ETV Bharat / state

3ನೇ ಅಲೆಯಲ್ಲಿ ಕೊರೊನಾಗೆ‌ ಹಳ್ಳಿಗಳೇ ಟಾರ್ಗೆಟ್? ಸಿಟಿಗಿಂತ ಗ್ರಾಮೀಣ ಭಾಗದಲ್ಲೇ ಸೋಂಕಿನ ಪ್ರಮಾಣ ಹೆಚ್ಚು! - villages covid cases

ಕೊರೊನಾ ಮೂರನೇ ಅಲೆ ಆರಂಭವಾಗುವ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ರೆ ಕಳೆದ 14 ದಿನಗಳ ಕೊರೊನಾ ಪ್ರಕರಣಗಳನ್ನು ಗಮನಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿಯೇ ಸೋಂಕು ಹೆಚ್ಚಾಗಿ ಹರಡುತ್ತಿರುವ ವಿಚಾರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

covid cases increasing in villages
ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚುತ್ತಿರರುವ ಸೋಂಕಿನ ಪ್ರಮಾಣ!
author img

By

Published : Jul 14, 2021, 10:25 AM IST

ಬೆಂಗಳೂರು: ಇನ್ನೇನು ಕೊರೊನಾ ಮೂರನೇ ಅಲೆ ಆರಂಭವಾಗುವ ಭೀತಿಯಿದ್ದು, ಸದ್ಯ ನಗರಗಳಿಗಿಂತ ಹಳ್ಳಿಗಳೇ ಈ ಅಲೆಯ ಟಾರ್ಗೆಟ್‌ ಆಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ನಗರಕ್ಕೆ ಹೋಲಿಸಿದರೆ ಹಳ್ಳಿಗಳಲ್ಲಿ ಸೋಂಕು ಹರಡುವಿಕೆ ನಿಯಂತ್ರಣವಾಗುತ್ತಿಲ್ಲ‌. ಕಳೆದೆರಡು ವಾರಗಳಲ್ಲಿ ಸಿಟಿಗಿಂತ ಗ್ರಾಮಾಂತರ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮೂರನೇ ಅಲೆಯಲ್ಲಿ ಹೆಚ್ಚು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಳ್ಳಲಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

covid cases
ಕೊರೊನಾ ಪ್ರಕರಣಗಳು

ಎರಡನೇ ಅಲೆಯಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚು ಸೋಂಕಿನ ಪ್ರಮಾಣ ಪತ್ತೆಯಾಗಿತ್ತು. ಸದ್ಯದ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದ್ದು, ಮೆಲ್ಲನೆ ಹಳ್ಳಿಗಳತ್ತ ಸೋಂಕು ಹರಡುತ್ತಿದೆ. ರಾಜ್ಯದ ಹಲವು ಜಿಲ್ಲೆಗಳ ನಗರ ಪ್ರದೇಶಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗಿದೆ. 21 ಜಿಲ್ಲೆಗಳಲ್ಲಿ ಸಿಟಿ ಬಿಟ್ಟು, ಗ್ರಾಮಾಂತರ ಭಾಗದಲ್ಲಿಯೇ ಸೋಂಕು ಹೆಚ್ಚುತ್ತಿದೆ.

ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಬುಲೆಟಿನ್‌ನಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ. ಕಳೆದ 14 ದಿನಗಳ ಕೊರೊನಾ ಪ್ರಕರಣಗಳನ್ನು ಆಧರಿಸಿ ಆರೋಗ್ಯ ಇಲಾಖೆ ಮಾಹಿತಿ ಕಲೆಹಾಕಿದೆ‌‌. ಸಿಟಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಸೋಂಕಿರುವ ರಾಜ್ಯದ ಪ್ರಮುಖ ಜಿಲ್ಲೆಗಳ ವಿವರವನ್ನ ಹೊರ ಹಾಕಿದೆ.

ಚಾಮರಾಜನಗರ
ನಗರ - 148
ಗ್ರಾಮಾಂತರ - 489
ಚಿಕ್ಕಮಗಳೂರು
ನಗರ - 439
ಗ್ರಾಮಾಂತರ - 917
ದಕ್ಷಿಣ ಕನ್ನಡ
ನಗರ - 1226
ಗ್ರಾಮಾಂತರ - 2081
ಹಾಸನ
ನಗರ - 805
ಗ್ರಾಮಾಂತರ - 2145
ಕೊಡಗು
ನಗರ - 189
ಗ್ರಾಮಾಂತರ - 1475
ಕೋಲಾರ
ನಗರ - 199
ಗ್ರಾಮಾಂತರ - 635
ಮಂಡ್ಯ

ನಗರ - 185
ಗ್ರಾಮಾಂತರ - 876

ರಾಮನಗರ
ನಗರ - 40
ಗ್ರಾಮಾಂತರ - 139

ತುಮಕೂರು
ನಗರ - 474
ಗ್ರಾಮಾಂತರ - 1123

ಉಡುಪಿ
ನಗರ - 247
ಗ್ರಾಮಾಂತರ - 1194

ETV Bharat Logo

Copyright © 2024 Ushodaya Enterprises Pvt. Ltd., All Rights Reserved.