ETV Bharat / state

ವೇಗ ಪಡೆಯದ ಸರ್ಕಾರದ ಗೋರಕ್ಷಣೆ ಕಾರ್ಯಕ್ರಮ; ಈವರೆಗೆ ಕೇವಲ 11 ಗೋಶಾಲೆಗಳಷ್ಟೇ ಕಾರ್ಯಾರಂಭ - ಗೋಶಾಲೆ

ಬಿಜೆಪಿ ಸರ್ಕಾರದ ಗೋವುಗಳ ರಕ್ಷಣೆ ಕಾರ್ಯಕ್ರಮ - ಜಿಲ್ಲಾವಾರು 11 ಗೋಶಾಲೆಗಳಷ್ಟೇ ಕಾರ್ಯಾರಂಭ- 70 ಕಡೆ ಇನ್ನೂ ಆರಂಭಿಕ ಹಂತ

Cow Protection Program of BJP Govt
ಬಿಜೆಪಿ ಸರ್ಕಾರದ ಗೋರಕ್ಷಣೆ ಕಾರ್ಯಕ್ರಮ
author img

By

Published : Feb 7, 2023, 8:49 AM IST

ಬೆಂಗಳೂರು: ಹಸುಗಳ ರಕ್ಷಣೆಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೋ ಹತ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದೆ. ಅದರಂತೆ ಪ್ರತಿ ಜಿಲ್ಲೆಯಲ್ಲಿ 30 ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.‌ ಬಳಿಕ 70 ಹೊಸ ಹೆಚ್ಚುವರಿ ಗೋಶಾಲೆಗಳನ್ನು ನಿರ್ಮಿಸಲು ನಿರ್ಧರಿಸಿತ್ತು. ಇನ್ನೇನು ಬಿಜೆಪಿ ಸರ್ಕಾರದ ಅಧಿಕಾರಾವಧಿ ಮುಕ್ತಾಯವಾಗುತ್ತಾ ಬಂದಿದ್ದು, ಅವರ ಈ ಮಹಾತ್ವಾಕಾಂಕ್ಷೆಯ ಗೋರಕ್ಷಣೆ ಕಾರ್ಯಕ್ರಮದ ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ಬಿಜೆಪಿ ಸರ್ಕಾರ ಗೋಗಳ ರಕ್ಷಣೆಗಾಗಿ ವಿಶೇಷ ಕಾಳಜಿಯೊಂದಿಗೆ ಗೋ ಹತ್ಯೆ ನಿಷೇಧ‌ ಕಾಯ್ದೆಯನ್ನು 2021 ಫೆಬ್ರವರಿಯಿಂದ ಜಾರಿಗೆ ತಂದಿದೆ. ಕಾಯ್ದೆ ಬಂದು ಸುಮಾರು ಎರಡು ವರ್ಷಗಳ ಕಾಲ ಗೋಗಳ ರಕ್ಷಣೆಗಾಗಿನ ಸರ್ಕಾರಿ ಗೋ ಶಾಲೆಗಳ ನಿರ್ಮಾಣ ಕಾರ್ಯ ತೆವಳುತ್ತಾ ಸಾಗಿತು. ಬಳಿಕ ಸಾರ್ವಜನಿಕರು, ಪ್ರತಿಪಕ್ಷಗಳ ಆಕ್ಷೇಪದ ಹಿನ್ನೆಲೆ ಉದ್ದೇಶಿತ ಜಿಲ್ಲಾವಾರು ಗೋಶಾಲೆಗಳ ನಿರ್ಮಾಣ ಕಾರ್ಯಕ್ಕೆ ಚುರುಕು ನೀಡಿತು.

2022-23ನೇ ಸಾಲಿನ ಆಯವ್ಯಯದಲ್ಲಿ ಗೋಶಾಲೆಗಳನ್ನು ಒಟ್ಟು 100ಕ್ಕೆ ಹೆಚ್ಚಿಸಲಾಗುವುದೆಂದು ಘೋಷಿಸಲಾಗಿತ್ತು. ಅದರಂತೆ ಪ್ರತಿ ಜಿಲ್ಲೆಗಳಲ್ಲಿ 70 ಹೆಚ್ಚುವರಿ ಗೋ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು.‌ 70 ಗೋಶಾಲೆಗಳ ನಿರ್ಮಾಣ ಕಾರ್ಯ ಇನ್ನೂ ಆರಂಭಿಕ‌ ಹಂತದಲ್ಲಿದೆ. ಈ ಎಲ್ಲಾ ಗೋ ಶಾಲೆಗಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿದೆ. ಅನೇಕ ಗೋಶಾಲೆಗಳಿಗೆ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ.

