ETV Bharat / state

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರೀಡೆಗಳ ಕಲರವ - ಕೇಂದ್ರ ಕಾರಾಗೃಹದಲ್ಲಿ ಕ್ರಿಕೆಟ್ ಆಯೋಜನೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ಕ್ರೀಡೆಗಳ ಕಲರವ ಜೋರಾಗಿತ್ತು. ಕಾರಾಗೃಹದ ಕೈದಿಗಳ ನಡುವೆ ಸೌಹಾರ್ದ ಕ್ರಿಕೆಟ್, ಕೇರಮ್ ಪಂದ್ಯ ಆಯೋಜಿಸಲಾಗಿತ್ತು. ಜೊತೆಗೆ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಪ್ರಾಯೋಜಕತ್ವದಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಕೇರಮ್​, ಚೆಸ್ ಹಾಗೂ ಬಾಸ್ಕೆಟ್‌ ಬಾಲ್ ಕುರಿತು ತರಬೇತುದಾರರಿಂದ 1 ತಿಂಗಳ ತರಬೇತಿಯನ್ನು ನೀಡಲಾಗುತ್ತಿದೆ.

sports
ಪರಪ್ಪನ ಅಗ್ರಹಾರದಲ್ಲಿ ಕ್ರೀಡೆ ಆಯೋಜನೆ
author img

By

Published : Mar 28, 2022, 8:38 AM IST

ಬೆಂಗಳೂರು: ಬಿರು ಬೇಸಿಗೆಯ ಬಿಡುವಿನ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಜೀವನೋತ್ಸಾಹ ತುಂಬುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ಪ್ರಾಯೋಜಕತ್ವದಲ್ಲಿ ದೇಶದ 14 ರಾಜ್ಯಗಳಲ್ಲಿನ ಕೇಂದ್ರ ಕಾರಾಗೃಹಗಳಲ್ಲಿ ವಾಲಿಬಾಲ್, ಬ್ಯಾಡ್ಮಿಂಟನ್, ಕೇರಮ್​, ಚೆಸ್ ಹಾಗೂ ಬಾಸ್ಕೆಟ್‌ ಬಾಲ್ ಕುರಿತು ತರಬೇತುದಾರರಿಂದ 1 ತಿಂಗಳ ತರಬೇತಿ ನೀಡಲಾಗುತ್ತಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮಾನ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕಾರಾಗೃಹಗಳ ಮಹಾ ನಿರೀಕ್ಷಕ ಅಲೋಕ್ ಮೋಹನ್ ಅವರು ಇಂಡಿಯನ್​ ಆಯಿಲ್​ ಕಾರ್ಪೋರೇಷನ್ ಅಧ್ಯಕ್ಷರ ಉಪಸ್ಥಿತಿಯಲ್ಲಿ "Prison To Pride" ಎಂಬ ಧ್ಯೇಯವಾಕ್ಯದೊಂದಿಗೆ ನಿನ್ನೆ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಸೌಹಾರ್ದ ಕ್ರಿಕೆಟ್ ಪಂದ್ಯ, ಕೇರಮ್, ಬ್ಯಾಡ್ಮಿಂಟನ್ ಆಯೋಜಿಸಲಾಗಿತ್ತು.

ಪರಪ್ಪನ ಅಗ್ರಹಾರದಲ್ಲಿ ಕ್ರೀಡೆ ಆಯೋಜನೆ

ಇದನ್ನೂ ಓದಿ: ಮದ್ಯದಿಂದಲೇ ಅಭಿಷೇಕ, ಸಿಗರೇಟ್​ ಆರತಿ: ಕಾರವಾರದಲ್ಲೊಂದು ವಿಶಿಷ್ಟ ದೇವರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.