ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಈಗಾಗಲೇ ಅಪಾರ್ಟ್ಮೆಂಟ್, ಹಾಸ್ಟೆಲ್ಗಳಲ್ಲಿ ಕ್ಲಸ್ಟರ್ ಮಾದರಿಯ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಇದೀಗ ಮನೆ ಮನೆಗಳಲ್ಲಿ ಹರಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಟಿಎಂಲೇಔಟ್‌ನ ಒಂದೇ ಮನೆಯ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬಿಎಂಟಿಸಿ ಬಸ್ನಲ್ಲಿ ಸಂಚಾರ ಮಾಡಿದ್ದಕ್ಕೆ ಕೊರೊನಾ ಬಂದಿರಬಹುದು!:
ಸೋಂಕಿನ ಮೂಲದ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಮನೆಯ ಮೊದಲ ಸೋಂಕಿತ ಮಾಹಿತಿ ನೀಡಿದ್ದಾನೆ. ಮೂರ್ನಾಲ್ಕು ದಿನಗಳ ಹಿಂದೆ ಬಿಎಂಟಿಸಿ ಬಸ್ನಲ್ಲಿ ಸಂಚರಿಸಿದ್ದ. ಬಳಿಕ ಕೊರೊನಾ ಸೋಂಕು ತಗುಲಿದೆ. ಈತನಿಂದ ಮನೆ ಮಂದಿಗೆಲ್ಲ ಸೋಂಕು ಹರಡಿದೆ.
ತಾಯಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ತಾಯಿಗೆ ಸೋಂಕು ಇರುವುದು ಪತ್ತೆಯಾಗಿದೆ. ಬಳಿಕ ಮನೆ ಮಂದಿಯನ್ನ ಕೋವಿಡ್ ಟೆಸ್ಟ್ಗೆ ಒಳಪಡಿಸಿದ ಸಮಯದಲ್ಲಿ ಎಲ್ಲರಿಗೂ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಸದ್ಯ 60 ವರ್ಷದ ವೃದ್ಧೆ ಐಸಿಯುಗೆ ದಾಖಲಾಗಿದ್ದಾರೆ. ಉಳಿದ 5 ಮಂದಿ ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ. ಮನೆಯ ಕೆಳಭಾಗದಲ್ಲಿ ಡೆಂಟಲ್ ಕ್ಲಿನಿಕ್‌ಗೆ ಬೀಗ ಹಾಕಿಸಲಾಗಿದೆ. ಅಕ್ಕಪಕ್ಕದ ಮನೆಯವರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ.