ETV Bharat / state

ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ: ಶಾಸಕ ಸತೀಶ್ ರೆಡ್ಡಿ

ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯುನಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ಹೆಚ್ಚಾಗಿದೆ. ಸೋಂಕಿತರ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ ಎಂದು ಶಾಸಕ ಸತೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಸತೀಶ್ ರೆಡ್ಡಿ
ಶಾಸಕ ಸತೀಶ್ ರೆಡ್ಡಿ
author img

By

Published : Aug 11, 2020, 8:01 PM IST

ಬೆಂಗಳೂರು: ಕೊರೊನಾ ಸೋಂಕಿತರ ಕಾಲು ಕೈ ಕಟ್ಟಿರುವುದನ್ನು ನಾನು ನೋಡಿದ್ದೇನೆ ಎಂದು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, ಬಳಿಕ ಮಾತನಾಡಿ, ಐಸಿಯುನಲ್ಲಿ ಕೊರೊನಾ ಸೋಂಕಿತರು ಸಾಯುತ್ತಿರುವುದು ಹೆಚ್ಚಾಗಿದೆ. ಸೋಂಕಿತರ ಕೈ ಕಾಲು ಕಟ್ಟಿ ಹಾಕಲಾಗುತ್ತಿದೆ. ಡಾಕ್ಟರ್ಸ್​​ ಕಡಿಮೆ ಇದ್ದು, ಪೇಶೆಂಟ್​​ಗಳು ಎದ್ದು ಓಡಾಡುತ್ತಾರೆ ಎಂದು ಕೈಕಾಲು ಕಟ್ಟಿಹಾಕುತ್ತಿದ್ದಾರೆ. ನಮ್ಮ ತಂದೆಯನ್ನ ಸೇರಿಸಿದ್ದಾಗ ನಾನೇ ನೋಡಿದ್ದೇನೆ. ಇದನ್ನೇ ಸಭೆಯಲ್ಲಿ ತಿಳಿಸಿದ್ದೇನೆ ಎಂದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಗಂಭೀರ ಆರೋಪ

ಇದೇ ವೇಳೆ ಮಾತನಾಡಿದ ಸಾರ್ವಜನಿಕ ಲೆಕ್ಕ‌ಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆದಿದೆ. ಕೆಲವು ಕಡೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲವೆಂಬ ಆರೋಪ ಇದೆ. ನಮ್ಮ ಕಮಿಟಿ ಸದಸ್ಯರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕಮಿಷನರ್​ಗೆ ಸೂಚಿಸಿದ್ದೇವೆ. ಸಿಸಿಟಿವಿ ಮೂಲಕ ರೋಗಿಯನ್ನು ಮಾನಿಟರ್ ಮಾಡಬೇಕು. ಊಟ, ತಿಂಡಿ ಟ್ರೀಟ್‌ಮೆಂಟ್ ಬಗ್ಗೆ ಸಿಸಿಟಿವಿ ಮೂಲಕ ಮಾನಿಟರ್ ಮಾಡಬೇಕು. ಬಿಐಇಸಿಯ ಕೋವಿಡ್ ಕೇರ್ ಸೆಂಟರ್​ನಲ್ಲಿ 15 ಜನಕ್ಕೆ ಒಂದು ಟಾಯ್ಲೆಟ್ ಮಾಡಿದ್ದಾರೆ. ಇದು ಸರಿಯಲ್ಲ,ಮೊದಲು 10 ಜನರಿಗೆ ಇತ್ತು ಎಂದು ವಿವರಿಸಿದರು.

ಕೊರೊನಾ ಸೋಂಕಿತರಿಗೆ ಕೈಕಾಲು ಕಟ್ಟಿ ಚಿಕಿತ್ಸೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಮ್ಮ ಸದಸ್ಯರು ಗಮನಕ್ಕೆ ತಂದಿದ್ದಾರೆ. ಆದರೆ ಬಿಬಿಎಂಪಿ ಆಯುಕ್ತರು ಅದನ್ನು ಇಲ್ಲವೆಂದಿದ್ದಾರೆ. ಆದರೂ ನಾವು ಅವರ ಗಮನಕ್ಕೆ ತಂದಿದ್ದೇವೆ. ಇಂಥ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದೇವೆ ಎಂದರು.

ವಿಶೇಷ ಆಡಿಟ್ ಮಾಡಲು ತೀರ್ಮಾನ:

ಮೆಡಿಕಲ್ ಕಿಟ್ ಖರೀದಿ ಅಕ್ರಮ ಸಂಬಂಧ ಸ್ಪೆಷಲ್ ಆಡಿಟ್ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸಿಎಜಿಯಿಂದ ಸ್ಪೆಷಲ್ ಆಡಿಟ್ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಿಎಜಿಗೂ ಕಮಿಟಿಯ ನಿರ್ಣಯ ನೀಡಿದ್ದೇವೆ. ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಗೂ ನೀಡಿದ್ದೇವೆ ಎಂದರು.

ಸಭೆಯಲ್ಲಿ ಪ್ರಸ್ತಾಪಸಿದ ವಿಚಾರ ಏನು?:

ಸಭೆಯಲ್ಲಿ ಶಾಸಕ ಸತೀಶ್ ರೆಡ್ಡಿ ಖಾಸಗಿ ಆಸ್ಪತ್ರೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನ ಕೆಲಸ ಖಾಸಗಿ ಆಸ್ಪತ್ರೆಗಳಲ್ಲಿ ಹೀನಸ್ಥಿತಿಯಿದೆ ಸೋಂಕಿತರನ್ನು ಕೈಕಾಲು ಕಟ್ಟಿ ಚಿಕಿತ್ಸೆ ನೀಡ್ತಿದ್ದಾರೆ. ನಾನು ನಮ್ಮ ತಂದೆಯನ್ನ ಒಂದು ಆಸ್ಪತ್ರೆಗೆ ಸೇರಿಸಿದ್ದೆ. ಅಲ್ಲಿ ಇದೇ ಸ್ಥಿತಿಯಲ್ಲಿ ಆಸ್ಪತ್ರೆ ಸಿಬ್ಬಂದಿ ನೋಡಿಕೊಳ್ತಿದ್ರು. ಬೇರೆ ಕಡೆ ಹೋಗ್ತಾರೆಂಬ ಕಾರಣಕ್ಕೆ ಹೀಗೆ ಮಾಡ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ವಿಷಯ ಪ್ರಸ್ತಾಪಿಸಿದರು.

ಬೀದರ್​ನಲ್ಲೂ ಇಂತದ್ದೇ ಪರಿಸ್ಥಿತಿ ಕೇಳಿದ್ದೇನೆ. ಅದರ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿಗೆ ತರಾಟೆ ತೆಗೆದುಕೊಂಡಿದ್ದೆ. ಕೆಲವು ಕಡೆ ಇದೇ ರೀತಿ ಆಗುತ್ತಿರೋದು ನಿಜ ಎಂದು ಸತೀಶ್ ರೆಡ್ಡಿ ಪ್ರಸ್ತಾಪಕ್ಕೆ ಕಾಂಗ್ರೆಸ್​ನ ಈಶ್ವರ್ ಖಂಡ್ರೆ ಧ್ವನಿಗೂಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.