ETV Bharat / state

ಕೊರೊನಾ ಗಂಭೀರ ಸಮಸ್ಯೆ, ಆತಂಕ ಬೇಡ: ಕೇಂದ್ರ ಸಚಿವ ಜೋಶಿ

ಲೋಕಸಭಾ ಅಧಿವೇಶನ ನಿಗದಿತ ಅವಧಿಯವರೆಗೂ ನಡೆಯಲಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಲೋಕಸಭಾ ಅಧಿವೇಶನ ಮುಂದೂಡಿಕೆ ಇಲ್ಲ ಎಂದು ಸಚಿವ ಜೋಶಿ ಸ್ಪಷ್ಟಪಡಿಸಿದ್ದಾರೆ.

author img

By

Published : Mar 14, 2020, 6:25 PM IST

Corona is a serious problem, but no worries: Union Minister Prahlad Joshi
ಕೊರೋನಾ ಗಂಭೀರ ಸಮಸ್ಯೆಯಾಗಿದ್ದರೂ, ಆತಂಕ ಬೇಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಂಗಳೂರು : ಕೊರೋನಾ ಗಂಭೀರ ಸಮಸ್ಯೆ ಆಗಿದ್ದರೂ ಜನ ಆತಂಕಕ್ಕೊಳಗಾಗೋದು ಬೇಡ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಬಂಧ ಪ್ರಧಾನಿಗಳು ಪ್ರತ್ಯೇಕ ಸೆಲ್ ರಚಿಸಿ ತಾವೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಜನ ಹೆಚ್ಚು ಜಾಗೃತರಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಈಗಾಗಲೇ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಲೋಕಸಭೆ ಅಥವಾ ವಿಧಾನಸಭೆ ಅಧಿವೇಶನದಲ್ಲೂ ಸ್ವಚ್ಛತೆಗೆ ಕೈಗೊಳ್ಳಬೇಕಾದ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು. ಲೋಕಸಭಾ ಅಧಿವೇಶನ ನಿಗದಿತ ಅವಧಿಯವರೆಗೂ ನಡೆಯಲಿದೆ. ಯಾವುದೇ ಕಾರಣಕ್ಕೂ ಲೋಕಸಭಾ ಅಧಿವೇಶನ ಮುಂದೂಡಿಕೆ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಕೊರೊನಾ ವೈರಸ್ ಕುರಿತಂತೆ ಬಿಜೆಪಿ ನಾಯಕರ ಪ್ರತಿಕ್ರಿಯೆ..

ಜನರೇ ಸೇರಬಾರದು ಎಂದು ಎಲ್ಲೂ ಹೇಳಿಲ್ಲ: ದೊಡ್ಡ ಸಮಾರಂಭಗಳು ಹೆಚ್ಚು ಹೆಚ್ಚು ಜನ ಸೇರೋ ಕಾರ್ಯಕ್ರಮಗಳನ್ನು ನಡೆಸಬಾರದು ಅಂತ ಸರ್ಕಾರ ಹೇಳಿದೆ. ಇದು ಮುನ್ನೆಚ್ಚರಿಕೆ ಕ್ರಮವಾಗಿ ಹೇಳಿರೋ ವಿಷಯ. ಹಾಗಂತ ಜನರೇ ಸೇರಬಾರದು, ಮನುಷ್ಯ-ಮನುಷ್ಯರನ್ನೇ ಮಾತನಾಡಿಸಬಾರದು ಅಂತಾ ಎಲ್ಲೂ‌ ಹೇಳಿಲ್ಲ ಅಂತಾ ಇದೇ ವೇಳೆ ಸಚಿವ ಸಿ ಟಿ ರವಿ ತಿಳಿಸಿದರು.

ಯಾರೂ ಆತಂಕಕ್ಕೊಳಗಾಗೋದು ಬೇಡ. ಎಲ್ಲಾ ಕ್ಷೇತ್ರಗಳಂತೆ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ. ಕೋಳಿ ತಿನ್ನೋದಕ್ಕೂ ಈ ಕಾಯಿಲೆಗೂ ಯಾವುದೇ ಸಂಬಂಧವಿಲ್ಲ. ಯಾರೋ ಹಬ್ಬಿಸಿರೋ ಸುದ್ದಿಗೆ ಅದ್ಯತೆ ಬಡಿ. ಇದ್ರಿಂದ ಕೋಳಿ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಬೇಯಿಸಿ ತಿನ್ನೋ ಯಾವುದೇ ವಸ್ತುವಿನಿಂದ ಕಾಯಿಲೆ ಬರಲ್ಲ‌. ಹೀಗಾಗಿ ಸ್ವಚ್ಛತೆಯತ್ತ ಗಮಹರಿಸಿ ಎಂದು ಸಿ‌ ಟಿ ರವಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.