ಬೆಂಗಳೂರು : ಅನಾವಶ್ಯಕವಾಗಿ ಓಡಾಡುತ್ತಿದ್ದ 100ಕ್ಕೂ ಹೆಚ್ಚು ವಾಹನ ಸವಾರರನ್ನು ಈಶಾನ್ಯ ವಿಭಾಗದ ಡಿಸಿಪಿ ಸಿಕೆ ಬಾಬಾ ನೇತೃತ್ವದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಓದಿ: ಕೋವಿಡ್ ಸಂಕಷ್ಟದಲ್ಲಿ ಕೈ ಹಿಡಿದ ಖಾದಿ ಮಾಸ್ಕ್.. 2 ಲಕ್ಷಕ್ಕೂ ಅಧಿಕ ಮಾಸ್ಕ್ ವಿತರಣೆ ಮಾಡಿದ ಕುಟುಂಬ
ಫ್ಲೈ ಓವರ್ ಮೇಲೆ ಕೂರಿಸಿ ತಿಳಿ ಹೇಳಿರುವ ಪೊಲೀಸರು, ಯಲಹಂಕದಲ್ಲಿ ಖಾಕಿ ಖದರ್ ತೋರಿಸುತ್ತಿದ್ದಾರೆ. ಸುಖಾ ಸುಮ್ಮನೆ ಓಡಾಡುವವರಿಗೆ ಬಿಸಿ ಮುಟ್ಟಿಸಿದರು. ನೂರಕ್ಕೂ ಹೆಚ್ಚು ವಾಹನಗಳನ್ನ ಸೀಜ್ ಮಾಡಿದರು.
ವಿಕೇಂಡ್ ಕರ್ಫ್ಯೂ ಇದ್ದರೂ ಸಾರ್ವಜನಿಕರು ಸುಖಾಸುಮ್ಮನೆ ಓಡಾಟಕ್ಕೆ ಬ್ರೇಕ್ ಹಾಕಿ, ವಾಹನ ಸವಾರರನ್ನು ಹಿಡಿದು ಫ್ಲೈ ಓವರ್ ಮೇಲೆ ಕೂರಿಸಿಕೊಂಡಿದ್ದರು.
ವಶಕ್ಕೆ ಪಡೆದ ಎಲ್ಲರಿಗೂ ಗೈಡ್ ಲೈನ್ಸ್‌ನ ಒಂದು ಕಾಪಿ ನೀಡಿ ನೀವೂ ಓದಿ, ಮನೆಯವರಿಗೂ ತಿಳಿಸಿ ಎನ್ನುವ ಸಲಹೆ ಕೂಡ ನೀಡಿದರು. ಜತೆಗೆ ಈ ರೀತಿ ಬೇಕಾಬಿಟ್ಟಿ ಓಡಾಡದಂತೆ ಎಚ್ಚರಿಕೆ ನೀಡಿದರು.