ETV Bharat / state

ಹರಾಜು ಹಾಕಿರುವ ಚಿನ್ನದ ಸರ ವಾಪಸ್ ಕೊಡಿ : ಮುತ್ತೂಟ್ ಫೈನಾನ್ಸ್​​ಗೆ ಕೋರ್ಟ್ ಆದೇಶ

ಸಾಲಗಾರನಿಗೆ ಯಾವುದೇ ಮಾಹಿತಿ ನೀಡದೇ ಚಿನ್ನದ ಸರವನ್ನು ಹರಾಜು ಹಾಕಿದ್ದ ಮುತ್ತೂಟ್ ಫೈನಾನ್ಸ್‌ ಗೆ ದಂಡ ವಿಧಿಸಿರುವ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ದಂಡದ ಹಣ ಮತ್ತು ಸರವನ್ನು ಸಾಲಗಾರನಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.

court-order-to-muttut-finance-for-return-the-auctioned-gold
ಮುತ್ತೂಟ್ ಫೈನಾನ್ಸ್ ಗೆ ಕೋರ್ಟ್ ಆದೇಶ
author img

By

Published : Jan 22, 2020, 9:38 PM IST

ಬೆಂಗಳೂರು: ಸಾಲಗಾರನಿಗೆ ಯಾವುದೇ ಮಾಹಿತಿ ನೀಡದೇ ಚಿನ್ನದ ಸರವನ್ನು ಹರಾಜು ಹಾಕಿದ್ದ ಮುತ್ತೂಟ್ ಫೈನಾನ್ಸ್‌ ಗೆ ದಂಡ ವಿಧಿಸಿರುವ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ದಂಡದ ಹಣ ಮತ್ತು ಸರವನ್ನು ಸಾಲಗಾರನಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.

ನಗರದ ಕೈಕೊಂಡ್ರಹಳ್ಳಿ ನಿವಾಸಿ ವೆಂಕಟೇಶ್ (54) ಹಣಕಾಸು ಅಗತ್ಯಕ್ಕಾಗಿ 2014 ರ ಮೇ ತಿಂಗಳಲ್ಲಿ ತಮ್ಮ 16 ಗ್ರಾಂ ತೂಕದ ಚಿನ್ನದ ಸರವನ್ನು ಮುತ್ತೂಟ್ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದರು. 30 ಸಾವಿರ ರೂಪಾಯಿ ಸಾಲವನ್ನು ಶೇ.2 ರ ಬಡ್ಡಿಗೆ ಪಡೆದು ಪ್ರತಿ ತಿಂಗಳು 3,014 ರೂ. ಕಂತು ಕಟ್ಟುವುದಾಗಿ ಒಪ್ಪಿದ್ದರು. ಅದರಂತೆ ನಿಗದಿತವಾಗಿ ಸಾಲ ಕಟ್ಟಿದ್ದರೆ 2016 ರ ಮೇ ತಿಂಗಳಿಗೆ ಚಿನ್ನದ ಸರ ಹಿಂದಿರುಗಿಸಬೇಕಿತ್ತು. ಆದರೆ ಕಾರಣಾಂತರಗಳಿಂದ 2015 ರ ಏಪ್ರಿಲ್ ಬಳಿಕ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.

ಕಂತು ಕಟ್ಟುವುದು ನಿಲ್ಲುತ್ತಲೇ ಮುತ್ತೂಟ್ ಫೈನಾನ್ಸ್ ನವರು ವೆಂಕಟೇಶ್ ಅವರ ಚಿನ್ನದ ಸರವನ್ನು ಹರಾಜಿನಲ್ಲಿ ಮಾರಾಟ ಮಾಡಿದ್ದರು. 2017 ರ ಏಪ್ರಿಲ್ 8 ರಂದು ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪ್ರಕಟಣೆ ನೀಡಿದ್ದ ಮುತ್ತೂಟ್ ಫೈನಾನ್ಸ್ ಅದೇ ತಿಂಗಳ 28 ರಂದು ಸರ ಹರಾಜು ಹಾಕಿತ್ತು. ಈ ವಿಚಾರವನ್ನು ಸಾಲಗಾರರಾದ ವೆಂಕಟೇಶ್ ಅವರಿಗೆ ತಿಳಿಸಿರಲಿಲ್ಲ. ಕನಿಷ್ಠ ಒಂದು ನೋಟಿಸ್ ಸಹ ನೀಡಿರಲಿಲ್ಲ.

