ETV Bharat / state

ಯಲಹಂಕದಲ್ಲಿ ಮಗುವಿಗೆ ಜನ್ಮ ನೀಡಿದ ಕೊರೊನಾ‌ ಸೋಂಕಿತೆ: ನವಜಾತ ಶಿಶು ಸ್ಥಿತಿ ಹೇಗಿದೆ?

author img

By

Published : Jun 3, 2020, 12:25 PM IST

ಕೊರೊನಾ ಸೋಂಕಿತೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿರುವ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ತಾಯಿಗೆ ಕೊರೊನಾ ಪಾಸಿಟಿವ್​ ಇದ್ದರೂ ಸಹ ಮಹಾಮಾರಿ ಸೋಂಕು ನವಜಾತ ಶಿಶುವಿಗೆ ತಗುಲಿಲ್ಲ ಎಂಬುದು ಖುಷಿಯ ವಿಚಾರ.

Coronavirus patient gives birth, Coronavirus patient gives birth to baby boy, Bangalore Coronavirus patient gives birth news, ಮಗುವಿಗೆ ಜನ್ಮ ನೀಡಿದ ಕೊರೊನಾ‌ ಸೋಂಕಿತೆ, ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ‌ ಸೋಂಕಿತೆ, ಬೆಂಗಳೂರಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ‌ ಸೋಂಕಿತೆ, ಬೆಂಗಳೂರು ಗಂಡು ಮಗುವಿಗೆ ಜನ್ಮ ನೀಡಿದ ಸುದ್ದಿ,
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೊನಾ ವೈರಸ್ ಎಲ್ಲ ವಯೋಮಾನದವರಿಗೂ ಹರಡುವುದು ಗೊತ್ತಿರುವ ವಿಷಯ. ಅದರಲ್ಲೂ ಗರ್ಭಿಣಿಯರಿಗೆ ಬಹುಬೇಗ ಹರಡುವ ಕೊರೊನಾ ಹೆಚ್ಚು ಅಪಾಯ ತಂದಿಟ್ಟಿರುತ್ತೆ. ಆದ್ರೆ ಕೊರೊನಾ ಸೋಂಕಿತೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಯಲಹಂಕದ ಮಿನಿವಿಧಾನಸೌಧದ ಬಳಿಯಿರುವ ಸುಗ್ಗಪ್ಪ ಲೇಔಟ್​ನ ನಿವಾಸಿಯೊಬ್ಬರು ಗರ್ಭಿಣಿಯಾಗಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಗರ್ಭಿಣಿಯಾಗಿದ್ದ ಕಾರಣಕ್ಕೆ ಸಾಕಷ್ಟು ಆತಂಕ ಮನೆ ಮಾಡಿತ್ತು. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಗರ್ಭಿಣಿಗೆ ಹೆರಿಗೆ ಆಗಿದೆ. ಇಂದು ಗಂಡು ಮಗು ಜನಿಸಿದ್ದು, ಅದು 3.6 ಕೆ ಜಿ ತೂಕವಿದೆ. ನವಜಾತ ಶಿಸು ಆರೋಗ್ಯವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ತಾಯಿಯಿಂದ ಮಗುವಿಗೆ ಸೋಂಕು ಹರಡಿದರೆ ಅನ್ನೋ ಭಯವಿತ್ತು. ಆದರೆ ಮಗುವಿಗೆ ಸೋಂಕು ಹರಡಿಲ್ಲ ಅನ್ನೋ ಸಂತಸ ವೈದ್ಯರು ಹಾಗೂ ಕುಟುಂಬಸ್ಥರಲ್ಲಿ ಮನೆ ಮಾಡಿದೆ.

ಸದ್ಯ ತಾಯಿಗೆ ಸೋಂಕು ಇದ್ದರೂ ರೋಗದ ಲಕ್ಷಣಗಳು ಇರಲಿಲ್ಲ. ಹೀಗಾಗಿ ತಾಯಿ ಕೂಡ ಬೇಗ ಗುಣಮುಖರಾಗಲಿದ್ದಾರೆ ಅಂತಿದ್ದಾರೆ ವೈದ್ಯರು. ಇನ್ನು ಸಿಸೆರಿಯನ್ ಮಾಡಿ ಮಗುವಿಗೆ ಸೋಂಕು ಹರಡದಂತೆ ವೈದ್ಯರು ಎಚ್ಚರಿಕೆ ವಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.