ETV Bharat / entertainment

ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಕಣ್ಣೀರಿಟ್ಟ ಧನರಾಜ್​​​; ಜೋರಾಯ್ತು ವಾದ-ವಿವಾದ - DHANARAJ BECOME EMOTIONAL

''ಕ್ಯಾಪ್ಟನ್ ಆಗಲು ಬೇಕಿರೋ ಅರ್ಹತೆಗಳೇನು?'' ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಹೊಸ ಪ್ರೋಮೋ ಅನಾವರಣಗೊಂಡಿದೆ.

Dhanraj
ಹನುಮಂತು ಜೊತೆ ಧನರಾಜ್ (Bigg Boss Team)
author img

By ETV Bharat Entertainment Team

Published : Nov 7, 2024, 2:19 PM IST

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಕನ್ನಡ ಕಿರುತೆರೆಯ ಪಾಪ್ಯುಲರ್​ ಪ್ರೋಗ್ರಾಮ್​​ ''ಬಿಗ್​ ಬಾಸ್​ ಸೀಸನ್​ 11''ರ ಆರನೇ ವಾರದ ಆಟ ಸಾಗುತ್ತಿದೆ. ಸ್ಪರ್ಧಿಗಳಿಗೆ ಎಂದಿನಂತೆ ಟಾಸ್ಕ್, ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಕೊಡಲಾಗಿದೆ. ಅಭಿಪ್ರಾಯಗಳನ್ನು ಸ್ವೀಕರಿಸದ ಮನಸ್ಥಿತಿಯಲ್ಲೂ ಸ್ಪರ್ಧಿಗಳಿದ್ದು ಕಿರುಚಾಟ, ವಾದ-ವಿವಾದಗಳ ಜೊತೆಗೆ ಭಾವನಾತ್ಮಕವಾಗಿಯೂ ಕುಗ್ಗಿದ ಕ್ಷಣಗಳಿಗೆ ಬಿಗ್​ ಬಾಸ್​​ ಮನೆ ಸಾಕ್ಷಿಯಾಗಿದೆ.

''ಕ್ಯಾಪ್ಟನ್ ಆಗಲು ಬೇಕಿರೋ ಅರ್ಹತೆಗಳೇನು?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಬಿಗ್​ ಬಾಸ್​​ ಪ್ರೋಮೋ ರಿಲೀಸ್ ಆಗಿದೆ. ಕ್ಯಾಪ್ಟನ್​ ಆಗಲು ಯಾರು ಅರ್ಹರಲ್ಲ ಎಂಬುದನ್ನು ಇಲ್ಲಿ ಹೇಳಬೇಕಾಗಿದೆ. ಚಟುವಟಿಕೆಯ ನಂತರ ಧನರಾಜ್​ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಪ್ರೋಮೋದಲ್ಲಿ, ಮನೆಯ ಇಬ್ಬರನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರಗಿಡಬೇಕು ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಅದರಂತೆ ಒಬ್ಬೊಬ್ಬರಂತೆ ಬಂದು ಇಬ್ಬರ ಹೆಸರನ್ನು ತಮ್ಮ ಕಾರಣಗಳೊಂದಿಗೆ ಸೂಚಿಸಿದ್ದಾರೆ. ಅದರಂತೆ, ಧನರಾಜ್​ ಅವರು ತ್ರಿವಿಕ್ರಮ್​ ಮತ್ತು ಅನುಷಾ ಅವರ ಹೆಸರನ್ನು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ವಾದ-ವಿವಾದಗಳು ನಡೆದಿವೆ. ನಿಮಗಿಂತ ಹೆಚ್ಚು ಅರ್ಹತೆ ನನಗಿದೆ ಎಂದು ಅನುಷಾ ತಿಳಿಸಿದ್ದಾರೆ. ನಂತರ, ಮೋಕ್ಷಿತಾ ಅವರ ಹೆಸರನ್ನು ಅನುಷಾ ಅವರ ಜಾಗದಲ್ಲಿರಿಸಿದ್ದಾರೆ. ಮೋಕ್ಷಿತಾ ರೂಲ್ಸ್ ಅಂತಾ ಬಂದಾಗ ಎಡವುತ್ತಾರೆ ಅಂತಾ ನನಗನಿಸುತ್ತದೆ ಎಂದು ಧನರಾಜ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್​ ಬೆನ್ನಲ್ಲೇ ಸೂಪರ್​ ಸ್ಟಾರ್ ಶಾರುಖ್​ ಖಾನ್​ಗೂ ಕೊಲೆ ಬೆದರಿಕೆ: ಎಫ್​​ಐಆರ್​ ದಾಖಲು

ಈ ಬಗ್ಗೆ ಅಸಮಧಾನಗೊಂಡ ಮೋಕ್ಷಿತಾ, ನೆಟ್ಟಗೆ ಒಂದು ನಿರ್ಧಾರ ತೆಗೆದುಕೊಳ್ಳಲು ಬರೋದಿಲ್ಲ. ನಿಮ್ಮ ತಲೇಲಿ ಏನಾದ್ರೂ ಸೆನ್ಸ್ ಇದೆಯಾ? ಎಂದಿದ್ದಾರೆ. ಮತ್ತೊಂದೆಡೆ ಮಾತನಾಡಲು ಧೈರ್ಯನೇ ಇಲ್ಲ ಆ ವ್ಯಕ್ತಿಗೆ ಎಂದು ಅನುಷಾ ತಿಳಿಸಿದ್ದಾರೆ. ಹೀಗೆ, ಸ್ಪರ್ಧಿಗಳು ತಮ್ಮ ಅಸಮಾಧಾನವನ್ನು ಜೋರಾಗೇ ವ್ಯಕ್ತಪಡಿಸಿದರು. ನಂತರ ವಾಶ್​ರೂಮ್​​ ಏರಿಯಾದಲ್ಲಿ ಭಾವುಕರಾದ ಧನರಾಜ್​​, ನಾನಿನ್ನೂ ಸ್ಟ್ರಾಂಗ್​ ಆಗಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಅನಾರೋಗ್ಯ: ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್​ಕುಮಾರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.