2017ರ ಜೂನ್ ತಿಂಗಳಲ್ಲಿ ಸಾಲ ಮತ್ತು ಬಡ್ಡಿ ಪೂರ್ತಿ ಕಟ್ಟಿ ಚಿನ್ನದ ಸರ ಬಿಡಿಸಿಕೊಳ್ಳಲು ಬಂದಾಗ ವೆಂಕಟೇಶ್​​​​ಗೆ ನಿಮ್ಮ ಸರ ಹರಾಜು ಹಾಕಿದ್ದೇವೆ ಎಂದು ತಿಳಿಸಿದ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ, ಸರ ಹಿಂದಿರುಗಿಸುವ ಯಾವ ಸಾಧ್ಯತೆಯೂ ಇಲ್ಲ ಎಂದರು. ಇದರಿಂದ ಮನನೊಂದ ವೆಂಕಟೇಶ್ ನಗರದ 3 ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ಆರಂಭವಾದಾಗ ಮುತ್ತೂಟ್ ಫೈನಾನ್ಸ್ ಪರ ವಕೀಲರು, ಸಾಲ ಪಡೆದಿದ್ದ ವೆಂಕಟೇಶ್ 2015 ರ ಏಪ್ರಿಲ್ ನಿಂದ ಸರಿಯಾಗಿ ಕಂತು ಕಟ್ಟಿಲ್ಲ, ಕಡೇ ಪಕ್ಷ ಬಡ್ಡಿ ನೀಡಿಲ್ಲ. ಹೀಗಾಗಿ ಕಂಪನಿ ನಿಯಮದಂತೆ ಹರಾಜು ಹಾಕಲಾಗಿದೆ ಎಂದು ವಾದಿಸಿದ್ದರು. ಆದರೆ ವೆಂಕಟೇಶ್ ಗೆ ಯಾವುದೇ ನೋಟಿಸ್ ನೀಡಿರುವ ಕುರಿತು ಅವರ ಬಳಿ ಸಾಕ್ಷ್ಯ ಇರಲಿಲ್ಲ. ಇದನ್ನು ಪರಿಗಣಿಸಿದ ನ್ಯಾಯಾಲಯ ಸಾಲಗಾರನಿಗೆ ನೋಟಿಸ್ ನೀಡದೆ ಚಿನ್ನದ ಸರ ಹರಾಜು ಹಾಕಿರುವುದು ಕಾನೂನು ಬಾಹಿರ ಎಂದು ತೀರ್ಮಾನಿಸಿದೆ. ಜತೆಗೆ, ಅಡವಿಟ್ಟಿದ್ದ 38 ಸಾವಿರ ಮೌಲ್ಯದ 16 ಗ್ರಾಂ ತೂಕದ ಚಿನ್ನದ ಸರ ಹಿಂದಿರುಗಿಸುವಂತೆ ಆದೇಶಿಸಿದೆ.

ಭಾರತೀಯರು ಚಿನ್ನದ ಆಭರಣಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಆಭರಣ ಕಳೆದುಕೊಂಡಾಗ ಅವರಿಗಾಗುವ ಮಾನಸಿಕ ವೇದನೆ ಎಂತಹದ್ದು ಎಂಬುದನ್ನು ತಿಳಿಯಬಹುದಾಗಿದೆ. ಹೀಗಾಗಿ, ಸಾಲಗಾರನಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ ಪರಿಹಾರವಾಗಿ 15 ಸಾವಿರ ರೂ. ಹಾಗೂ ಕೋರ್ಟ್ ವೆಚ್ಚವಾಗಿ 3 ಸಾವಿರ ರೂ. ನೀಡುವಂತೆ ಮುತ್ತೂಟ್ ಫೈನಾನ್ಸ್ ಗೆ ಆದೇಶಿಸಿದೆ.

