ETV Bharat / state

ಮತ್ತೆ ಕೊರೊನಾ ಅಲೆಯ ಹೊಡೆತಕ್ಕೆ ಸಿಲುಕಲಿವೆ ಹೆರಿಗೆ ಆಸ್ಪತ್ರೆಗಳು.. ಎದುರಾಗಲಿದ್ಯಾ ಸಿಬ್ಬಂದಿ ಕೊರತೆ?

ರಾಜ್ಯದ ರಾಜಧಾನಿಯೇ ಕೊರೊನಾ ಹಾಟ್ ಸ್ಪಾಟ್ ಆಗಿದೆ. ನಿತ್ಯ 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಕ್ರಿಯ ಪ್ರಕರಣಗಳೇ 2 ಲಕ್ಷದ ಸನಿಹದಲ್ಲಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಬರುವ ದಿನಗಳಲ್ಲಿ ಹೆರಿಗೆ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಎದುರಾಗಲಿದೆ ಎನ್ನಲಾಗುತ್ತಿದೆ.

corona
ಕೊರೊನಾ
author img

By

Published : Apr 27, 2021, 10:59 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಜೋರಾಗಿದ್ದು, ದಿನೇ‌ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸೋಂಕು ಹೆಚ್ಚಾಗುತ್ತಿರುವ ಕಾರಣಕ್ಕೆ ಬಹುಪಾಲು ಆಸ್ಪತ್ರೆಗಳನ್ನ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಸರಿಯಾದ ಸಮಯಕ್ಕೆ ಬೆಡ್ ಸಿಗದೇ ಈಗಾಗಲೇ ಸೋಂಕಿನ ಲಕ್ಷಣ ಕಡಿಮೆ ಇರುವವರು, ಲಕ್ಷಣ ಇಲ್ಲದವರನ್ನು ಹೋಂ ಐಸೋಲೇಷನ್‌ ಹಾಗೂ ಕೋವಿಡ್ ಕೇರ್ ಸೆಂಟರ್​ಗೆ ರವಾನೆ‌ ಮಾಡಲಾಗುತ್ತಿದೆ.

ಇತ್ತ‌ 2ನೇ ಅಲೆಯ ಹೊಡೆತಕ್ಕೆ ಹೆರಿಗೆ ಆಸ್ಪತ್ರೆಗಳು ಸಿಲುಕಿದ್ದು, ಸಿಬ್ಬಂದಿ ಕೊರತೆಯನ್ನ ಎದುರಿಸಲಿವೆ. ಒಂದು ಕಡೆ ಸಿಬ್ಬಂದಿಗೂ ಸೋಂಕು ತಗುಲುತ್ತಿದ್ದು, ಸೋಂಕು ತಗುಲಿದ ಗರ್ಭಿಣಿಯರನ್ನ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿದೆ.‌ ನಗರದ ವಾಣಿವಿಲಾಸ್ ಆಸ್ಪತ್ರೆಯು ನಾನ್ ಕೋವಿಡ್ ಆಸ್ಪತ್ರೆಯನ್ನಾಗಿ ಉಳಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗುವ ಪ್ರತಿ ಗರ್ಭಿಣಿಯರಿಗೆ ಮೊದಲು ಕೋವಿಡ್ ಪರೀಕ್ಷೆಯನ್ನ ಮಾಡಲಾಗುತ್ತೆ.‌ ಱಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದರೆ ವಾಣಿವಿಲಾಸ್ ಆಸ್ಪತ್ರೆ ಪಕ್ಕ‌ದ ವಿಕ್ಟೋರಿಯಾ ಆಸ್ಪತ್ರೆ ಅಥವಾ ಶಿವಾಜಿನಗರದ ಗೋಷಲ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಇತ್ತ ಹೆರಿಗೆ ಆದ ಬಳಿಕ ಪಾಸಿಟಿವ್ ಅಂತ ಬಂದರೆ ಅಂತವರಿಗಾಗಿ ಐಸೋಲೇಷನ್ ವಾರ್ಡ್​ನ್ನು ಮಾಡಲಾಗಿದೆ ಎಂದು ಡಾ. ಸಂತೋಷ್ ಮಾಹಿತಿ ನೀಡಿದ್ದಾರೆ.‌

ಸ್ಟಾಫ್​ ನರ್ಸ್​ಗಳಿಗೂ ಪಾಸಿಟಿವ್

ಸೋಂಕಿಗೆ ಕೇವಲ ಸಾಮಾನ್ಯ ಜನರಷ್ಟೇ ಅಲ್ಲದೇ ಸೋಂಕಿನ‌‌ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್​ಗಳೂ ತುತ್ತಾಗುತ್ತಿದ್ದಾರೆ.‌‌ ಚಿಕಿತ್ಸೆ ನೀಡುತ್ತಿರುವ ಬಹಳಷ್ಟು ವೈದ್ಯರು, ಸ್ಟಾಫ್​ ನರ್ಸ್​ಗಳಿಗೂ ಪಾಸಿಟಿವ್ ಬರ್ತಿದೆ. ಹೀಗಾಗಿ ತುರ್ತು ಚಿಕಿತ್ಸೆ ಬಿಟ್ಟು, ಸರ್ಜರಿ- ಸ್ತ್ರೀರೋಗ ಸೇವೆಗಳನ್ನ ನಿಲ್ಲಿಸಲಾಗಿದೆ. ಇದಕ್ಕಾಗಿ ಇದ್ದ ಕೆಲ ವಾರ್ಡ್​ಗಳನ್ನ ಬಂದ್​ ಮಾಡಲಾಗಿದೆ.

ಮುಂಬರುವ ದಿನಗಳಲ್ಲಿ ಸಂಕಷ್ಟ

ರಾಜ್ಯದ ರಾಜಧಾನಿಯೇ ಕೊರೊನಾ ಹಾಟ್ ಸ್ಪಾಟ್ ಆಗಿದ್ದು, ನಿತ್ಯ 17 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಸಕ್ರಿಯ ಪ್ರಕರಣಗಳೇ 2 ಲಕ್ಷದ ಸನಿಹದಲ್ಲಿವೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಬರುವ ದಿನಗಳಲ್ಲಿ ಖಚಿತವಾಗಿ ಸಿಬ್ಬಂದಿ ಕೊರತೆ ಎದುರಾಗಲಿದೆ ಅಂತಾರೆ ವೈದ್ಯರು. ಸಿಬ್ಬಂದಿಗೆ ಕೊರೊನಾ ದೃಢವಾದರೆ, ಅವರು 17 ದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕಾಗುತ್ತೆ. ಈ ಅವಧಿ ಮುಗಿದ ನಂತರ ಕೆಲಸಕ್ಕೆ ಹಾಜರಾಗಬೇಕಾಗುತ್ತೆ. ಹೀಗಾಗಿ ಸಿಬ್ಬಂದಿ ಕೊರತೆ ಎದುರಾದರೂ ಅಚ್ಚರಿಯಿಲ್ಲ ಅಂತಿದ್ದಾರೆ.

ಓದಿ: ರೋಗಿಗಳ ಸಮಸ್ಯೆ ಆಲಿಸದ ಖಾಸಗಿ ಆಸ್ಪತ್ರೆಗಳಿಗೆ ಸಚಿವ ಬೈರತಿ ಖಡಕ್ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.