ETV Bharat / state

ತಪ್ಪು ಮಾಹಿತಿ ಪ್ರಕರಣ: ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ ಶಿಕ್ಷೆ - ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ ಶಿಕ್ಷೆ

ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರಿಗೆ ನಗರದ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ತಪ್ಪು ಮಾಹಿತಿ ಪ್ರಕರಣ: ಬಿಜೆಪಿ ಶಾಸಕ ಉದಯ್​ ಗರುಡಾಚಾರ್​ಗೆ ಶಿಕ್ಷೆ

author img

By

Published : Oct 13, 2022, 5:48 PM IST

Updated : Oct 13, 2022, 9:32 PM IST

ಬೆಂಗಳೂರು: ಚುನಾವಣೆಗೆ ಸ್ಪರ್ಧೇ ಮಾಡುವ ಸಂದರ್ಭದಲ್ಲಿ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎರಡು ಕ್ರಿಮಿನಲ್​ ಪ್ರಕರಣಗಳ ಮಾಹಿತಿ ಮರೆಮಾಚಿ ನಾಮಪತ್ರ ಸಲ್ಲಿಸಿರುವ ಆರೋಪ ಸಂಬಂಧ ಚಿಕ್ಕಪೇಟೆ ಶಾಸಕ ಉದಯ್​ ಗರುಡಾಚಾರ್​ ಅವರಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಚಿಕ್ಕಪೇಟೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಸಂದರ್ಭದಲ್ಲಿ ಪ್ರಮಾಣ ಪತ್ರ ಮಾಹಿತಿ ಮರೆಮಾಚಿದ ಪ್ರಕರಣ ಸಂಬಂಧ ಹೆಚ್​.ಜಿ.ಪ್ರಶಾಂತ್​ ಎಂಬುವರು ಸಲ್ಲಿಸಿದ್ದ ಖಾಸಗಿ ದೂರು ವಿಚಾರಣೆ ನಡೆಸಿದ ನಗರದ 42ನೇ ಎಸಿಎಂಎಂ ನ್ಯಾಯಾಲಯ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ)ದ ನ್ಯಾಯಾಧೀಶರಾದ ಜೆ.ಪ್ರೀತಿ ಅವರು ಆರೋಪಿಗೆ ಜನಪ್ರತಿನಿಧಿಗಳ ಕಾಯ್ದೆ ಸೆ.125(ಎ) ಅಡಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಜಾಮೀನು ಮಂಜೂರು: ಇದೇ ವೇಳೆ ಶಿಕ್ಷೆಯ ಪ್ರಮಾಣ 3 ವರ್ಷಗಳಿಗಿಂತ ಕಡಿಮೆ ಇದೆ. ಆದ್ದರಿಂದ ಶಿಕ್ಷೆ ಅಮಾನತ್ತಿನಲ್ಲಿಡುವಂತೆ ಕೋರಿ ಉದಯ್​ ಗರುಡಾಚಾರ್​ ಪರ ವಕೀಲರು ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಧೀಶರು 25 ಸಾವಿರ ರೂ. ವೈಯಕ್ತಿಕ ಬಾಂಡ್​ ಪಡೆದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಹಿನ್ನೆಲೆ: 2018ರಲ್ಲಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್​ ಪ್ರಕರಣಗಳು ಮತ್ತು ಈ ಸಂಬಂಧ ಇತ್ಯರ್ಥವಾಗಿರುವ ಪ್ರಕರಣಗಳನ್ನು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಬೇಕು ಎಂಬ ನಿಯಮವಿದೆ. ಆದರೆ, ಪ್ರಕಾಶ್​ ಶೆಟ್ಟಿ ಎಂಬುವರು ಆರೋಪಿ ಗರುಡಾಚಾರ್ ವಿರುದ್ಧ ಆಶೋಕನಗರ ಪೊಲೀಸ್​ ಠಾಣೆಯಲ್ಲಿ ಕ್ರಿಮಿನಲ್​ ಪ್ರಕರಣ ನಗರದ 43ನೆ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಈ ಅಂಶವನ್ನು ಗರುಡಾಚಾರ್​ ಅವರು ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡದೆ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದ್ದರು.

ಜೊತೆಗೆ, ಪತ್ನಿಯ ಬ್ಯಾಂಕ್​ ಖಾತೆಯ ವಿವರವನ್ನೂ ನೀಡಿದ್ದ ಅರ್ಜಿ ಸಲ್ಲಿಸಿರುವ ದಿನದಂದು ಇದ್ದಂತಹ ಬಾಕಿ ಮೊತ್ತವನ್ನು ಉಲ್ಲೇಖ ಮಾಡಿಲ್ಲ. ಮೇವರಿಕ್​ ಹೋಲ್ಡಿಂಗ್ಸ್​ನಲ್ಲಿ ಬಂಡವಾಳ ಹೂಡಿಕೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ, ಸಂಸ್ಥೆಗೆ ಅವರೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಸಂಬಂಧ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಸಂಬಂಧ ಪರಿಶೀಲಿಸಿದ್ದ ಚುನಾವಣಾಧೀಕಾರಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು.

ಪ್ರಕರಣ ಸಂಬಂಧ ಪ್ರಶಾಂತ್​ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದಿದ್ದೇನು.. ಹಿಜಾಬ್​ ಧರಿಸಲು ಅವಕಾಶ ಇದೆಯೋ, ಇಲ್ಲವೋ?

Last Updated : Oct 13, 2022, 9:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.