Intro:Body:ಹರಾಜು ಹಾಕಿರುವ ಚಿನ್ನದ ಸರ ವಾಪಸ್ ಕೊಡಿ : ಮುತ್ತೂಟ್ ಫೈನಾನ್ಸ್ ಗೆ ಕೋರ್ಟ್ ಆದೇಶ
ಬೆಂಗಳೂರು: ಸಾಲಗಾರನಿಗೆ ಯಾವುದೇ ಮಾಹಿತಿ ನೀಡದೆ ಚಿನ್ನದ ಸರವನ್ನು ಹರಾಜು ಹಾಕಿದ್ದ ಮುತ್ತೂಟ್ ಫೈನಾನ್ಸ್‌ ಗೆ ದಂಡ ವಿಧಿಸಿರುವ ಬೆಂಗಳೂರಿನ ಗ್ರಾಹಕ ನ್ಯಾಯಾಲಯ ದಂಡದ ಹಣ ಮತ್ತು ಸರವನ್ನು ಸಾಲಗಾರನಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.
ಬೆಂಗಳೂರಿನ ಕೈಕೊಂಡ್ರಹಳ್ಳಿ ನಿವಾಸಿ ವೆಂಕಟೇಶ್(54) ಹಣಕಾಸು ಅಗತ್ಯಕ್ಕಾಗಿ 2014ರ ಮೇ ತಿಂಗಳಲ್ಲಿ ತಮ್ಮ 16 ಗ್ರಾಂ ತೂಕದ ಚಿನ್ನದ ಸರವನ್ನು ಮುತ್ತೂಟ್ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದರು. 30 ಸಾವಿರ ರುಪಾಯಿ ಸಾಲವನ್ನು ಶೇಕಡಾ 2 ಬಡ್ಡಿಗೆ ಪಡೆದು ಪ್ರತಿ ತಿಂಗಳು 3,014 ರುಪಾಯಿ ಕಂತು ಕಟ್ಟುವುದಾಗಿ ಒಪ್ಪಿದ್ದರು. ಅದರಂತೆ ನಿಗದಿತವಾಗಿ ಸಾಲ ಕಟ್ಟಿದ್ದರೆ 2016ರ ಮೇ ತಿಂಗಳಿಗೆ ಚಿನ್ನದ ಸರ ಹಿಂದಿರುಗಿಸಬೇಕಿತ್ತು. ಆದರೆ ಕಾರಣಾಂತರಗಳಿಂದ 2015ರ ಏಪ್ರಿಲ್ ಬಳಿಕ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ.
ಕಂತು ಕಟ್ಟುವುದು ನಿಲ್ಲುತ್ತಲೇ ಮುತ್ತೂಟ್ ಫೈನಾನ್ಸ್ ನವರು ವೆಂಕಟೇಶ್ ಅವರ ಚಿನ್ನದ ಸರವನ್ನು ಹರಾಜಿನಲ್ಲಿ ಮಾರಾಟ ಮಾಡಿದ್ದರು. 2017 ರ ಏಪ್ರಿಲ್ 8ರಂದು ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪ್ರಕಟಣೆ ನೀಡಿದ್ದ ಮುತ್ತೂಟ್ ಫೈನಾನ್ಸ್ ಅದೇ ತಿಂಗಳ 28 ರಂದು ಸರ ಹರಾಜು ಹಾಕಿತ್ತು. ಈ ವಿಚಾರವನ್ನು ಸಾಲಗಾರರಾದ ವೆಂಕಟೇಶ್ ಅವರಿಗೆ ತಿಳಿಸಿರಲಿಲ್ಲ. ಕನಿಷ್ಟ ಒಂದು ನೋಟಿಸ್ ಸಹ ನೀಡಿರಲಿಲ್ಲ.