30 ಗೋಶಾಲೆಗಳ ಸ್ಥಿತಿಗತಿ ಏನಿದೆ?: 2021ರಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಜೊತೆಗೆ ಘೋಷಿಸಲಾಗಿದ್ದ 30 ಜಿಲ್ಲಾವಾರು ಸರ್ಕಾರಿ ಗೋಶಾಲೆಗಳ ಪೈಕಿ ಈವರೆಗೆ ಕೇವಲ 11 ಗೋಶಾಲೆಗಳು ಕಾರ್ಯಾರಂಭವಾಗಿವೆ. ಇದರಲ್ಲಿ ಒಟ್ಟು 348 ಗೋವುಗಳಿಗೆ ಆಶ್ರಯ ನೀಡಲಾಗುತ್ತಿದೆ. ಈ ಸಂಬಂಧ ಘೋಷಣೆ ಮಾಡಿ ಎರಡು ವರ್ಷ ಕಳೆದರೂ ಇನ್ನೂ ಉದ್ದೇಶಿತ ಜಿಲ್ಲಾವಾರು ಗೋಶಾಲೆಗಳು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ.

ಚಿಕ್ಕಮಗಳೂರು (24 ಹಸು), ವಿಜಯಪುರ (17), ಹಾಸನ (92), ಬೆಂಗಳೂರು ಗ್ರಾಮಾಂತರ (53), ತುಮಕೂರು (26), ಕೋಲಾರ (20), ಉ.ಕನ್ನಡ (18), ಕೊಡಗು (08), ಉಡುಪಿ (18), ದ.ಕನ್ನಡ (37) ಮತ್ತು ಮೈಸೂರು(35)ರಲ್ಲಿ ಗೋಶಾಲೆಗಳು ಕಾರ್ಯಾರಂಭವಾಗಿದ್ದು, ಹಸುಗಳಿಗೆ ಆಶ್ರಯ ನೀಡಲಾಗುತ್ತಿದೆ. ಒಟ್ಟು 348 ಜಾನುವಾರುಗಳಿಗೆ ಈ ಗೋ ಶಾಲೆಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಳಿದಂತೆ 11 ಗೋ ಶಾಲೆಗಳ ಕಾಮಗಾರಿ ಮುಕ್ತಾಯವಾಗಿದ್ದು, ಇನ್ನೂ ಕಾರ್ಯಾರಂಭವಾಗಿಲ್ಲ. 8 ಜಿಲ್ಲೆಗಳಲ್ಲಿ ಗೋಶಾಲೆಗಳ ಕಾಮಗಾರಿ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಈ ಪೈಕಿ ಮೂರು ಗೋ ಶಾಲೆಗಳ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ ಎಂದು ಪಶುಸಂಗೋಪನೆ ಇಲಾಖೆ ಅಂಕಿ ಅಂಶ ನೀಡಿದೆ. ಆದಷ್ಟು ಬೇಗ ಉಳಿದ ಗೋಶಾಲೆಗಳೂ ಕಾರ್ಯಾರಂಭಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚುವರಿ 70 ಹೊಸ ಗೋಶಾಲೆಗಳ ಸ್ಥಿತಿಗತಿ ಏನಿದೆ?: 2022-23 ಸಾಲಿನ ಬಜೆಟ್ ನಲ್ಲಿ 70 ಹೊಸ ಹೆಚ್ಚುವರಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. 70 ಹೊಸ ಹೆಚ್ಚುವರಿ ಸರ್ಕಾರಿ ಗೋಶಾಲೆಗಳೆಲ್ಲವೂ ಇನ್ನೂ ಭೂ ಸ್ವಾಧೀನ ಹಂತದಲ್ಲೇ ಇವೆ. ಪಶುಸಂಗೋಪನೆ‌ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ ಜಮೀನು ಮಂಜೂರಾಗಿ ಇಲಾಖೆಗೆ ಹಸ್ತಾಂತರಗೊಂಡಿರುವ ಗೋಶಾಲೆಗಳ ಸಂಖ್ಯೆ 43 ಇದೆ. 16 ಗೋಶಾಲೆ ನಿರ್ಮಾಣಕ್ಕಾಗಿ ಜಮೀನು ಗುರುತಿಸಲಾಗಿದೆ. ಈ ಜಮೀನಿಗೆ ಮಂಜೂರಾತಿ ನೀಡಿಲ್ಲ. ಇನ್ನೂ 11 ಗೋಶಾಲೆಗಳಿಗಾಗಿ ಜಮೀನು ಗುರುತಿಸುವ ಕಾರ್ಯ ಬಾಕಿ ಇದೆ.

ಸುಮಾರು 37 ಗೋಶಾಲೆಗಳ ನಿರ್ಮಾಣಕ್ಕಾಗಿ ತಲಾ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಒಟ್ಟು 18.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಶುಸಂಗೋಪನೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಬೆಣ್ಣೆ ನಗರಿಯಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ.. ದಾವಣಗೆರೆಗೆ ಮತ್ತೊಂದು ಕಿರೀಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.