ಬೆಂಗಳೂರು : ಸರ್ಕಾರದ ವಿರುದ್ಧ ದನಿ ಎತ್ತುವ ಹೋರಾಟಗಳಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷ ದೊಡ್ಡ ಪ್ರಮಾಣದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿದ್ದು, ರಾಜ್ಯ ಮತ್ತೆ ಕೋವಿಡ್ ಸಂಕಷ್ಟಕ್ಕೆ ಸಿಲುಕುವ ಆತಂಕ ಮೂಡಿಸುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕಾಂಗ್ರೆಸ್ ನಾಯಕರು ಕಳೆದ ಒಂದು ವಾರದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ, ಪ್ರತಿಭಟನೆ, ಆಹಾರ ಕಿಟ್ ವಿತರಣೆ, ಸಭೆಗಳನ್ನು ಹಮ್ಮಿಕೊಂಡು ಜನರನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದು, ಇದು ಇನ್ನೊಮ್ಮೆ ಎರಡನೇ ಅಲೆಯನ್ನು ಮತ್ತೆ ಜೀವಂತವಾಗಿಸುವ ಆತಂಕ ಮೂಡಿಸುತ್ತಿದೆ.
![Covid rules violence, Covid rules violence by Congress workers, Covid rules violence by Congress workers in Bangalore, ಕೋವಿಡ್ ನಿಯಮ ಮೀರುತ್ತಿದ್ದಾರೆ ಕೈ ನಾಯಕರು, ಬೆಂಗಳೂರಿನಲ್ಲಿ ಕೋವಿಡ್ ನಿಯಮ ಮೀರುತ್ತಿದ್ದಾರೆ ಕೈ ನಾಯಕರು, ಬೆಂಗಳೂರು ಸುದ್ದಿ,](https://etvbharatimages.akamaized.net/etvbharat/prod-images/kn-bng-02-after-lockdown-congress-script-7208077_10072021125126_1007f_1625901686_160.jpg)
ರಾಜ್ಯ ಕಾಂಗ್ರೆಸ್ ನಾಯಕರು ಲಾಕೌನ್ ತೆರವಾಗುತ್ತಿದ್ದಂತೆ ಪ್ರವಾಸ ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಳೆದ ಒಂದು ವಾರದಲ್ಲಿ ಐದು ಜಿಲ್ಲೆ ಸುತ್ತಿ ಬಂದಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಪ್ರವಾಸ ಮಾಡಿದ್ದಾರೆ. ಇನ್ನು, ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ, ಸೈಕಲ್ ಜಾಥಾ ನಡೆಸಲಾಗಿದೆ. ಇಲ್ಲೆಲ್ಲಾ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನ ನಡೆದಿದೆ. ಆಹಾರ ಕಿಟ್ ವಿತರಣೆ, ಸೈಕಲ್ ಜಾಥಾ, ಮೆರವಣಿಗೆಗಳಲ್ಲಿ ಜನ ಸೇರಿದ್ದು ಗಮನಿಸಿದರೆ ದೊಡ್ಡ ಮಟ್ಟದ ಆತಂಕ ಮೂಡುತ್ತಿದೆ.
ಸಿಎಂ ಎಚ್ಚರಿಕೆ : ಜುಲೈ 7ರಂದು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಸಿಎಂ ಬಿ ಎಸ್ ಯಡಿಯೂರಪ್ಪ ಲಾಕ್‌ಡೌನ್ ತೆರವಾಗಿದೆ ಎಂದು ಜನ ಬೇಕಾಬಿಟ್ಟಿ ಓಡಾಡಿದರೆ ಮುಂದಿನ 15 ದಿನದಲ್ಲಿ ಮತ್ತೆ ಹಳೆಯ ಪರಿಸ್ಥಿತಿಗೆ ಮರಳ ಬೇಕಾಗುತ್ತದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಓಡಾಡಿದರೆ ಅಪಾಯ ತಪ್ಪಿದ್ದಲ್ಲ ಎಂದಿದ್ದಾರೆ. ಮತ್ತೊಮ್ಮೆ ಲಾಕ್ಡೌನ್ನಂತಹ ನಿರ್ಧಾರ ತೆಗೆದುಕೊಳ್ಳಬೇಕಾಗಿಯೂ ಬರಬಹುದು ಎಂದು ಎಚ್ಚರಿಸಿದ್ದಾರೆ.
![Covid rules violence, Covid rules violence by Congress workers, Covid rules violence by Congress workers in Bangalore, ಕೋವಿಡ್ ನಿಯಮ ಮೀರುತ್ತಿದ್ದಾರೆ ಕೈ ನಾಯಕರು, ಬೆಂಗಳೂರಿನಲ್ಲಿ ಕೋವಿಡ್ ನಿಯಮ ಮೀರುತ್ತಿದ್ದಾರೆ ಕೈ ನಾಯಕರು, ಬೆಂಗಳೂರು ಸುದ್ದಿ,](https://etvbharatimages.akamaized.net/etvbharat/prod-images/kn-bng-02-after-lockdown-congress-script-7208077_10072021125126_1007f_1625901686_854.jpg)
ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಾಕಷ್ಟು ಉತ್ತಮ ಹೆಜ್ಜೆ ಇಟ್ಟಿರುವ ಪ್ರತಿಪಕ್ಷ ಕಾಂಗ್ರೆಸ್, ಬಡವರಿಗೆ ಆರ್ಥಿಕ ಹಾಗೂ ಆಹಾರದ ಸಹಕಾರ ಸಹ ನೀಡಿದೆ. ಆದರೆ, ಹೋದಲ್ಲೆಲ್ಲಾ ಜನರನ್ನು ಸೇರಿಸಿ ಜನಪ್ರಿಯತೆ ಗಿಟ್ಟಿಸಲು ನಡೆಸುತ್ತಿರುವ ಪ್ರಯತ್ನ ಮಾತ್ರ ಆತಂಕ ತರಿಸುತ್ತಿದೆ.