ಬೆಂಗಳೂರು: ನಗರದಲ್ಲಿಂದು 1,315 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,702ಕ್ಕೆ ಏರಿಕೆಯಾಗಿದ್ದು, ಇಪ್ಪತ್ತು ಸಾವಿರ ಸೋಂಕಿತರ ಗಡಿ ಸಮೀಪಿಸುತ್ತಿದೆ.
ಇಂದು 283 ಮಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 4,328 ಮಂದಿ ಗುಣಮುಖರಾಗಿದ್ದಾರೆ. 15,052 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿರುವವರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.
ಜೂನ್ ತಿಂಗಳಲ್ಲಿ ಮೃತಪಟ್ಟವರ ವಿವರ ಇಂದು ಕೊಡಲಾಗಿದ್ದು, ಮೃತಪಟ್ಟವರ ಸಂಖ್ಯೆ 321ಕ್ಕೆ ಏರಿಕೆಯಾಗಿದೆ.
ಅಚ್ಚರಿ ತರಿಸಿದ ಸೋಂಕು ರಹಿತ ರೋಗಿಗಳ ಮರಣ
ಜೂನ್ ತಿಂಗಳಲ್ಲಿ ಮೃತಪಟ್ಟ 38 ಜನರ ವಿವರವನ್ನು ಇಂದಿನ ಹೆಲ್ತ್ ಬುಲೆಟಿನ್ನಲ್ಲಿ ನೀಡಲಾಗಿದೆ. ಇದರಲ್ಲಿ 12 ಮಂದಿಗೆ ಸೋಂಕಿನ ಲಕ್ಷಣಗಳೇ ಇಲ್ಲದ ಸೋಂಕಿತರಾಗಿದ್ದಾರೆ. ಎ-ಸಿಂಪ್ಟೊಮ್ಯಾಟಿಕ್ ರೋಗಿಗಳಿಗೆ ಹೆಚ್ಚಿನ ಹಾನಿಯಾಗುವುದಿಲ್ಲ ಎಂದು ಹೇಳುತ್ತಾ ಬಂದಿದ್ದರೂ, ಹನ್ನೆರಡು ಮಂದಿ, ಇತರೆ ರೋಗಗಳ ಸಂಬಂಧದಿಂದ ಮೃತಪಟ್ಟಿದ್ದಾರೆ.
ಕೆಲವರಿಗೆ ಎ-ಸಿಂಪ್ಟೊಮ್ಯಾಟಿಕ್ ಕೊರೊನಾ ಖಾಯಿಲೆ ಜೊತೆಗೆ ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಖಾಯಿಲೆ, ಮೂತ್ರಪಿಂಡ ಸಂಬಂಧಿತ ಸಮಸ್ಯೆಯೂ ಇತ್ತು. ಆದರೆ ಮೂವರಿಗೆ ಕೇವಲ ಎ-ಸಿಂಪ್ಟೊಮ್ಯಾಟಿಕ್ ಕೋವಿಡ್ ಎಂದು ಮಾತ್ರ ವರದಿ ನೀಡಲಾಗಿದೆ. ಅಷ್ಟಕ್ಕೇ ಮರಣ ಸಂಭವಿಸಿತಾ ಎಂಬ ಆತಂಕಕ್ಕೆ ಕಾರಣವಾಗಿದೆ.