ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢವಾದ ಬೆನ್ನಲ್ಲೇ ಸಿಎಂ ಪುತ್ರಿ ಪದ್ಮಾವತಿಗೆ ಕೋವಿಡ್-19 ವಕ್ಕರಿಸಿದೆ.
ಬಿಎಸ್ವೈಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಅವರ ಕುಟುಂಬ ಸದಸ್ಯರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈಗ ಸಿಎಂ ಪುತ್ರಿಗೆ ಸೋಂಕು ತಗುಲಿದ್ದು, ಅವರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೇರಿ ನಿವಾಸದಲ್ಲಿ ಇರುವ ಎಲ್ಲರನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ.
ಅದರಲ್ಲಿ ಸಿಎಂ ಪುತ್ರ ಹಾಗೂ ಪುತ್ರಿಯೂ ಸೇರಿದ್ದು ಪುತ್ರ ಬಿ.ವೈ ವಿಜಯೇಂದ್ರ ವರದಿ ನೆಗೆಟಿವ್ ಬಂದಿದೆ. ಆದರೆ ಸಿಎಂ ಯಡಿಯೂರಪ್ಪ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಪುತ್ರಿ ಪದ್ಮಾವತಿಗೆ ಸೋಂಕು ತಗುಲಿದೆ.