ಬೆಂಗಳೂರು: ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದನೇ ಅಲೆಯಲ್ಲೂ ಎಲ್ಲಾ ಆಸ್ಪತ್ರೆಗಳಲ್ಲೂ ಬೆಡ್ ಫುಲ್ ಆಗಿತ್ತು. ಈಗಲೂ ಅದೇ ರೀತಿ ಎಲ್ಲಾ ಆಸ್ಪತ್ರೆಗಳಲ್ಲೂ ಬೆಡ್ ಫುಲ್ ಆಗಿದೆ. ಈಗ ಬೆಡ್ ಯಾವುದೇ ರೀತಿಯಲ್ಲೂ ಹೆಚ್ಚಾಗಿಲ್ಲ. ಅದೇ ಬೆಡ್ ವ್ಯವಸ್ಥೆ ಇದೆ. ಆದ್ರೆ ಈಗ ಎಲ್ಲಿಂದ ಆಕ್ಸಿಜನ್ ಶಾರ್ಟೆಜ್ ಆಯ್ತು? ಯಾರೋ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ಈ ಕೂಡಲೇ ಅಧಿಕಾರಗಳು ಕ್ರಮ ಕೈಗೊಳ್ಳಬೇಕು. ಎಲ್ಲೋ ಗೊಂದಲ ಮಾಡಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. ಈಗ ಆಕ್ಸಿಜನ್ ಕೊರತೆ ಇಲ್ಲ. ಇದ್ದಕ್ಕಿದ್ದ ಹಾಗೆ ಶಾರ್ಟೆಜ್ ಹೇಗಾಯ್ತು?. ಸಂಬಂಧಪಟ್ಟ ಡ್ರಗ್ಸ್ ಕಂಟ್ರೋಲರ್ಗಳು ಪಬ್ಲಿಕ್ ಡೋಮೈನ್ನಲ್ಲಿ ಹಾಕಬೇಕು. ಕೂಡಲೇ ಅಧಿಕಾರಿಗಳು ಇದರ ಕಡೆ ಗಮನ ಕೊಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಜೀವನಾಂಶ ಬಹಳ ಮುಖ್ಯ:
ವೀಕೆಂಡ್ ಕರ್ಫ್ಯೂ ಮುಂದೂಡಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೀವನಾಂಶ ಬಹಳ ಮುಖ್ಯ. ಜೀವನ ನಡೆಯಬೇಕು, ಹಾಗೇ ಆರೋಗ್ಯ ಸಹ ಮುಖ್ಯ. ಹೀಗಾಗಿ ಇದನ್ನು ಮುಂದುವರೆಸಬೇಕಾ, ಬೇಡ್ವಾ ಎಂಬುದರ ಬಗ್ಗೆ ಮುಂದೆ ನಿರ್ಧರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈಗಿರುವ ಕರ್ಫ್ಯೂ ಮುಂದುವರೆಸುವ ಬಗ್ಗೆ ಸಲಹೆ ಇದೆ. ಜನರ ಬದುಕಿಗೆ ಅನುವು ಮಾಡುವ ಮೂಲಕ ಕರ್ಫ್ಯೂ ಕ್ರಮ ಮಾಡಿದ್ದೇವೆ. ಸೂಕ್ತ ಕಾಲಕ್ಕೆ ಸೂಕ್ತವಾದ ನಿರ್ಧಾರವನ್ನು ಸರ್ಕಾರ ಮಾಡಲಿದೆ ಎಂದರು.
ಒಂದು ಕೋಟಿ ಲಸಿಕೆ ಖರೀದಿ ವಿಚಾರ ಸರ್ಕಾರದ ಮುಂದಿದೆ. ಯಾವ ಯಾವ ಬಡವರಿಗೆ ಹೇಗೆ ಕೊಡಬೇಕು ಎಂಬುದರ ಬಗ್ಗೆ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಇದರ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.