ETV Bharat / state

ಬಡವರ ಬಂಧು ಯೋಜನೆಯಡಿ ಸಾಲಮನ್ನಾ, ಕಟ್ಟಡ ಕಾರ್ಮಿಕರಿಗೆ 1 ಸಾವಿರ ರೂ. ಸಹಾಯಧನ: ಸಿಎಂ ಘೋಷಣೆ

ಕೋವಿಡ್-19 ಸೋಂಕಿನಿಂದ ಬೀದಿ ಬದಿಯ ವ್ಯಾಪಾರಿಗಳು ತೊಂದರೆಯಲ್ಲಿದ್ದಾರೆ. ಹಿಂದಿನ ವರ್ಷ ಬಡವರ ಬಂಧು ಯೋಜನೆಯಡಿ 15,720 ಜನರಿಗೆ ನೀಡಲಾಗಿದ್ದ 9.10 ಕೋಟಿ ಸಾಲವನ್ನು, ಮತ್ತು ಪ್ರಸ್ತುತ ಆರ್ಥಿಕ ವರ್ಷದಲ್ಲಿ 19 ಸಾವಿರ ಜನರಿಗೆ ನೀಡಿದ್ದ 5.16 ಕೋಟಿ ರೂ. ಸಾಲ ಸೇರಿ ಒಟ್ಟು 13.20 ಕೋಟಿ ರೂಪಾಯಿಗಳನ್ನು ಮನ್ನಾ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

cm bs yeddyurappa
ಕೊರೊನಾ ಎಫೆಕ್ಟ್ : ಬಡವರ ಬಂಧು ಯೋಜನೆಯಡಿ ಸಾಲಮನ್ನಾ
author img

By

Published : Mar 24, 2020, 6:10 PM IST

ಬೆಂಗಳೂರು: ಕೊರೊನಾ ವೈರಾಣು ಹಿನ್ನೆಲೆಯಲ್ಲಿ ಬಡವರ ಬಂಧು ಯೋಜನೆಯ ಸಾಲಮನ್ನಾ ಮತ್ತು ಕಟ್ಟಡ ಕಾರ್ಮಿಕರಿಗೆ 1 ಸಾವಿರ ರೂ. ಸಹಾಯಧನ ನೀಡುವುದು ಸೇರಿದಂತೆ ಹಲವು ವಿಶೇಷ ಪ್ಯಾಕೇಜ್‍ಗಳನ್ನು ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಇಂದು ವಿಧಾನಸಭೆಯಲ್ಲಿ ಘೋಷಿಸಿದ್ದಾರೆ.

ಬಜೆಟ್ ಅಂಗೀಕಾರದ ಸಂದರ್ಭದಲ್ಲಿ ಕೋವಿಡ್-19 ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸದನಕ್ಕೆ ಬಡವರ ಬಂಧು ಯೋಜನೆಯಡಿ ಬೀದಿ ಬದಿಯ ವ್ಯಾಪಾರಿಗಳಿಗೆ ಸಹಕಾರ ಇಲಾಖೆಯಿಂದ ನೀಡಲಾಗಿದ್ದ ಸಾಲವನ್ನು ಸರ್ಕಾರ ಮನ್ನಾ ಮಾಡಿದೆ.

ಕೋವಿಡ್-19 ಸೋಂಕಿನಿಂದ ಬೀದಿ ಬದಿಯ ವ್ಯಾಪಾರಿಗಳು ತೊಂದರೆಯಲ್ಲಿದ್ದಾರೆ. ಹಿಂದಿನ ವರ್ಷ ಬಡವರ ಬಂಧು ಯೋಜನೆಯಡಿ 15,720 ಜನರಿಗೆ ನೀಡಲಾಗಿದ್ದ 9.10 ಕೋಟಿ ಸಾಲವನ್ನು ಮತ್ತು ಪ್ರಸ್ತುತ ಆರ್ಥಿಕ ವರ್ಷದಲ್ಲಿ 19 ಸಾವಿರ ಜನರಿಗೆ ನೀಡಿದ್ದ 5.16 ಕೋಟಿ ರೂ. ಸಾಲ ಸೇರಿ ಒಟ್ಟು 13.20 ಕೋಟಿ ರೂಪಾಯಿಗಳನ್ನು ಮನ್ನಾ ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಬಡ ಕುಟುಂಬಗಳಿಗೆ 2 ತಿಂಗಳ ಸಾಮಾಜಿಕ ಭದ್ರತಾ ಹಣವನ್ನಾಗಿ ತಲಾ 10 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ನೀಡಲಾಗುತ್ತಿದೆ. ನರೇಗಾ ಯೋಜನೆಯಡಿ ನೋಂದಾಯಿಸಿಕೊಂಡಿರುವವರಿಗೂ ಮುಂಗಡ ಹಣ ನೀಡಲಾಗುತ್ತಿದೆ. ಬಿಪಿಎಲ್ ಕಾರ್ಡ್‍ದಾರರಿಗೆ 2 ತಿಂಗಳ ಪಡಿತರ ಧಾನ್ಯಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗುವುದು. ರಾಜ್ಯದಲ್ಲಿರುವ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ಪ್ರತಿ ವ್ಯಕ್ತಿಗೆ ತಲಾ ಒಂದು ಸಾವಿರ ರೂ. ಸಹಾಯ ಧನ ನೀಡಲಾಗುವುದು ಎಂದು ತಿಳಿಸಿದರು.

ಕಳೆದ ತಿಂಗಳಿನಲ್ಲೇ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಆಗ ನಾವು ತಲೆ ಕೆಡಿಸಿಕೊಂಡಿರಲಿಲ್ಲ. ಹಾಗಂತ ನಿರ್ಲಕ್ಷ್ಯವನ್ನು ಮಾಡಿರಲಿಲ್ಲ. ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೆವು. ದೇಶದಲ್ಲೇ ಮೊದಲ ಸಾವಿನ ಪ್ರಕರಣ ಕರ್ನಾಟಕದಲ್ಲೇ ವರದಿಯಾಗಿದೆ. ತಕ್ಷಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ 200 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಿಎಂ ಹೇಳಿದರು.

ಇದು ನಮಗೆ ಪರೀಕ್ಷೆಯ ಕಾಲ. ನಾವೀಗ ಎರಡನೇ ಹಂತದಲ್ಲಿದ್ದೇವೆ, ಮೂರು ಮತ್ತು ನಾಲ್ಕನೇ ಹಂತಕ್ಕೆ ಹೋಗಲು ಅವಕಾಶ ನೀಡಬಾರದು. ದೇವರ ದಯೆಯಿಂದ ಸೋಂಕು ಹೆಚ್ಚಾಗಿ ಹರಡುವುದನ್ನು ನಿಯಂತ್ರಿಸಿದ್ದೇವೆ. ಕರ್ನಾಟಕ ಸರ್ಕಾರ ತೆಗೆದುಕೊಂಡ ಕ್ರಮಗಳಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಜನ ಸಾಮಾನ್ಯರಿಗೆ ಸೋಂಕು ಹೆಚ್ಚಾಗಿ ಹರಡದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬಿಎಸ್​ವೈ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.