ಬೆಂಗಳೂರು: ಕೊರೊನಾ ಸೋಂಕಿತ ಪೊಲೀಸರಿಗಾಗಿ ಬೆಂಗಳೂರಿನಲ್ಲಿ ಪ್ರಪ್ರಥಮವಾಗಿ ಕೋವಿಡ್ ಕೇರ್ ಸೆಂಟರ್ ಅನ್ನು ಕಾಡುಗೋಡಿಯ ಪೊಲೀಸ್ ಕ್ವಾರ್ಟರ್ಸ್ನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಉದ್ಘಾಟಿಸಿದರು.
ನಂತರ ಮಾತನಾಡಿದ ಪೊಲೀಸ್ ಆಯುಕ್ತ ಬೆಂಗಳೂರಿನಲ್ಲಿ 20 ಸಾವಿರ ಪೊಲೀಸರು ಕೋವಿಡ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕಿತ ಪೊಲೀಸರಿಗೆ ಬೆಡ್ ಕೊರತೆ ನೀಗಿಸಲು ವೈಟ್ ಫೀಲ್ಡ್ ರೈಸಿಂಗ್ ಮತ್ತು ಬಯೋಕಾನ್ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕಾಡುಗೋಡಿಯ ಪೊಲೀಸ್ ಕ್ವಾರ್ಟರ್ ನಲ್ಲಿ ನೂತನವಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದೆ.
ಯಾವುದೇ ಹೋಟೆಲ್ಗಿಂತ ಕಡಿಮೆ ಇಲ್ಲ, ಇದರಲ್ಲಿ ಎನ್ಜಿಒಗಳ ಪಾತ್ರ ಇದೆ. ಅವರ ಸಹಾಯದಿಂದ ಮಾಸ್ಕ್ ,ಸ್ಯಾನಿಟೈಸರ್,ಪಿಪಿಇ ಕಿಟ್ ಉತ್ತಮ ಗುಣಮಟ್ಟದ ಬೆಡ್, ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.ಸ್ಮೈಲ್ ಕಂಪನಿ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದು, ಪ್ರತಿದಿನ ಹೆಲ್ತ್ ಚೆಕಾಪ್ ಇರುತ್ತದೆ. ಪೊಲೀಸರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗೋದು ತಡ ಆಗುತ್ತೆ. ಆದರಿಂದ ಇಂತಹ ಕೋವಿಡ್ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂದರು.