ಕ್ರಿಕೆಟ್ ನೋಡಲು ಎಷ್ಟು ಮಜವೂ ಅಷ್ಟೇ ಮಜ ಕಮೆಂಟರಿ ಕೇಳುವುದರಲ್ಲಿ ಇರುತ್ತದೆ. ಆಟಗಾರರ ಚಲನ ವಲನ ಅವನ ಸನ್ನೆಗಳನ್ನು ಆಟದ ಅನುಭವ ಇರುವ ವೀಕ್ಷಕ ವಿವರಣೆಗಾರರು ವಿಶ್ಲೇಷಿಸುವ ರೀತಿ ಬಹಳಾ ಜನ ಇಷ್ಟ ಪಡುತ್ತಾರೆ. 2011ರ ವಿಶ್ವ ಕಪ್ನ ಕೊನೆಯ ಬಾಲ್ಗೆ ಧೋನಿ ಸಿಕ್ಸ್ ಹೊಡೆದಾಗ ಮಾಜಿ ಕ್ರಿಕೆಟಿಗ, ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ರವಿಶಾಸ್ತ್ರಿ ಅವರ ಇಂಗ್ಲಿಷ್ ಕಮೆಂಟರಿ ಇಂದಿಗೂ ಕ್ರಿಕೆಟ್ ಅಭಿನಮಾನಿಗಳ ಕಿವಿಯಲ್ಲಿ ಗುನಗುಡುತ್ತಿರುತ್ತದೆ.
ಹರ್ಷ ಭೋಗ್ಲೆ, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ಸಂಜಯ್ ಮಾಂಜ್ರೇಕರ್ ಮತ್ತು ಆಕಾಶ್ ಚೋಪ್ರಾ ಅವರ ಕಮೆಂಟರಿ ಧ್ವನಿಗಳು ಇಂದಿಗೂ ಕ್ರಿಕೆಟ್ ಪ್ರಿಯರಿಗೆ ನೆನಪಿರುತ್ತದೆ. ಇತ್ತಿಚಿಗೆ ಕ್ರಿಕೆಟ್ ಕಮೆಂಟರಿ ಎಲ್ಲಾ ಭಾಷೆಗಳಲ್ಲೂ ಸಿಗುತ್ತಿದೆ. ಹಿಂದೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಸಿಗುತ್ತಿತ್ತು.
-
संस्कृत में सुनिए क्रिकेट कॉमेंट्री।
— Shubhankar Mishra (@shubhankrmishra) October 3, 2022 " class="align-text-top noRightClick twitterSection" data="
'Social Media' पर वायरल हो रहे वीडियो को लोग खूब पसंद कर रहें हैं। pic.twitter.com/Vk4xNVQCRh
">संस्कृत में सुनिए क्रिकेट कॉमेंट्री।
— Shubhankar Mishra (@shubhankrmishra) October 3, 2022
'Social Media' पर वायरल हो रहे वीडियो को लोग खूब पसंद कर रहें हैं। pic.twitter.com/Vk4xNVQCRhसंस्कृत में सुनिए क्रिकेट कॉमेंट्री।
— Shubhankar Mishra (@shubhankrmishra) October 3, 2022
'Social Media' पर वायरल हो रहे वीडियो को लोग खूब पसंद कर रहें हैं। pic.twitter.com/Vk4xNVQCRh
ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಗಲ್ಲಿ ಕ್ರಿಕೆಟ್ನ ಸಂಸ್ಕೃತ ಕಮೆಂಟರಿ ಫುಲ್ ವೈರಲ್ ಆಗುತ್ತಿದೆ. ಯುವಕನೊಬ್ಬ ಲೀಲಾಜಾಲವಾಗಿ ಸಂಸ್ಕೃತದಲ್ಲಿ ಕ್ರಿಕೆಟ್ ಕಮೆಂಟರಿ ಮಾಡುತ್ತಿದ್ದಾನೆ. ಅದರ ಜೊತೆಗೆ ಆಟ ನೋಡಲು ಬಂದಿರುವ ಯುವತಿಯರೊಂದಿಗೆ ಸಂಸ್ಕೃತದಲ್ಲಿ ಮಾತನಾಡುತ್ತಾನೆ. ಯುವತಿಯು ಸಂಸ್ಕೃತದಲ್ಲೇ ಉತ್ತರಿಸುತ್ತಾಳೆ.
ಈ ವಿಡಿಯೋವು ಟ್ವಿಟರ್ನಲ್ಲಿ ಹೆಚ್ಚು ಶೇರ್ ಆಗುತ್ತಿದೆ. ಪರ್ತಕರ್ತರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಹೆಚ್ಚು ಶೇರ್ ಆಗುತ್ತಿರುವ ಯುವಕನ ಸಂಸ್ಕೃತ ಕಮೆಂಟರಿ ಎಂದು ಬರೆದು ಕೊಂಡಿದ್ದಾರೆ. ಬೆಂಗಳೂರಿನ ಗಲ್ಲಿಯಲ್ಲಿ ಆಡುತ್ತಿರುವುದು ಯುವಕನ ಕಮೆಂಟರಿಯಿಂದ ಗೊತ್ತಾಗುತ್ತದೆ.
ಇದನ್ನೂ ಓದಿ : ವಿಶ್ವಕಪ್ ಪಂದ್ಯಗಳ ಹಿನ್ನೆಲೆ: ಮಂಗಳವಾರದ ಟಿ 20ಯಿಂದ ಕೊಹ್ಲಿಗೆ ವಿಶ್ರಾಂತಿ ಸಾಧ್ಯತೆ