ETV Bharat / state

Bengaluru crime: ಮದ್ಯ ವ್ಯಸನಿ ಮಗನಿಗೆ ಬೆಂಕಿ ಹಚ್ಚಿ ಕೊಂದ ತಾಯಿ - bengaluru crime news

ಮದ್ಯ ವ್ಯಸನಿ ಮಗನ ಕಾಟಕ್ಕೆ ರೋಸಿ ಹೋದ ತಾಯಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಮೃತ ಚಾಂದ್ ಪಾಷಾ
ಮೃತ ಚಾಂದ್ ಪಾಷಾ
author img

By

Published : Jul 18, 2023, 1:18 PM IST

ಪ್ರಕರಣದ ಬಗ್ಗೆ ಡಿಸಿಪಿ ಹೇಳಿಕೆ

ಬೆಂಗಳೂರು: ಮದ್ಯಪಾನ ಚಟಕ್ಕೆ ದಾಸನಾಗಿದ್ದ ಮಗನನ್ನ ತಾಯಿಯೊಬ್ಬಳು ಪೆಟ್ರೋಲ್ ಎರಚಿ ಸುಟ್ಟು ಹಾಕಿರುವ ಘಟನೆ ಸೋಮವಾರ ಸಂಜೆ ಸೋಲದೇವನಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಾಂದ್ ಪಾಷಾ (40) ಕೊಲೆಯಾದ ವ್ಯಕ್ತಿ. ಆತನ ತಾಯಿ‌ ಸೋಫಿಯಾಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರತಿ ದಿನ ಕುಡಿದು ಬಂದು ಮನೆಯವರ ಮೇಲೆ ಹಲ್ಲೆ ಮಾಡುತ್ತಿದ್ದ ಚಾಂದ್ ಪಾಷಾನ ಉಪಟಳದಿಂದ ಬೇಸತ್ತಿದ್ದ ಆತನ ಪತ್ನಿ ಬಿಟ್ಟು ಹೋಗಿದ್ದಳು. ಹೀಗಾಗಿ ಪಾಷಾ ತನ್ನ ತಾಯಿ ಜೊತೆ ವಾಸವಾಗಿದ್ದ. ಸೋಮವಾರ ಕುಡಿದುಕೊಂಡು ಬಂದು ತಾಯಿ ಜೊತೆ ಗಲಾಟೆ ಮಾಡಿದ್ದನು. ಬಳಿಕ ಸಂಜೆ 4:45ರ ಸುಮಾರಿಗೆ ಮತ್ತೆ ಕಂಠಪೂರ್ತಿ ಕುಡಿದು ಬಂದು ಮನೆಯ ಹೊರಗಡೆ ಕುಳಿತಿದ್ದ.

ಸಿಟ್ಟಿಗೆದ್ದ ಆತನ ತಾಯಿ ಅವನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚುವುದಾಗಿ ಭಯಪಡಿಸಲು ಯತ್ನಿಸಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದಾಗ ಬೆಂಕಿ ಹಚ್ಚಿದ್ದಾಳೆ. ಪರಿಣಾಮ ಚಾಂದ್ ಪಾಷಾ ಸ್ಥಳದಲ್ಲೇ ಸುಟ್ಟು ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಆರೋಪಿ ತಾಯಿ ಸೋಫಿಯಾಳನ್ನು ಬಂಧಿಸಿರುವುದಾಗಿ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದಲ್ಲೂ ಇಂತಹದ್ದೇ ಘಟನೆ: ಕುಡಿತದ ಚಟಕ್ಕೆ ದಾಸನಾಗಿ ಹೆತ್ತ ತಾಯಿ ಮೇಲೆಯೇ ಹಲ್ಲೆ ಮಾಡಿದ್ದ ಮಗನನ್ನು ತಂದೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಕುಡಿದು ಬಂದು ಮನೆಯಲ್ಲಿ ನಿತ್ಯ ಕಿರುಕುಳ ನೀಡುತ್ತಿದ್ದ ಮಗನ ಕಾಟ ತಾಳಲಾರದೇ ಸ್ವತಃ ತಂದೆಯೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಆದರ್ಶ್ (28) ಕೊಲೆಯಾದ ಮಗ, ಜಯರಾಮಯ್ಯ (58) ಕೊಲೆ ಮಾಡಿದ ತಂದೆ.

ಜಯರಾಮಯ್ಯನಿಗೆ ಆದರ್ಶ್ ಏಕೈಕ ಪುತ್ರನಾಗಿದ್ದ. ಪ್ರತಿನಿತ್ಯ ಕುಡಿದು ಬಂದು ಗಲಾಟೆ ಮಾಡಿ ಮನೆಯಲ್ಲಿ ಕಿರಕುಳ ನೀಡ್ತಿದ್ದ. ಕೊಲೆಗೂ ಮೂರು ದಿನ ಹಿಂದೆ ಕುಡಿದು ಬಂದು ತಂದೆಯ ಬಳಿ ಜಗಳ ಮಾಡಿದ್ದ. ಈ ವೇಳೆ ತಾಯಿಯ ಮೇಲೆ ಹಲ್ಲೆ ಮಾಡಿದ್ದ. ಮಗನ ಉಪಟಳಗಳನ್ನು ಸಹಿಸಿಕೊಂಡಿದ್ದ ತಂದೆ ಕೊನೆಗೆ ತಮ್ಮ ತೋಟದ ಬಳಿ ಹಲಸಿನ ಮರಕ್ಕೆ ಕಟ್ಟಿ ಪೆಟ್ರೋಲ್ ಸುರಿದು ಸುಟ್ಟು ಕೊಲೆಗೈದಿದ್ದ. ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Doddaballapur Crime: ಕುಡಿದು ಬಂದು ನಿತ್ಯ ಕಿರುಕುಳ, ತಾಯಿ ಮೇಲೆ ಹಲ್ಲೆ.. ಪುತ್ರನನ್ನು ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಕೊಂದ ತಂದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.