ ಐವರು ಇದ್ದರು. ಮನೆಯಲ್ಲಿ ಏಕಾಏಕಿ ಗಿರಿಧರ್​ಗೆ 'ನೀನು ಏನು ಮಾಡುತ್ತೀಯೋ ಗೊತ್ತಿಲ್ಲ. ತಕ್ಷಣ 5 ಲಕ್ಷ ರೂ. ತರಿಸಿಕೊಡಬೇಕು. ಹಾಗು ನಮ್ಮ ಕಡೆಯ ಎಂಟು‌ ಜನರಿಗೆ ಜಾಮೀನು ಕೊಡಿಸಬೇಕು ಎಂದು ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಾಗಿತ್ತು.

ಇದನ್ನೂ ಓದಿ : ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್ ಪತ್ತೆ​: ಬಂಧಿತರ ಸಂಖ್ಯೆ 5ಕ್ಕೆ ಏರಿಕೆ

ಹಣ ಇಲ್ಲ ಎಂದಾಗ ಕಾರಿನ ಜಾಕ್ ರಾಡ್, ಸ್ಪಾನರ್​ನಿಂದ ಗಿರಿಧರ್ ಮೇಲೆ ರಾತ್ರಿಯಿಡೀ ಹಲ್ಲೆ ಮಾಡಿ, ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ಕೂರಿಸಿದ್ದರು. ಬಳಿಕ ಗಿರಿಧರ್​ ಅವರ ಬಳಿಯಿದ್ದ ಹತ್ತು ಸಾವಿರ ರೂ ಕಿತ್ತುಕೊಂಡಿದ್ದರು. ಮಾರನೇ ದಿನ ಬೆಳಗ್ಗೆ 'ಪೊಲೀಸರಿಗೆ ಹೇಳಿದರೆ ಅಥವಾ ಸಂಜೆಯೊಳಗೆ ಹಣ ಕೊಡದಿದ್ದರೆ ಹುಡುಗರನ್ನು ಬಿಟ್ಟು ಕೊಲೆ ಮಾಡಿಸುವುದಾಗಿ' ಬೆದರಿಕೆ ಹಾಕಿ ಬಿಟ್ಟು ಕಳಿಸಿದ್ದರು. ಬಳಿಕ ಗಿರಿಧರ್ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಗೆ ದೂರು ನೀಡಿದ್ದರು. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸದ್ಯ ರಾಜೇಶ್, ಮಂಜ ಹಾಗೂ ನವೀನ್​ನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಮೂವರು ಡ್ರಗ್ ಪೆಡ್ಲರ್ಸ್​ ಬಂಧನ : ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್​​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ಬಸ್ತಿಗುಡ್ಡೆಯ ಮೊಹಮ್ಮದ್ ಹಫೀಝ್ (35), ನಂದಾವರದ ಅಮೀರ್ (34) ಹಾಗೂ ಪಾಣೆಮಂಗಳೂರು ದಾಸರಗುಡ್ಡೆಯ ಜಾಕೀರ್ ಹುಸೇನ್ (28) ಬಂಧಿತ ಆರೋಪಿಗಳು.

ದಾಳಿ ನಡೆಸಿ ವೇಳೆ ಆರೋಪಿಗಳಿಂದ 200 ಗ್ರಾಂ ಎಂಡಿಎಂಎ ಅನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತು ಖರೀದಿಸಿಕೊಂಡು ಬಂದು ಉಳ್ಳಾಲ ತಾಲೂಕಿನ ತಲಪಾಡಿ ಗ್ರಾಮದ ತಲಪಾಡಿ - ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಎಂಬಲ್ಲಿ ಕಾರಿನಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು ಸಿಸಿಬಿ ಕಾರ್ಯಾಚರಣೆ: ಮೂವರು ಡ್ರಗ್ ಪೆಡ್ಲರ್ಸ್​ ಬಂಧನ

Last Updated : Aug 3, 2023, 4:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.