ETV Bharat / state

ಬಿಜೆಪಿ - ಜೆಡಿಎಸ್​ ಮೈತ್ರಿಗೆ ಕೇರಳದ ಸಿಪಿಎಂ ಬೆಂಬಲಿಸುತ್ತದೆ ಎಂದು ನಾನು ಹೇಳಿಲ್ಲ: ದೇವೇಗೌಡರ ಸ್ಪಷ್ಟನೆ - ದೇವೇಗೌಡ ಮತ್ತು ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಒಪ್ಪಿಗೆಯೊಂದಿಗೆ ಬಿಜೆಪಿ ಜೊತೆ ಜೆಡಿಎಸ್​ ಸೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ತಮ್ಮ ಹೇಳಿಕೆ ಬಗ್ಗೆ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.

Etv Bharat
Etv Bharat
author img

By PTI

Published : Oct 21, 2023, 1:15 PM IST

ಬೆಂಗಳೂರು: ಕರ್ನಾಟಕದಲ್ಲಿ ಜೆಡಿಎಸ್​ ಮತ್ತು ಬಿಜೆಪಿ​ ಮೈತ್ರಿಯನ್ನು ಕೇರಳದ ಆಡಳಿತಾರೂಢ ಸಿಪಿಎಂ ಬೆಂಬಲಿಸಿದೆ ಎಂದು ನಾನು ಹೇಳಿಲ್ಲ ಅಂತಾ ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್​​ ಮೈತ್ರಿಗೆ ಸಮ್ಮತಿಸಿದ್ದಾರೆ ಎಂಬರ್ಥ ದೇವೇಗೌಡರ ಹೇಳಿಕೆಯು ಕೇರಳ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಸ್ವತಃ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

''ಸಿಪಿಎಂ ಕುರಿತ ನನ್ನ ಹೇಳಿಕೆಯ ಬಗ್ಗೆ ಕೆಲವು ಗೊಂದಲಗಳು ಉಂಟಾಗಿವೆ. ನನ್ನ ಕಮ್ಯುನಿಸ್ಟ್​ ಸ್ನೇಹಿತರು ನಾನು ಹೇಳಿದ್ದನ್ನು ಅಥವಾ ನಾನು ಹೇಳಿದ ಸಂದರ್ಭವನ್ನು ಅನುಸರಿಸಿದಂತೆ ಕಾಣುತ್ತಿಲ್ಲ. ಕೇರಳದ ಸಿಪಿಎಂ ಬಿಜೆಪಿ-ಜೆಡಿಎಸ್​ ಮೈತ್ರಿಯನ್ನು ಬೆಂಬಲಿಸುತ್ತದೆ ಎಂದು ನಾನು ಹೇಳಿಲ್ಲ'' ಎಂದು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಹೆಚ್​ ಡಿ ದೇವೇಗೌಡರು ಪೋಸ್ಟ್​ ಮಾಡಿದ್ದಾರೆ.

  • There is some confusion about my statement on the CPM. My Communist friends do not seem to have followed what I said nor the context in which I said. I never said the CPM in Kerala supports the BJP-JDS alliance. I only said my party unit in Kerala is getting along with 1/2

    — H D Deve Gowda (@H_D_Devegowda) October 20, 2023 " class="align-text-top noRightClick twitterSection" data=" ">

''ಬಿಜೆಪಿಯೊಂದಿಗಿನ ನಮ್ಮ ಮೈತ್ರಿಯ ನಂತರ ಕರ್ನಾಟಕದ ಹೊರಗಿನ ನನ್ನ ಪಕ್ಷದ ಘಟಕಗಳೊಳಗಿನ ವಿಷಯಗಳು ಬಗೆಹರಿಯದೆ ಉಳಿದಿದೆ. ಇದರ ಕಾರಣ ಕೇರಳದ ನನ್ನ ಪಕ್ಷದ ಘಟಕವು ಎಲ್‌ಡಿಎಫ್ ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದಷ್ಟೇ ನಾನು ಹೇಳಿದ್ದೇನೆ'' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: BJP-JDS alliance​: ಜೆಡಿಎಸ್ ಕೇರಳ​ ಘಟಕದಲ್ಲಿ ಬಿಕ್ಕಟ್ಟು ಉದ್ಭವ.. ಸಿಪಿಎಂ ಜೊತೆಗೆ ಉಳಿಯಲು ನಾಯಕರ ತೀರ್ಮಾನ

