ETV Bharat / state

ಕೋವಿಡ್ ಟೆಸ್ಟ್ ದರ ಇನ್ನಷ್ಟು ಇಳಿಕೆ: ಮರು ನಿಗದಿಪಡಿಸಿರುವ ದರಪಟ್ಟಿ ಹೀಗಿದೆ.. - Covid test price

ಕೋವಿಡ್ ಪತ್ತೆ ಹಚ್ಚಲು ನಡೆಸಲು ಆರ್​ಟಿ- ಪಿಸಿಆರ್, ಟ್ರೂ -ನ್ಯಾಟ್, ಸಿಬಿ ನ್ಯಾಟ್, ರ್ಯಾಪಿಡ್ ಆ್ಯಂಟಿಜೆನ್ ಹಾಗೂ ರ್ಯಾಪಿಡ್ ಆ್ಯಂಟಿ ಬಾಡಿ ಪರೀಕ್ಷೆಗಳ ದರವನ್ನು ರಾಜ್ಯದಲ್ಲಿ ಮರು ನಿಗದಿಪಡಿಸಲಾಗಿದೆ.

Covid test price decrease
ಕೋವಿಡ್ ಟೆಸ್ಟ್ ದರ ಇನ್ನಷ್ಟು ಇಳಿಕೆ..
author img

By

Published : Dec 9, 2020, 2:30 PM IST

ಬೆಂಗಳೂರು: ಕೋವಿಡ್ -19 ಸೋಂಕು ಪತ್ತೆ ಹಚ್ಚಲು ಹಲವಾರು ವಿಧಾನಗಳನ್ನು ಬಳಸಲಾಗುತ್ತಿದೆ. ಕೊರೊನಾ ಎಂಟ್ರಿ ಕೊಟ್ಟಾಗ ಕೋವಿಡ್ ಟೆಸ್ಟ್ ದರ ಹೆಚ್ಚಾಗಿತ್ತು. ಈ ದರವನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತಿದೆ.

Covid test price decrease
ಕೋವಿಡ್ ಟೆಸ್ಟ್ ದರ ಇನ್ನಷ್ಟು ಇಳಿಕೆ

ಕೋವಿಡ್ ಪತ್ತೆ ಹಚ್ಚಲು ನಡೆಸಲು ಆರ್​ಟಿ- ಪಿಸಿಆರ್, ಟ್ರೂ -ನ್ಯಾಟ್, ಸಿಬಿ ನ್ಯಾಟ್, ರ್ಯಾಪಿಡ್ ಆಂಟಿಜೆನ್ ಹಾಗೂ ರ್ಯಾಪಿಡ್ ಆ್ಯಂಟಿ ಬಾಡಿ ಪರೀಕ್ಷೆಗಳ ದರವನ್ನು ರಾಜ್ಯದಲ್ಲಿ ಮರು ನಿಗದಿಪಡಿಸಲಾಗಿದೆ. ಕೋವಿಡ್ ಪರೀಕ್ಷೆಗಳನ್ನು ನಡೆಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಹಾಗೂ ಇತರೆ ಅಗತ್ಯ ವಸ್ತುಗಳ ದರಗಳನ್ನು ಪರಿಗಣಿಸಿ, ಖಾಸಗಿ ಲ್ಯಾಬ್​ಗಳಲ್ಲಿ ವಿಧಿಸುವ ದರವನ್ನ ಕಾಲಕಾಲಕ್ಕೆ ಮರು ಪರಿಶೀಲಿಸಲಾಗುತ್ತಿದೆ.

‌ಇದೀಗ ಮಾರುಕಟ್ಟೆಯಲ್ಲಿ ಕೋವಿಡ್ ಪರೀಕ್ಷೆಗೆ ಬಳಸುವ ಅಗತ್ಯ ವಸ್ತುಗಳ ದರಗಳು ಕಡಿಮೆಯಾಗಿದೆ. ಹೀಗಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಮರುಪರಿಶೀಲನೆ ಮಾಡಿದ್ದು, ಹೊಸ ದರವನ್ನ ಶಿಫಾರಸು ಮಾಡಿದೆ. ರಾಜ್ಯದ ಖಾಸಗಿ ಲ್ಯಾಬ್​ಗಳು ನಡೆಸುವ ಪರೀಕ್ಷೆಗಳಿಗೆ ಗರಿಷ್ಟ ದರ ನಿಗದಿಪಡಿಸಿ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶಿಸಿದ್ದಾರೆ.

ಓದಿ: ಕೋವಿಡ್ 19 ಭೀತಿ.. ಬಾಕ್ಸಿಂಗ್​ ಫೆಡರೇಷನ್ ಚುನಾವಣೆ ಮುಂದೂಡಿಕೆ

ಪರೀಕ್ಷಾ ಹೊಸ ದರ ಹೀಗಿವೆ:

1) ಆರ್ ಟಿ-ಪಿಸಿಆರ್ ಪರೀಕ್ಷೆ( ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಲ್ಯಾಬ್​ಗಳಿಗೆ ಕಳುಹಿಸಿದಾಗ- 500 ರೂ.)

2) ಆರ್ ಟಿ- ಪಿಸಿಆರ್ ಪರೀಕ್ಷೆ-(ಖಾಸಗಿ ಆಸ್ಪತ್ರೆಗಳಿಂದ ಖಾಸಗಿ ಲ್ಯಾಬ್​ಗಳಿಗೆ ಕೊಟ್ಟರೆ- 800 ರೂ.)

3) ಟ್ರೂ ನ್ಯಾಟ್ ಪರೀಕ್ಷೆ (ಖಾಸಗಿ ಲ್ಯಾಬ್) - 1250 ರೂ)

4) ಸಿ ಬಿ ನ್ಯಾಟ್ ಪರೀಕ್ಷೆ (ಖಾಸಗಿ ಲ್ಯಾಬ್)- 2400ರೂ)

5) ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ (ಖಾಸಗಿ ಲ್ಯಾಬ್ 400 ರೂ)

6) ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆ (ಖಾಸಗಿ -500 ರೂ)

ಈ ದರದಲ್ಲಿ ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಖಚಿತ ಪರೀಕ್ಷೆಗಳಿಗೆ ಮರು ನಿಗದಿಪಡಿಸಿರುವ ಗರಿಷ್ಠ ದರ, ಪಿಪಿಇ ಕಿಟ್​ನ ದರವೂ ಒಳಗೊಂಡಿದೆ. ಈ ಎಲ್ಲ ಪರೀಕ್ಷೆಗಳ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಲ್ಲಿ ಒಂದು ಮನೆಯ ಸಂಗ್ರಹ ದರ ₹ 400 ರೂ ಮೀರಬಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.