ಬೆಂಗಳೂರು : ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಹೋಮ್ ಗಾರ್ಡ್ಗೆ ಕೊರೊನಾ ಸೋಂಕು ತಗುಲಿದೆ.
ನಗರ ಪೊಲೀಸ್ ಆಯುಕ್ತರ ಕಚೇರಿಯ ಪ್ರವೇಶ ದ್ವಾರದಲ್ಲಿ ಹೋಮ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 35 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿದ್ದರಿಂದ ಇವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತೆಯ ಸಂಪರ್ಕದಲ್ಲಿದ್ದ ಹಾಗೂ ಆಕೆಯ ಜೊತೆ ಕರ್ತವ್ಯ ನಿರ್ವಹಿಸುತ್ತಿದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಕಮಿಷನರ್ ಕಚೇರಿಯಲ್ಲಿ 13 ಕೊರೊನಾ ಕೇಸ್ ಪತ್ತೆಯಾದಂತಾಗಿದೆ.
ಕಚೇರಿಯಲ್ಲಿ ನಗರ ಆಯುಕ್ತ ಭಾಸ್ಕರ್ ರಾವ್ ಸೇರಿ ಪೂರ್ವ, ಪಶ್ಚಿಮ ಹೆಚ್ಚುವರಿ ಆಯುಕ್ತರು, ಸಿಸಿಬಿ ಆಯುಕ್ತ ಹಾಗೂ ಡಿಸಿಪಿಗಳು ಕಾರ್ಯ ನಿರ್ವಹಹಿಸುತ್ತಿದ್ದಾರೆ. ಕಚೇರಿಯಲ್ಲಿ ನಮ್ಮ100 ಹಾಗೂ ಕಮಾಂಡ್ ಸೆಂಟರ್ ಬಿಟ್ಟು ಇತರೆ ಕಚೇರಿಯನ್ನ ಸೀಲ್ಡೌನ್ ಮಾಡಲಾಗಿದೆ. ಹೊರಗಿನಿಂದ ಸಾರ್ವಜನಿಕರು ಹಾಗೂ ಇತರೆ ಠಾಣಾ ಸಿಬ್ಬಂದಿ ಬಾರದಂತೆ ಕಡಿವಾಣ ಹಾಕಲಾಗಿದೆ.