ಗುರುವಾರ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು, ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ ಎಂ ಇಬ್ರಾಹಿಂ ಅವರನ್ನು ಪದಚ್ಯುತಗೊಳಿಸಿದ್ದರು. ಆ ಸ್ಥಾನಕ್ಕೆ ಪುತ್ರ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನೇಮಿಸಿದ್ದರು. ಈ ಕುರಿತು ಮಾಧ್ಯಮಗೋಷ್ಟಿ ನಡೆಸಿದ್ದ ಅವರು, ಕರ್ನಾಟಕ ಹೊರತಾಗಿ ಇತರ ರಾಜ್ಯಗಳಲ್ಲಿರುವ ಜೆಡಿಎಸ್​ ಘಟಕಗಳ ಬಗ್ಗೆ ಮಾತನಾಡಿದ್ದರು. ಅದರಲ್ಲೂ, ಕೇರಳದಲ್ಲಿ ಇಬ್ಬರನ್ನು ಶಾಸಕರನ್ನು ಹೊಂದಿರುವ ಜೆಡಿಎಸ್​, ಇಲ್ಲಿ ಸಿಪಿಎಂ ನೇತೃತ್ವದ ಎಲ್​ಡಿಎಫ್​ ಸರ್ಕಾರದ ಭಾಗವಾಗಿದೆ. ಅಲ್ಲದೇ, ಸಿಎಂ ಪಿಣರಾಯಿ ವಿಜಯನ್ ಸಂಪುಟದಲ್ಲಿ ಜೆಡಿಎಸ್​ನ ಒಬ್ಬರಿಗೆ ಸಚಿವ ಸ್ಥಾನವನ್ನೂ ನೀಡಲಾಗಿದೆ.

ಕೇರಳದ ವಿಷಯವಾಗಿ ಮಾತನಾಡಿದ್ದ ದೇವೇಗೌಡರು, ಕೇರಳದ ಜೆಡಿಎಸ್​ ರಾಜ್ಯ ಘಟಕ ನಮ್ಮ ಜೊತೆಗಿದೆ. ಕರ್ನಾಟಕದಲ್ಲಿ ಹೊಸ ರಾಜಕೀಯ ಮೈತ್ರಿ ಏರ್ಪಟ್ಟ ಸಂದರ್ಭ ಅಲ್ಲಿನ ನಮ್ಮ ಸಚಿವರಿಗೆ ಗೊತ್ತಿದೆ. ಕೇರಳದ ಎಡಪಕ್ಷದ ಮುಖ್ಯಮಂತ್ರಿಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ಬಿಜೆಪಿ ಜೊತೆ ಸೇರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೇರಳದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು.

ಅಲ್ಲದೇ, ಸಿಎಂ ಪಿಣರಾಯಿ ವಿಜಯನ್ ಖುದ್ದು ದೇವೇಗೌಡರ ಹೇಳಿಕೆಯನ್ನು ತಳ್ಳಿ ಹಾಕಿದ್ದರು. ''ದೇವೇಗೌಡರ ಇತ್ತೀಚಿನ ಹೇಳಿಕೆಯಿಂದ ನನಗೆ ಸಂಪೂರ್ಣ ಆಶ್ಚರ್ಯವಾಗಿದೆ. ಜೆಡಿಎಸ್-ಬಿಜೆಪಿ ಮೈತ್ರಿಕೂಟವನ್ನು ನಾನು ಬೆಂಬಲಿಸುತ್ತೇನೆ ಎಂದು ಬಿಂಬಿಸುವ ಈ ಕಲ್ಪನೆಯು ಯಾವುದೇ ಭ್ರಮೆಗಿಂತ ಕಡಿಮೆಯಿಲ್ಲ. ದೇವೇಗೌಡರಂತಹ ಪಳಗಿದ ರಾಜಕಾರಣಿ ಈ ರೀತಿ ಆಧಾರರಹಿತ ಸುಳ್ಳುಗಳನ್ನು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಂಘ ಪರಿವಾರದ ವಿರುದ್ಧದ ಹೋರಾಟದಲ್ಲಿ ಸಿಪಿಐಎಂ ಅಚಲ ಮತ್ತು ಮಣಿಯದ ಶಕ್ತಿಯಾಗಿದೆ. ನಮ್ಮ ನಿಲುವಿನಲ್ಲಿ ಅಸ್ಪಷ್ಟತೆಗೆ ಅವಕಾಶವಿಲ್ಲ'' ಎಂದು ವಿಜಯನ್ ಶುಕ್ರವಾರ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ ಮೈತ್ರಿಗೆ ಪಿಣರಾಯಿ ವಿಜಯನ್ ಒಪ್ಪಿಗೆ ವಿಚಾರ: ಕೇರಳ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ ದೇವೇಗೌಡರ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.