ETV Bharat / state

ಆಶ್ರಯ ಮನೆ ಸಿಗದಿದ್ದಕ್ಕೆ ಬೇಸತ್ತ ದಂಪತಿ: ಟವರ್​ ಏರಿ ಆತ್ಮಹತ್ಯೆಗೆ ಯತ್ನ - ಆಶ್ರಯ ಮನೆಯ ಜಾಗ

ತಮಗೆ ಮೀಸಲಿದ್ದ ಆಶ್ರಯ ಮನೆ ಜಾಗವನ್ನು ಅಕ್ರಮವಾಗಿ ಬೇರೆಯವರಿಗೆ ನೀಡಿದ್ದರಿಂದ ಬೇಸತ್ತ ದಂಪತಿ, ತಮಗೆ ಎಲ್ಲಿ ಹೋದರೂ ನ್ಯಾಯ ದೊರೆಯುತ್ತಿಲ್ಲ ಎಂದು ಮೊಬೈಲ್​ ಟವರ್​ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Couple tries to Commit Suicide
ಟವರ್​ ಏರಿ ಆತ್ಮಗತ್ಯೆಗೆ ಯತ್ನ
author img

By

Published : Nov 13, 2020, 12:30 PM IST

Updated : Nov 13, 2020, 12:57 PM IST

ಹಾಸನ: ಆಶ್ರಯ ಮನೆಗಳಿಗೆ ಮೀಸಲಿಟ್ಟ ಜಾಗವನ್ನು ಲೇಔಟ್ ಮಾಡಿಕೊಂಡು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿರುವ ಕುಟುಂಬವೊಂದು, ಮೊಬೈಲ್ ಟವರ್ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.

ನಾರಾಯಣಪುರದ ಮೋಹನ್ ರಾಜ್ ಮತ್ತು ಚಂದನ ಎಂಬ ದಂಪತಿಗೆ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಮನೆ ನೀಡುವುದಾಗಿ ಒಂದು ವರ್ಷದ ಹಿಂದೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಊರಿನ ಕೆಲವು ಮುಖಂಡರುಗಳ ಹಣದ ಆಮಿಷಕ್ಕೆ ಒಳಗಾಗಿ ಸರ್ವೆ ನಂಬರ್ 101ರ 1ಎಕರೆ 30 ಗುಂಟೆ ಜಾಗವನ್ನು ಅದೇ ಊರಿನ ತಮ್ಮಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ್ ಹಾಗೂ ಹಾಲಿ ಸದಸ್ಯ ಮಂಜುನಾಥ್ ಇವರುಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟಿದ್ದು, ಬೆಳಕಿಗೆ ಬಂದಿದೆ. ನಮಗೆ ಸಿಗಬೇಕಾದ ಜಾಗ ಅಕ್ರಮವಾಗಿ ಬೇರೆಯವರ ಕೈ ಸೇರುತ್ತಿದೆ ಎಂದು ಬೇಸರಗೊಂಡ ದಂಪತಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ಟವರ್​ ಏರಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ದಂಪತಿ

ಆಶ್ರಯ ಮನೆ ನೀಡುವ ಭರವಸೆ ನೀಡಿದ ಅಧಿಕಾರಿಗಳು ಮತ್ತು ಕೃತ್ಯ ನಡೆಸಿರುವ ವ್ಯಕ್ತಿಗಳು ಗ್ರಾಮಸ್ಥರಿಂದ ಸಾವಿರಾರು ರೂ. ಹಣ ಪಡೆದಿದ್ದು, ನಂತರ ಬೇರೆಯವರಿಗೆ ಅಕ್ರಮ ಖಾತೆ ಮಾಡಿಕೊಡುವ ಮೂಲಕ ಬಡಜನತೆಗೆ ಅನ್ಯಾಯವೆಸಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಲು ಮುಂದಾದವರ ಮೇಲೆ ದಬ್ಬಾಳಿಕೆ ನಡೆಸಿ ಅಧಿಕಾರಿಗಳು ದರ್ಪ ತೋರುತ್ತಿದ್ದಾರೆ. ಇದರ ಬಗ್ಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಗಿದೆ. ಆದರೆ, ಪ್ರಭಾವಿಗಳ ಕೈಗೊಂಬೆಯಾದ ಪೊಲೀಸರು ಗ್ರಾಮಸ್ಥರ ಮೇಲೆಯೇ ಕೇಸು ದಾಖಲಿಸಿದ್ದರಿಂದ ವಿಧಿಯಿಲ್ಲದೇ ದಂಪತಿಗಳು ಇಂದು ಪೆಟ್ರೋಲ್ ಹಿಡಿದುಕೊಂಡು ಟವರ್ ಮೇಲೆ ತೆರಳಿ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು, ಮತ್ತು ಪೊಲೀಸ್ ಸಿಬ್ಬಂದಿ ದಂಪತಿಗಳ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನ್ಯಾಯ ಸಿಗುವ ತನಕ ನಾವು ಕೆಳಗಿಳಿಯುವುದಿಲ್ಲ, ಹಾಗೇನಾದರೂ ನೀವು ನಮ್ಮನ್ನು ಕೆಳಗಿಳಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

Last Updated : Nov 13, 2020, 12:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.