2017ರ ಜೂನ್ ತಿಂಗಳಲ್ಲಿ ಸಾಲ ಮತ್ತು ಬಡ್ಡಿ ಪೂರ್ತಿ ಕಟ್ಟಿ ಚಿನ್ನದ ಸರ ಬಿಡಿಸಿಕೊಳ್ಳಲು ಬಂದಾಗ ವೆಂಕಟೇಶ್ ಗೆ ನಿಮ್ಮ ಸರ ಹರಾಜು ಹಾಕಿದ್ದೇವೆ ಎಂದು ತಿಳಿಸಿದ ಮುತ್ತೂಟ್ ಫೈನಾನ್ಸ್ ಸಿಬ್ಬಂದಿ, ಸರ ಹಿಂದಿರುಗಿಸುವ ಯಾವ ಸಾಧ್ಯತೆಯೂ ಇಲ್ಲವೆಂದರು. ಇದರಿಂದ ಮನನೊಂದ ವೆಂಕಟೇಶ್ ನಗರದ 3ನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ಆರಂಭವಾದಾಗ ಮುತ್ತೂಟ್ ಫೈನಾನ್ಸ್ ಪರ ವಕೀಲರು, ಸಾಲ ಪಡೆದಿದ್ದ ವೆಂಕಟೇಶ್ 2015ರ ಏಪ್ರಿಲ್ ನಿಂದ ಸರಿಯಾಗಿ ಕಂತು ಕಟ್ಟಿಲ್ಲ, ಕಡೇ ಪಕ್ಷ ಬಡ್ಡಿ ನೀಡಿಲ್ಲ. ಹೀಗಾಗಿ ಕಂಪನಿ ನಿಯಮದಂತೆ ಹರಾಜು ಹಾಕಲಾಗಿದೆ ಎಂದು ವಾದಿಸಿದ್ದರು. ಆದರೆ ವೆಂಕಟೇಶ್ ಗೆ ಯಾವುದೇ ನೋಟಿಸ್ ನೀಡಿರುವ ಕುರಿತು ಅವರ ಬಳಿ ಯಾವುದೇ ಸಾಕ್ಷ್ಯ ಇರಲಿಲ್ಲ. ಇದನ್ನು ಪರಿಗಣಿಸಿದ ನ್ಯಾಯಾಲಯ ಸಾಲಗಾರನಿಗೆ ನೋಟಿಸ್ ನೀಡದೆ ಚಿನ್ನದ ಸರ ಹರಾಜು ಹಾಕಿರುವ ಕ್ರಮ ಕಾನೂನು ಬಾಹಿರ ಎಂದು ತೀರ್ಮಾನಿಸಿದೆ.
ಜತೆಗೆ, ಅಡವಿಟ್ಟಿದ್ದ 38 ಸಾವಿರ ಮೌಲ್ಯದ 16 ಗ್ರಾಂ ತೂಕದ ಚಿನ್ನದ ಸರ ಹಿಂದಿರುಗಿಸುವಂತೆ ಆದೇಶಿಸಿದೆ. ಭಾರತೀಯರು ಚಿನ್ನದ ಆಭರಣಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೀಗಾಗಿ ಆಭರಣ ಕಳೆದುಕೊಂಡಾಗ ಅವರಿಗಾಗುವ ಮಾನಸಿಕ ವೇದನೆ ಎಂತಹದ್ದು ಎಂಬುದನ್ನು ತಿಳಿಯಬಹುದಾಗಿದೆ. ಹೀಗಾಗಿ, ಸಾಲಗಾರನಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ ಪರಿಹಾರವಾಗಿ 15 ಸಾವಿರ ರುಪಾಯಿ ಹಾಗೂ ಕೋರ್ಟ್ ವೆಚ್ಚವಾಗಿ 3ಸಾವಿರ ರುಪಾಯಿ ನೀಡುವಂತೆ ಮುತ್ತೂಟ್ ಫೈನಾನ್ಸ್ ಗೆ ಆದೇಶಿಸಿದೆೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.