ETV Bharat / state

ರಾಜಧಾನಿಯಲ್ಲಿ ಮತ್ತೊಮ್ಮೆ ಕೊರೊನಾ ಹೈ ಅಲರ್ಟ್; ಏರ್​​​ಪೋರ್ಟ್​​ನಲ್ಲಿ ಕಟ್ಟೆಚ್ಚರ - ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ

ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

corona-high-alert-again-in-bengaluru-at-the-airport
ಏರ್​​​ಪೋರ್ಟ್ ನಲ್ಲಿ ಕಟ್ಟೆಚ್ಚರ
author img

By

Published : Feb 16, 2021, 10:19 PM IST

ಬೆಂಗಳೂರು: ರಾಜಧಾನಿಯಲ್ಲಿ ಮತ್ತೊಮ್ಮೆ ಕೊರೊನಾ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೊಸ ರೂಪಾಂತರಿ ವೈರಸ್ ಬಗ್ಗೆ ಏರ್​​ಪೋರ್ಟ್​​ನಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.‌

ಓದಿ: ರಾಜ್ಯದಲ್ಲಿಂದು 438 ಮಂದಿಗೆ ಸೋಂಕು.. 6 ಮಂದಿ ಸಾವು..

ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನೂತನ ಕೊರೊನಾ ರೂಪಾಂತರಿ ವೈರಸ್ ಪತ್ತೆ ಹಿನ್ನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಲಾಗುತ್ತಿದೆ.

corona-high-alert-again-in-bengaluru-at-the-airport
ಏರ್​​​ಪೋರ್ಟ್ ನಲ್ಲಿ ಕಟ್ಟೆಚ್ಚರ

ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾ ಪ್ರಯಾಣದ ಹಿನ್ನೆಲೆ ಇರುವವರಿಗೆಲ್ಲಾ ಆರ್​ಟಿಪಿಸಿಆರ್​​ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಅವರ ಬಳಿ‌ ನೆಗೆಟಿವ್ ರಿಪೋರ್ಟ್ ಇದ್ದರೂ ಇಲ್ಲಿಗೆ ಬಂದ ನಂತರ ಕಡ್ಡಾಯವಾಗಿ ಆರ್​ಟಿಪಿಸಿಆರ್​​ ಮಾಡಿಸಲೇಬೇಕು. ಪಾಸಿಟಿವ್ ಬಂದವರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದ್ದು, ಎಲ್ಲಾ ಪಾಸಿಟಿವ್ ಸ್ಯಾಂಪಲ್ ಗಳನ್ನು ನಿಮ್ಹಾನ್ಸ್​​​ಗೆ ಜೆನೆಟಿಕ್ ಪರೀಕ್ಷೆಗೆ ರವಾನೆ ಮಾಡುವುದು.

ನೆಗೆಟಿವ್ ಬಂದವರು 14 ದಿನ ಹೋಮ್ ಕ್ವಾರಂಟೈನ್ ಇರಬೇಕು. ಅವರಿಗೂ ಏಳನೇ ದಿನ ಮತ್ತೊಮ್ಮೆ ಆರ್​ಟಿಪಿಸಿಆರ್​​ ಪರೀಕ್ಷೆ ಮಾಡಲಾಗುವುದು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರೋಗ್ಯ ಇಲಾಖೆ‌ಯಿಂದ ಆದೇಶ ಹೊರಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.