ಬೆಂಗಳೂರು: ಗಂಟೆಗಟ್ಟಲೇ ಅಲೆದಾಡಿದರೂ ಆಸ್ಪತ್ರೆಯಲ್ಲಿ ಬೆಡ್ ಸಿಗದ ಪರಿಣಾಮ ಕೊರೊನಾ ಸೋಂಕಿತೆಗೆ ನಡುರಸ್ತೆಯಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ವೈದ್ಯರು ಚಿಕಿತ್ಸೆ ನೀಡಿರುವ ಘಟನೆ ನಡೆದಿದೆ.
76 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದರಿಂದ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಕ್ಕಿರಲಿಲ್ಲ. ಖಾಸಗಿ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಹಿನ್ನೆಲೆ ವೈದ್ಯರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎನ್ನಲಾಗ್ತಿದೆ.
ಇದರಿಂದ ಮನನೊಂದ ವೃದ್ಧೆಯ ಕುಟುಂಬಸ್ಥರು ಶ್ರೀರಾಮಪುರ ಮೆಟ್ರೋ ಠಾಣೆ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿದ್ದಾರೆ. ಅಂತಿಮವಾಗಿ ವೈದ್ಯರಿಗೆ ಮನವಿ ಮಾಡಿ ಸ್ಥಳಕ್ಕೆ ಕರೆಯಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಬೆಡ್ಗಳ ಅಭಾವ ಸೃಷ್ಟಿಯಾಗಿದೆ. ಇದರಿಂದ ನೂರಾರು ರೋಗಿಗಳು ಸಾಯುತ್ತಿದ್ದಾರೆ. ಈವರೆಗೆ ನಗರದಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಹಾಟ್ಸ್ಪಾಟ್ ಬೆಂಗಳೂರಲ್ಲಿ 3,000 ಸೋಂಕಿತರು ನಾಪತ್ತೆ, ಮೊಬೈಲ್ ಫೋನ್ ಸ್ವಿಚ್ಡ್ಆಫ್